10.29.2008

ರಾಜಕೀಯದ ನೀತಿಯಲ್ಲಿ

ಇಂದು ಜನತೆಯನ್ನು ಲೂಟಿ ಮಾಡಲು ಬಂಡವಾಳಶಾಹಿಯ ರಾಜಕೀಯ ಪಕ್ಷಗಳು ಕೆಲಸ ಮಾಡುತಿದೆ ಮತ್ತು ಮತ್ತು ಹಿಂದುಳಿದವರನ್ನು , ಸಾಮಾನ್ಯ ಜನತೆಯನ್ನು ಕಡೆಗಣಿಸುತ್ತಿದೆ. ಸ್ವತಂತ್ರ ಬಂದು ಅರವತ್ತೆರಡು ವರ್ಷವಾಗುತ್ತ ಬಂದರು ಇಂದಿಗೂ ಸಹ ದೇಶದ ಎಲ್ಲ ಜನತೆಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ ಅಷ್ಟೆಯಲ್ಲದೆ ಇರುವುದಕ್ಕೆ ಮನೆ ದುಡಿಯುವುದಕ್ಕೆ ಕೆಲಸ ಇಲ್ಲದಂತಾಗಿದೆ.
ಅಧಿಕಾರಕ್ಕಾಗಿ ಹಂಬಲಿಸುವ ಪಕ್ಷಗಳು ಯಾವುದೇ ಇಂದು ನೀತಿಗಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಜನವಿರೋಧಿ ರಾಜಕೀಯ ಮಾಡುತ್ತಿದ್ದಾರೆ. ದೇಶದ ಜನತೆಯನ್ನು ಮೊಸಗೊಳಿಸುವವುರು ಇವರೇ. ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಪಕ್ಷಗಳಲ್ಲಿ ಕಾಂಗ್ರೆಸ್ ಕೂಡ ಒಂದು ಸ್ವಾತಂತ್ರದ ನಂತರ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ಪ್ರಾರಂಭದಲ್ಲಿ ಬಂಡವಾಳಶಾಹಿ ಪರವಾದ ನೀತಿಯನ್ನು ದೇಶದ ದೊಡ್ಡ ಬಂಡವಾಳದಾರರು ದೊಡ್ಡ ದೊಡ್ಡ ರಾಜಕೀಯ ಪಕ್ಷವನ್ನು ಬಳಸಿಕೊಂಡು ಸರ್ಕಾರದ ಮೂಲಕ ಬೃಹತ್ ಕೈಗಾರಿಕೆಗಳು ದುಡಿಯುವ ಶಕ್ತಿಯನ್ನು ಲೂಟಿ ಮಾಡಲು ಬೇಕಾದ ಹೊಸ ನೀತಿಯನ್ನು ತರಿಸಿದರು.
ನಂತರ ದಿನಗಳಲ್ಲಿ ನರಸಿಂಹರಾವ್ ಸರ್ಕಾರದ ಅವಧಿಯಲ್ಲಿ ಗ್ಯಾಟ್ ಒಪ್ಪಂದ ಮೂಲಕ ಜಾಗತೀಕರಣ , ಉದಾರೀಕರಣ , ಖಾಸಗೀಕರಣ ನೀತಿಯನ್ನು ತಂದು ದೇಶದ ಜತೆಯನ್ನು ಮೊಸಗೊಲಿಸಿದರು.
ಉದಾರೀಕರಣದ ಮೂಲಕ ಭಾರತ ದೇಶಕ್ಕೆ ಬಂದ ನಂತರದಲ್ಲಿ ಮುಖ್ಯವಾಗಿ ರೈತರಿಗೆ, ದುಡಿಯುವ ಜನತೆಗೆ ನಷ್ಟ ಉಂಟಾಯಿತು. ಎಲ್ಲಾ ಕ್ಷೇತ್ರಕ್ಕೂ ಕಾಲಿರಿಸಿ ದೊಡ್ಡ ಶ್ರೀಮಂತರಿಗೆ ಸಹಕಾರ ನೀಡಿತು. ವಿದೇಶಿ ಬಂಡವಾಳದಾರರು ಹೇರಳವಾಗಿ ತಮ್ಮ ಲಾಭದ ನೀತಿಯ ಭಾಗವಾಗಿ ಜನತೆಯನ್ನು ಲೂಟಿ ಮಾಡುತ್ತಿದ್ದಾರೆ.
ಇದೆ ರೀತಿಯಾಗಿ ಖಾಸಗೀಕರಣ ಮೂಲಕ ಎಲ್ಲ ಕ್ಷೇತ್ರಕ್ಕೆ ವ್ಯಾಪಿಸಿ ದೇಶದ ಸರ್ಕಾರೀ ಒಡೆತನದ ಕಾರ್ಖಾನೆಗಳನ್ನು ನಷ್ಟವೆಂದು ಹೇಳಿ ಖಾಸಗೀಕರಣ ಮಾಡುತ್ತಿದ್ದಾರೆ ಮತ್ತು ಅಂತಹ ಕಾರ್ಖಾನೆಗಳನ್ನು ಶ್ರೀಮಂತರಿಗೆ ವಿದೇಶಿ ಕಂಪನಿಗಳಿಗೆ ಮಾರುತ್ತಿದರೆ.
ಜಾಗತೀಕರಣ ಒಂದು ವಿಷ ಜಂತು ಇದ್ದ ಹಾಗೆ ಅದು ಒಟ್ಟು ಜನತೆಯನ್ನು ಬಿಡುವುದಿಲ್ಲ . ಉದ್ಯೋಗವನ್ನು ಹಾಳು ಮಾಡಿ , ರೈತರನ್ನು ಆತ್ಮಹತ್ಯೆ ದೂಡಿ, ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿದೆ ಮತ್ತು ಮಾಡುತ್ತಿದೆ.

ಕಾಮೆಂಟ್‌ಗಳಿಲ್ಲ: