ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ - ಕರ್ನಾಟಕದ ಬಿಜೆಪಿ ಸರ್ಕಾರದ ಲೂಟಿಗಳು
ಪೀಠಿಕೆ
2ಜಿ ಭ್ರಷ್ಟಾಚಾರ, ಕಾಮನ್ ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರ, ಮುಂಬೈನಲ್ಲಿ ಆದರ್ಶ ಹೌಸಿಂಗ್ ಭ್ರಷ್ಟಾಚಾರ, ಹೀಗೆ.., ಸಾರ್ವಜನಿಕರ ಹಣವನ್ನು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡುತ್ತಿರುವ ಕೆಟ್ಟ ಹಗರಣಗಳಿಗೆ ಈ ದೇಶದ ಜನ ಸಾಕ್ಷಿಯಾಗಿದ್ದಾರೆ. ಕಳೆದೊಂದು ದಶಕದಲ್ಲಿ ರೂ. 5.7 ಲಕ್ಷ ಕೋಟಿ ಹಣ ಕಾನೂನುಬಾಹಿರ ಮಾರ್ಗಗಳ ಮೂಲಕ ದೇಶದಿಂದ ಹೊರಕ್ಕೆ ಹರಿದು ಹೋಗಿದೆ ಎಂದು ಜಾಗತಿಕ ಹಣಕಾಸು ಪ್ರಾಮಾಣಿಕತೆ (Global Financial Integrity) ಎಂಬ ಅಂತರರಾಷ್ಟ್ರೀಯ ಸಂಸ್ಥೆಯ ಇತ್ತೀಚೆಗಿನ ವರದಿಯು ತಿಳಿಸಿದೆ. ವರದಿಯ ಪ್ರಕಾರ ಇದಕ್ಕೆ ಪ್ರಮುಖ ಕಾರಣಕರ್ತರೆಂದರೆ ಅತಿ ಹೆಚ್ಚು ಆಸ್ತಿ ಹೊಂದಿರುವ ವ್ಯಕ್ತಿಗಳು ಮತ್ತು ಖಾಸಗಿ ಕಂಪನಿಗಳು.

ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರ ದಿನಕ್ಕೊಂದು ರೀತಿಯಲ್ಲಿ ಅನಾವರಣಗೊಳ್ಳುತ್ತಿದೆ. ತನ್ನ ಮಕ್ಕಳು ಮತ್ತು ಸಂಬಂಧಿಕರಿಗೆ ಲಾಭಗಳಿಸಲು ತನ್ನ ಸ್ಥಾನವನ್ನು ಸಾಧನವಾಗಿ ಬಳಸಿಕೊಂಡಿರುವ ಕರ್ನಾಟಕ ಮುಖ್ಯಮಂತ್ರಿ ನಾಚಿಕೆಯಿಲ್ಲದೆ ಲೂಟಿಯಲ್ಲಿ ತೊಡಗಿದ್ದಾರೆ. ದೆಹಲಿ ನಾಯಕರು ಇವರಿಗೆ ರಕ್ಷಣೆ ನೀಡುತ್ತಿದ್ದಾರೆ. ಮಂತ್ರಿ-ಶಾಸಕರು ಭೂಕಬಳಿಕೆಯಲ್ಲಿ ನಿರತರಾಗಿದ್ದಾರೆ. ಅಕ್ರಮ ಕಬ್ಬಿಣ ಅದಿರು ಗಣಿಗಾರಿಕೆ ಮತ್ತು ಗಣಿ ಮಾಫಿಯಾಗಳಿಗೆ ಪರವಾನಗಿಗಳನ್ನು ನೀಡಿರುವ ಬೃಹತ್ ಪ್ರಮಾಣದ ಭ್ರಷ್ಟಾಚಾರದಲ್ಲಿಯೂ ಸಹ ಕರ್ನಾಟಕ ಸರ್ನಾರ ಪಾಲ್ಗೊಂಡಿದೆ.
ಇಂತಹ ಮುಗಿಲು ಮುಟ್ಟುತ್ತಿರುವ ಲೂಟಿ ತಡೆಗಟ್ಟಲು ಏನೂ ಮಾಡಲಾಗುವುದಿಲ್ಲವೇ? ಇದಕ್ಕೆ ಜವಾಬ್ದಾರರು ಯಾರು?
ವ್ಯಕ್ತಿಗಳ ಆಚೆಗಿನ ಅಂಶಗಳು :
ಇವೆಲ್ಲ ಪ್ರಕರಣಗಳಲ್ಲೂ, ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು. ಆದರೆ ಈ ಸಮಸ್ಯೆಯು ಭಾಗಿಯಾಗಿರುವ ವ್ಯಕ್ತಿಗಳ ಪರಿಧಿಯ ಆಚೆಗೂ ವ್ಯಾಪಿಸುತ್ತದೆ. ಭ್ರಷ್ಟ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ದೊಡ್ಡ ಬಂಡವಾಳಿಗರ ವಿಷಕೂಟದ ಅಧಿಕಾರ ಕೇಂದ್ರದಲ್ಲಿ ಕಾರ್ಯಚರಣೆ ನಡೆಸುತ್ತಿರುವುದನ್ನು ಈ ಹಗರಣಗಳು ಎತ್ತಿತೋರುತ್ತಿವೆ. ಹಲವು ದೊಡ್ಡ ಹೆಸರಿನ ಮತ್ತು ಕಾರ್ಪೊರೇಟ್ ಇಂಡಿಯಾದ ದಿಗ್ಗಜರು ಈ ಕಾರ್ಪೊರೇಟ್ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಈ ದುಷ್ಟ ಸಂಬಂಧ ಸಂಸದೀಯ ಪ್ರಜಾಪ್ರಭುತ್ವಕ್ಕೇ ಗಂಭೀರ ಅಪಾಯವನ್ನುಂಟು ಮಾಡಿದೆ. ಈ ಶಕ್ತಿಶಾಲಿ ಲಾಬಿಯು ಕಾರ್ಪೊರೇಟ್ ಮತ್ತು ಹಗರಣಕೋರರ ಹಿತಾಸಕ್ತಿಗಳಿಗೆ ಪೂರಕವಾಗಿ ಆಡಳಿತದ ಸಾಧನಗಳನ್ನು ಪರಿವರ್ತಿಸಿ ಖಾಸಗಿ ಹಿತಾಸಕ್ತಿಗಳನ್ನು ಈಡೇರಿಸಲು ಸಾರ್ವಜನಿಕ ನೀತಿಯನ್ನು ರೂಪಿಸುತ್ತದೆ.
ಆಘಾತಕಾರಿಯೆಂಬಂತೆ, ತಪ್ಪು ನೀತಿಗಳನ್ನು ಸಂರಕ್ಷಿಸಿದ ಮತ್ತು ಈ ಮುಂಚಿನ ಭ್ರಷ್ಟಾಚಾರದ ಹಗರಣದಲ್ಲಿ ಆರೋಪ ಪಟ್ಟಿ ಎದುರಿಸುತ್ತಿರುವ ಟೆಲಿಕಾಂ ಕಾರ್ಯದರ್ಶಿಯನ್ನೇ ಅಂಥಹ ಭ್ರಷ್ಟಾಚಾರದ ಪ್ರಕರಣಗಳನ್ನು ತಡೆಗಟ್ಟುವ ಅಧಿಕಾರವುಳ್ಳ ಮುಖ್ಯ ವಿಚಕ್ಷಣ ಆಯುಕ್ತರನ್ನಾಗಿ ಕೇಂದ್ರ ಕಾಂಗ್ರೆಸ್ ಸರ್ಕಾರ ನೇಮಿಸಿದೆ. ಅಂಥಹ ವ್ಯಕ್ತಿಯನ್ನು ಅದ್ಹೇಗೆ ಮುಖ್ಯ ವಿಚಕ್ಷಣ ಆಯುಕ್ತರನ್ನಾಗಿ ನೇಮಿಸಲು ಸಾಧ್ಯವೆಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿದೆ. ಹೀಗೆ ಭ್ರಷ್ಟತೆಯನ್ನು ಸಂರಕ್ಷಿಸಲು ಆಡಳಿತ ಸಂಸ್ಥೆಗಳನ್ನೇ ದುರುಪಯೋಗಪಡಿಸಲಾಗಿದೆ.
ದೊಡ್ಡ ಸಾರ್ವಜನಿಕ ಬ್ಯಾಂಕು ಮತ್ತು ವಿಮೆ ಅಧಿಕಾರಿಗಳು ಕಾರ್ಪೊರೇಟ್ ಗಳಿಗೆ ವಿವಿಧ ಲೆಕ್ಕಶೀರ್ಶಿಕೆಗಳಲ್ಲಿ ಸಾಲ ಸೌಲಭ್ಯ ಒದಗಿಸಲು ಖಾಸಗಿ ಕಂಪನಿಗಳು ಅವರಿಗೆ ಲಂಚವನ್ನು ನೀಡಿರುವುದು ಬೆಳಕಿಗೆ ಬಂದಿದೆ. ಕ್ಯಾಬಿನೆಟ್ ಸ್ಥಾನಮಾನವನ್ನು ಹೊಂದಿರುವ ಉನ್ನತ ಅಧಿಕಾರಿಯೂ ಆಗಿರುವ ಯೋಜನಾ ಆಯೋಗದ ಅಧ್ಯಕ್ಷ ರೂ. 1,000 ಕೋಟಿಗಳಷ್ಟು ಹಗರಣವನ್ನು ಸಣ್ಣ'ದೆಂಬಂತೆ ಕಡೆಗಣಿಸಿದ್ದಾರೆ. ಆದರೂ ಇದೇ ಅಧಿಕಾರಿಯು ಹಣಕಾಸು ಸೋರಿಕೆಯ ನೆಪವೊಡ್ಡಿ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯ ಮೇಲಿನ ವೆಚ್ಚವನ್ನು ನಿಯಂತ್ರಿಸಬಯಸಿದ್ದನು. ಭ್ರಷ್ಟಾಚಾರವು ಸಣ್ಣದು, ಆದರೆ ಬಡಜನರ ಪರವಾದ ಯೋಜನೆಗೆ ಹಣಕಾಸು ಒದಗಿಸುವುದು ದೊಡ್ಡ ಸೋರಿಕೆ!
ಈ ಹಗರಣಗಳು ಅದ್ಹೇಗೆ ಚಮಚಾ ಬಂಡವಾಳಶಾಹಿ (Crony Capitalism) ಭಾರತದಲ್ಲಿ ಬೆಳೆಯುತ್ತಿದೆಯೆಂದು ತೋರಿಸುತ್ತದೆ. ಇದರ ಪ್ರಮುಖ ವಿಚಾರವೆಂದರೆ ಎಲ್ಲ ನಿಯಮಾವಳಿಗಳು, ನಿಯಂತ್ರಣಗಳು, ಕಾನೂನುಗಳು, ನೀತಿಗಳನ್ನು ಸ್ನೇಹಿತರು, ಸಂಬಂಧಿಕರು ಅಥವಾ ಆಯ್ದ ಪಾಲುದಾರರ ಹಿತಾಸಕ್ತಿಗಳಿಗೆ ಪೂರಕವಾಗಿ ತಿರುಚಿ ಸಾರ್ವಜನಿಕ ಹಣವನ್ನು ಲೂಟಿ ಮಾಡುವುದು. ಈ ಕಿರುಹೊತ್ತಿಗೆಯಲ್ಲಿ ವಿವರಿಸಿರುವಂತೆ, ಪ್ರಧಾನಮಂತ್ರಿಯ ಮೂಗಿನ ಕೆಳಗಿರುವ ಕ್ಯಾಬಿನೆಟ್ ಸಚಿವರೇ ನೇರವಾಗಿ ಭಾಗವಹಿಸುವ ಹಂತಕ್ಕೆ ಚಮಚಾ ಬಂಡವಾಳಶಾಹಿಯು ದೊಡ್ಡ ರೀತಿಯಲ್ಲಿ ಬೆಳೆದಿದೆ. ಆದರೆ ಪ್ರಧಾನಿಗಳು ಚಮಚಾ ಬಂಡವಾಳಶಾಹಿಯ ಅಪಾಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಒಟ್ಟು ಬೆಳವಣಿಗೆಯ ವ್ಯಂಗವಾಗಿದೆ. ಅವರ ಮಾತಿನ ಅರ್ಥ ಬಂಡವಾಳಶಾಹಿ ಮತ್ತು ಅದರ ಚಮಚಾಗಳ ನಡುವೆ ವ್ಯತ್ಯಾಸವಿದೆ ಎಂಬುದು. ಚಮಚಾ ಬಂಡವಾಳಶಾಹಿಯು ಒಂದು ಅಡ್ಡದಾರಿಯೆಂದು ತಪ್ಪಾಗಿ ಅರ್ಥೈಸುವುದು ಸರಿಯಲ್ಲ. ಚಮಚಾತನವು ಬಂಡವಾಳಶಾಹಿ ಸಮಾಜಗಳ ಅಂತರ್ಗತ ಅಂಶವಾಗಿದೆ. ಕಾರ್ಪೊರೇಟ್ ಗಳಿಗಾಗಿ ಸರ್ಕಾರದ ನಿಯಂತ್ರಣಗಳನ್ನು ಕಡಿಮೆ ಮಾಡಿ ಅವು ಹೆಚ್ಚೆಚ್ಚು ಲಾಭಗಳಿಸಲು ಸಹಾಯ ಮಾಡುವ ಇಂದಿನ ನವ-ಉದಾರವಾದಿ ಆರ್ಥಿಕ ಚೌಕಟ್ಟಿನಲ್ಲಿ ಚಮಚಾತನವು ಇನ್ನೂ ತೀವ್ರಗೊಂಡಿದೆ.
2 ಜಿ ಹಗರಣ :
ಇದು ಸಾಮಾನ್ಯ ಹಗರಣವಲ್ಲ. ಹಣಕಾಸು ವಿಷಯ ಕುರಿತಂತೆ ಈ ಹಗರಣವನ್ನು ಬೇರೆ ಇನ್ನಾವುದೇ ಹಗರಣದ ಜೊತೆಗೆ ಹೋಲಿಸಲಾಗುವುದಿಲ್ಲ. ಮಹಾಲೇಖಪಾಲರು ತೋರಿಸಿರುವಂತೆ ಅದರ ಆಳ ಮತ್ತು ವಿಸ್ತಾರವನ್ನು ಪರಿಗಣಿಸೋಣ. ಈ ಹಗರಣವು ಬೇರೆಲ್ಲ ಹಗರಣಗಳನ್ನು ಒಟ್ಟಿಗೆ ಸೇರಿಸಿದರೂ ಅವುಗಳನ್ನೇ ನಾಚಿಕೆಗೀಡು ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು 2 ಜಿ ಹಗರಣ ಕುರಿತ ಅರ್ಜಿ ವಿಚಾರಣೆ ವೇಳೆ ನವೆಂಬರ್ 24ರಂದು ಈ ಮಾತುಗಳನ್ನು ಹೇಳಿದ್ದಾರೆ.
ಇಷ್ಟಕ್ಕೂ ಇಂತಹ ಹಗರಣ ಜರುಗಲು ಹೇಗೆ ಸಾಧ್ಯ? ರಾಷ್ಟ್ರದ ಜನತೆಗೆ ಉತ್ತರ ಬೇಕು. ಆದರೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಶ್ರೀಮತಿ ಸೋನಿಯಾ ಗಾಂಧಿಯವರು ನೀಡಲು ಸಿದ್ದವಿರುವ ಉತ್ತರವೆಂದರೆ ಅತ್ಯಂತ ಪ್ರಾಮಾಣಿಕರಾದ ಡಾ:ಸಿಂಗ್ರ ಪ್ರಾಮಾಣಿಕತೆಯನ್ನು ಈ ರೀತಿಯಲ್ಲಿ ಗುರಿಯಾಗಿಸಿರುವುದು ನಾಚಿಕೆಗೇಡು ಎಂಬುದು.
ಆದರೆ ಪ್ರಧಾನ ಮಂತ್ರಿ ಏಕೆ ಮೌನವಾಗಿದ್ದರು? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ನವೆಂಬರ್ 18ರಂದು ಪ್ರಧಾನಮಂತ್ರಿಯನ್ನು ಆರೋಪಿಸಿರುವಂತೆ 16 ತಿಂಗಳ ಕಾಲ ಅವರ ನಿಷ್ಕ್ರಿಯೆ ಮತ್ತು ಮೌನ ದ ಕುರಿತು ಅವರ ಪರವಾಗಿ ವಿವರಣೆ ನೀಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಉನ್ನತ ನ್ಯಾಯಾಲಯದಿಂದ ಪ್ರಧಾನಮಂತ್ರಿಗೆ ಇಂತಹ ನಿರ್ದೇಶನ ನೀಡಿರುವುದು ಸ್ವಾತಂತ್ರ್ಯಾ ನಂತರ ಭಾರತದ ಇತಿಹಾಸದಲ್ಲೇ ಮೊದಲನೆಯದು. ಕಾಂಗ್ರೆಸ್ ಅಧ್ಯಕ್ಷೆಯು ಸುಪ್ರೀಂಕೋರ್ಟ್ ನ್ನು ನಾಚಿಕೆಯಿಲ್ಲದವರು ಎಂದು ಕರೆಯುತ್ತಾರೆಯೇ?
ನಿಜಕ್ಕೂ ನಾಚಿಕೆಗೇಡು ಯಾವುದೆಂದರೆ ತಪ್ಪು ನೀತಿ-ನಿಯಮಾವಳಿಗಳ ಮೂಲಕ ಭ್ರಷ್ಟ ವ್ಯವಹಾರಗಳ ಮೂಲಕ 2 ಜಿ ಹಗರಣದಲ್ಲಿ ರೂ. 1.76 ಲಕ್ಷ ಕೋಟಿ ಸಾರ್ವಜನಿಕ ಖಜಾನೆಗೆ ನಷ್ಟ ಉಂಟು ಮಾಡಿರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಬಾಕಿ ಉಳಿದಿರುವ ಯುಪಿಎ ಸರ್ಕಾರದ ಅವಧಿ ಪೂರ್ತಿ ಇಡೀ ದೇಶದ ಜನತೆಗೆ ಕೆಜಿಯೊಂದಕ್ಕೆ ರೂ. 2ರಂತೆ ತಲಾ 35 ಕೆಜಿ ಅಕ್ಕಿಯನ್ನು ನೀಡಲು ಸಾರ್ವತ್ರಿಕ ಪಡಿತರ ವ್ಯವಸ್ಥೆಗೆ ಈ ಹಣ ಸಾಕಾಗುತ್ತಿತ್ತು. ಈ ಮೊತ್ತವು ಆರೋಗ್ಯಕ್ಕಾಗಿ ಕೇಂದ್ರದ ಆಯವ್ಯಯದಲ್ಲಿ ಮೀಸಲಿಟ್ಟಿರುವ ಮೊತ್ತದ ಎಂಟು ಪಟ್ಟು ಹೆಚ್ಚು ಮತ್ತು ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಹಣಕ್ಕಿಂತ ಕನಿಷ್ಟ 3 ಪಟ್ಟು ಹೆಚ್ಚು. ಆದರೂ ಪ್ರಧಾನಮಂತ್ರಿ ಸಾರ್ವತ್ರಿಕ ಆಹಾರ ಭದ್ರತೆಗೆ ಸಾಕಾಗುವಷ್ಟು ನಿಧಿಯಿಲ್ಲ ಎಂದು ಹೇಳುತ್ತಾರೆ. ನಿಜಕ್ಕೂ ನಾಚಿಕೆಗೇಡು ಎಂದರೆ ಇದು.
ಸಿಎಜಿ ವರದಿ :
2008 ರ ಜನವರಿಯಲ್ಲಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಡಿಯಿರುವ ದೂರ ಸಂಪರ್ಕ ಇಲಾಖೆಯ ನಾಯಕತ್ವದಲ್ಲಿದ್ದ ಡಿಎಂಕೆ ನಾಯಕ ಎ.ರಾಜಾ 120 ಹೊಸ ಪರವಾನಗಿಗಳನ್ನು ಏಕೀಕೃತ ಪ್ರವೇಶ ಸೇವೆಗಳಿಗಾಗಿ (ಗಟಿಜಿಜಜ ಂಛಿಛಿಜ ಖಜಡಿತಛಿಜ - ಯುಎಎಸ್) ನೀಡಿದರು. ಆಘಾತಕಾರಿಯೆಂದರೆ ಈ ಪರವಾನಗಿಗಳನ್ನು ಒಂದೇ ದಿನ ನೀಡಿದ್ದು. ಸಾರ್ವಜನಿಕ ಬಹಿರಂಗ ಹರಾಜು ಮಾಡದೆ ಮುಚ್ಚುಮರೆಯಾಗಿ 'ಮೊದಲು ಬಂದವರಿಗೆ ಪ್ರಥಮ ಆದ್ಯತೆ'ಯ ಆಧಾರದಲ್ಲಿ ನೀಡಲಾಗಿದೆ. ಎರಡನೆಯದಾಗಿ, ಪರವಾನಗಿಗಳಿಗೆ 2001ರ ದರದಲ್ಲಿ ಬೆಲೆ ಕಟ್ಟಲಾಗಿದೆ. ನೀತಿ ವಿಷಯಗಳು ಮತ್ತು ವಿಧಾನಗಳ ಕುರಿತು ಸಿಪಿಐ(ಎಂ) ಪಕ್ಷ ತೀವ್ರವಾಗಿ ಪ್ರಶ್ನಿಸಿತು ಮತ್ತು ಈ ಸಂಬಂಧ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿತು. ಸಂಸತ್ತಿನಲ್ಲಿ ದೊಡ್ಡ ಗದ್ದಲವೇ ಎದ್ದಿತು. ಇದರಿಂದಾಗಿ ಪರವಾನಗಿ ನೀಡುವ, ಬೆಲೆ ನಿಗಧಿಮಾಡುವ ಮತ್ತು ಸಂಬಂಧಿತ ವಿಷಯಗಳ ಕುರಿತು ಮಹಾಲೇಖಪಾಲರು ವಿಚಾರಣೆ ನಡೆಸುವುದಕ್ಕೆ ಎಡೆಮಾಡಿಕೊಟ್ಟಿತು. ಮಹಾಲೇಖಪಾಲರು ವರದಿಯನ್ನು ಈಗ ಅಂತಿಮಗೊಳಿಸಿದ್ದು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ನಾಚಿಕೆಗೇಡಿನ ಕಥೆಯನ್ನು ಒಟ್ಟಿಗೆ ನೋಡಿದಾಗ ಎಂಥ ಮಟ್ಟದ ಮೋಸ ನಡೆದಿದೆಯೆಂದು ತಿಳಿಯುತ್ತದೆ :
- 2007ರ ಮೇ ಮತ್ತು ಅಕ್ಟೋಬರ್ ನಲ್ಲಿ ರಿಯಲ್ ಎಸ್ಟೇಟ್ ಮತ್ತು ಟೆಲಿಕಾಮ್ ಯೇತರ ಕಂಪನಿಗಳು ಟೆಲಿಕಾಂ ವ್ಯವಹಾರಕ್ಕಾಗಿ ಅರ್ಜಿ ಸಲ್ಲಿಸುತ್ತವೆ.
- ಆಗಿನ ಟೆಲಿಕಾಂ ಮಂತ್ರಿ ಎ. ರಾಜಾ ಏಕಾಏಕಿ ಅಂತಿಮ (ಕಟ್ ಆಫ್) ದಿನಾಂಕಗಳನ್ನು ಘೋಷಿಸುತ್ತಾರೆ.
- ವಿಧಾನಗಳನ್ನು ಕುರಿತಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ದ 5 ರ ಪೈಕಿ 4 ವಿಧಾನಗಳನ್ನು ಅವರು ಬದಲಾಯಿಸಿದ್ದಾರೆ.
- ಅವರು ಇದರ ಉದ್ದೇಶಕ್ಕಾಗಿ ರಚಿಸಿರುವ ಕ್ಯಾಬಿನೆಟ್, ಟೆಲಿಕಾಂ ಆಯೋಗ ಮತ್ತು ಮಂತ್ರಿಗಳ ಗುಂಪನ್ನು ಕಡೆಗಣಿಸುತ್ತಾರೆ.
- ಚಂದಾದಾರರ ಒಟ್ಟು ಸಂಖ್ಯೆಯು 30ಲಕ್ಷದಿಂದ 2008ರ ಹೊತ್ತಿಗೆ 35 ಕೋಟಿ ತಲುಪಿ ದೊಡ್ಡ ಮಟ್ಟದ ಲಾಭದ ಸಾಧ್ಯತೆಯಿದ್ದರೂ ಸಹ ಅವರು 2001ರ ಮಟ್ಟದಲ್ಲಿದ್ದ ಪರವಾನಗಿ ದರಗಳನ್ನೇ ನಿಗದಿಪಡಿಸುತ್ತಾರೆ.
- 2008 ಜನವರಿ 1ರಂದು 'ಮೊದಲು ಬಂದವರಿಗೆ ಪ್ರಥಮ ಆದ್ಯತೆ' ಎಂಬ ಷರತ್ತನ್ನು ಹಣ ಪಾವತಿ ಮಾಡಿದ ದಿನಕ್ಕೆ ಅವರು ಬದಲಿಸುತ್ತಾರೆ.
- 2008 ಜನವರಿ 1 ರಂದು ಅರ್ಜಿಗಳಿಗಾಗಿ ವಿಧಾನಗಳನ್ನು ಚರ್ಚಿಸಲು ಕರೆದ ಸಭೆಯನ್ನು ಟೆಲಿಕಾಂ ಪೂರ್ಣ ಸಮಿತಿಯು ತಡೆಗಟ್ಟಿ 2008 ಜನವರಿ 15ಕ್ಕೆ ಮುಂದೂಡುತ್ತದೆ.
- ಜನವರಿ 10ರಂದು ಅಧಿಕಾರಿಗಳ ಸಲಹೆ ಧಿಕ್ಕರಿಸಿ ಅವರು 575 ಅರ್ಜಿಗಳ ಪೈಕಿ 122ಕ್ಕೆ ಪರವಾನಗಿಗಳನ್ನು ನೀಡುತ್ತಾರೆ.
- 2007 ಸೆಪ್ಟೆಂಬರ್ 25ರ ಬದಲಾಯಿಸಿದ ಅಂತಿಮ ದಿನಾಂಕದ ಆಧಾರದ ಮೇಲೆ, ಅರ್ಹ ಅರ್ಜಿದಾರರು ಕೆಲವು ಷರತ್ತುಗಳಿಗೆ ಅರ್ಹ ವಿದ್ದಲ್ಲಿ ಅವರಿಗೆ ಒಪ್ಪಿಗೆ ಪತ್ರ ನೀಡಲಾಗುವುದೆಂದು ಸಾರ್ವಜನಿಕ ಮಾಹಿತಿ ಬ್ಯೂರೋ ಮೂಲಕ ತಿಳಿಸಲಾಯಿತು. ಅಂಥಹ ಷರತ್ತು ಪೂರೈಸಲು ಕೇವಲ ಅರ್ಧ ದಿನ ಮಾತ್ರ ಅವಕಾಶ ನೀಡಲಾಯಿತು. ಕೆಲವು ಕಂಪನಿಗಳಿಗೆ ಪೂರ್ವ ಮಾಹಿತಿ ಇದ್ದದ್ದರಿಂದ ಅವರು ಬ್ಯಾಂಕ್ ಗ್ಯಾರಂಟಿ ಒಳಗೊಂಡಂತೆ ಎಲ್ಲ ಅರ್ಹತೆಗಳನ್ನು ಪೂರೈಸಿ ಪರವಾನಗಿ ಪಡೆದರು. 122 ಒಪ್ಪಿಗೆ ಪತ್ರಗಳನ್ನು ನೀಡಲಾಯಿತು.
- ಈ ಕಂಪನಿಗಳು ತಮ್ಮ ಈಕ್ವಿಟಿ ಪಾಲನ್ನು ಮಾರಾಟಮಾಡಬಾರದೆಂಬ ಷರತ್ತು ಇದ್ದಾಗ್ಯೂ ಇದಕ್ಕೆ ಅವಕಾಶ ನೀಡಲಾಯಿತು. ಅತಿ ಕಡಿಮೆ ಅವಧಿಯಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳಾದ 3 ಟೆಲಿಕಾಮ್ ಯೇತರ ಕಂಪನಿಗಳು ರೂ 20,000 ಕೋಟಿಗೂ ಅಧಿಕ ಲಾಭ ಗಳಿಸಿದವು.
ಮೇಲಿನ ಎಲ್ಲ ವಿವರಗಳು ಮಹಾಲೇಖಪಾಲರ ವರದಿಯನ್ನು ಆಧರಿಸಿವೆ. ಮೆ: ರಿಲಯನ್ಸ್ ಕಮ್ಯುನಿಕೇಷನ್ಸ್ ಲಿ. ಮತ್ತು ಮೆ: ಸ್ವಾನ್ ಟೆಲಿಕಾಂ ಲಿ.ಗಳಿಗೆ ಲಾಭತರುವಂತೆ ಕ್ರಮಕೈಗೊಳ್ಳಲಾಗಿದೆಯೆಂದು ಮಹಾಲೇಖಪಾಲರು ತಮ್ಮ ವರದಿಯ ಕಂಡಿಕೆ 4.8.1 ಮತ್ತು 4.9 ಗಳಲ್ಲಿ ನಿರ್ಧಿಷ್ಟವಾಗಿ ತಿಳಿಸಿದ್ದಾರೆ. ವಾಸ್ತವಾಂಶಗಳನ್ನು ಮರೆಮಾಚಿ, ಅಪೂರ್ಣ ಮಾಹಿತಿ ನೀಡಿರುವ ಮತ್ತು ಟೆಲಿಕಾಂ ಇಲಾಖೆಗೆ ಕಲ್ಪಿತ ದಾಖಲಾತಿಗಳನ್ನು ಸಲ್ಲಿಸಿರುವ, ಆಮೂಲಕ ಯುಎಎಸ್ ಪರವಾನಗಿ ಪಡೆಯಲು ಮೋಸದ ಮಾರ್ಗಗಳನ್ನು ಉಪಯೋಗಿಸಿ ತರಂಗಾಂತರಗಳನ್ನು ಪಡೆದಿರುವ ಕಂಪನಿಗಳಿಗೆ 85 ಪರವಾನಗಿಗಳನ್ನು ನೀಡಲಾಗಿದೆ ಎಂದು ಅದು ಹೇಳಿದೆ. ನಂಬಲಾಗದಷ್ಟು ಕಡಿಮೆ ಬೆಲೆಗೆ ಪರವಾನಗಿ ಪಡೆದಿರುವ ಈ ಮಾಲೀಕರು ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ತಮ್ಮ ಕಂಪನಿಗಳ ಷೇರುಗಳನ್ನು ಬೃಹತ್ ಮೊತ್ತಕ್ಕೆ ಭಾರತೀಯ/ವಿದೇಶಿ ಕಂಪನಿಗಳಿಗೆ ಮಾರಾಟ ಮಾಡಿದ್ದಾರೆ. ಟೆಲಿಕಾಂ ರಂಗಕ್ಕೆ ಹೊಸದಾಗಿ ಪ್ರವೇಶಿಸಿರುವ ಈ ಕಂಪನಿಗಳು ತಮ್ಮ ಷೇರು ಮಾರಾಟದಿಂದ ಗಳಿಸಿರುವ ದೊಡ್ಡ ಮೊತ್ತದ ಲಾಭವು ತರಂಗಾಂತರದ ನೈಜ ಬೆಲೆಯಾಗಿದ್ದು ಇದು ಸಾರ್ವಜನಿಕ ಖಜಾನೆ ಸೇರಬೇಕಾಗಿತ್ತು.
ಇದರ ಆಧಾರದ ಮೇಲೆ, 2007-08ರಲ್ಲಿ 122 ಹೊಸ ಏಕೀಕೃತ ಪ್ರವೇಶ ಸೇವೆ ಪರವಾನಗಿಗಳು ಮತ್ತು 35 ದ್ವಿ ತಂತ್ರಜ್ಞಾನ ಪರವಾನಗಿ (ಆಣಚಿಟ ಖಿಜಛಿಟಿಠಟರಥಿ ಐಛಿಜಟಿಛಿಜ) ಗಳ ಹಂಚಿಕೆಗಾಗಿ ಹೊಸ ಪರವಾನಗಿಗಳ ವಿತರಣೆಯಿಂದ ಸಾರ್ವಜನಿಕ ಬೊಕ್ಕಸಕ್ಕೆ ರೂ. 1.76ಲಕ್ಷ ಕೋಟಿ ನಷ್ಟವಾಗಿದೆಯೆಂದು ಮಹಾಲೇಖಪಾಲರು ತೋರಿಸಿದ್ದಾರೆ.
ಇದು ಹಿಂದೆಂದೂ ಕಂಡು ಕೇಳರಿಯದಂಥಹ ಹಗರಣ ಎಂದು ಸುಪ್ರೀಂಕೋರ್ಟ್ ಹೇಳಿರುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ದೇಶ ತಿಳಿಯಬಯಸಿರುವುದೇನೆಂದರೆ ಇದೆಲ್ಲ ರಹಸ್ಯವಾಗಿ ನಡೆಯಿತೇ? ಏನು ನಡೆಯುತ್ತಿದೆ ಎಂದು ಸರ್ಕಾರದಲ್ಲಿ ಬೇರೆ ಇನ್ನಾರಿಗೂ ಗೊತ್ತಾಗಲೇ ಇಲ್ಲವೆ? ಸಚಿವಾಲಯವೊಂದು ಅನುಸರಿಸುತ್ತಿದ್ದ ನೀತಿಗಳು ಮತ್ತು ವಿಧಾನಗಳ ಕುರಿತು ಪ್ರಧಾನ ಮಂತ್ರಿಗೆ ತಿಳಿದಿರಲಿಲ್ಲವೆ?
ಪ್ರಧಾನಮಂತ್ರಿಗೆ ತಿಳಿದಿತ್ತೆ?
ಮಹಾಲೇಖಪಾಲರ ವರದಿ ಪ್ರಕಾರ ಮತ್ತು ಟೆಲಿಕಾಂ ಸಚಿವಾಲಯವು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಮಾಹಿತಿಗಳು ಮತ್ತು ಅದನ್ನು ಪ್ರಧಾನ ಮಂತ್ರಿಗಳ ಕಚೇರಿಯು ಅಲ್ಲಗೆಳೆಯದಿರುವ ಪ್ರಕಾರ, ಪ್ರಧಾನಮಂತ್ರಿಗೆ ಎಲ್ಲವೂ ತಿಳಿದಿತ್ತು.

- 2007 ನವೆಂಬರ್ 2ರಂದು, ಪ್ರಧಾನಮಂತ್ರಿಯು ಟೆಲಿಕಾಂ ಮಂತ್ರಿಗೆ ಪತ್ರ ಬರೆದು ಉತ್ತಮ ಮತ್ತು ಪಾರದರ್ಶಕ ರೀತಿಯಲ್ಲಿ ತರಾಂಗತರಗಳನ್ನು ಹರಾಜು ಹಾಕಬೇಕೆಂದು ತಿಳಿಸಿದ್ದರು.
- ಹೊಸ ಆಪರೇಟರ್ ಗಳ ಅಗತ್ಯತೆಗಳನ್ನು ಪೂರೈಸುವಷ್ಟು ತರಂಗಾಂತರ ಲಭ್ಯವಿದೆಯೆಂದು ಅದೇ ದಿನ ಮಂತ್ರಿಯು ಉತ್ತರ ನೀಡಿದ್ದಾರೆ.
- ಅದೇ ದಿನ ಮಂತ್ರಿಯು ಮತ್ತೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಅರ್ಜಿಗಳನ್ನು ಸ್ವೀಕರಿಸಲು ಅಂತಿಮ ದಿನಾಂಕಗಳನ್ನು ತಿದ್ದುಪಡಿ ಮಾಡಿರುವ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ. ಕಾನೂನು ಸಚಿವಾಲಯದ ಆಕ್ಷೇಪಣೆಗಳನ್ನು ಇದಕ್ಕೆ ಸಂಬಂಧಿಸಿಲ್ಲದ್ದು ಎಂದು ಉತ್ತರಿಸಿದ್ದಾರೆ.
- ಡಿಸೆಂಬರ್ 26 ರಂದು ಮಂತ್ರಿಗಳು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಅದರಲ್ಲಿ ದ್ವಿ ತಂತ್ರಜ್ಞಾನ ಮತ್ತು ಹೊಸ ಪರವಾನಗಿಗಳನ್ನು ನೀಡುವ ವಿಷಯಗಳನ್ನು ಒಳಗೊಂಡಂತೆ ವಿವಿಧ ವಿಷಯಗಳ ಮೇಲೆ ಪ್ರಧಾನ ಮಂತ್ರಿ ಮತ್ತು ಆಗಿನ ವಿದೇಶಾಂಗ ಸಚಿವ (ಪ್ರಣಬ್ ಮುಖರ್ಜಿ) ರೊಂದಿಗೆ ನಡೆಸಿದ ಚರ್ಚೆಯನ್ನು ಉಲ್ಲೇಖಿಸಿದ್ದಾರೆ.
- 2008 ಜನವರಿ 3ರಂದು ಕುಖ್ಯಾತವಾಗಿರುವ ಪರವಾನಗಿ ನೀಡುವ ಒಂದು ವಾರ ಮುಂಚೆಯಷ್ಟೆ, ಡಿಸೆಂಬರ್ 26ರ ಪತ್ರ ತಮಗೆ ದೊರೆತಿದೆಯೆಂದು ಪ್ರಧಾನಮಂತ್ರಿಯವರು ಮಂತ್ರಿಗೆ ಸ್ವೀಕೃತ ದೃಢೀಕರಣ ನೀಡಿರುತ್ತಾರೆ.
ಈ ಎಲ್ಲ ದಾಖಲಾತಿಗಳು ತೋರಿಸುವುದೇನೆಂದರೆ, ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡುವಂಥ ತಪ್ಪು ನೀತಿಗಳನ್ನು ಮಂತ್ರಿಗಳು ಅನುಸರಿಸುತ್ತಿದ್ದಾರೆಂಬುದು. ಅಲ್ಲದೆ ಪ್ರಧಾನ ಮಂತ್ರಿಯವರ ನವೆಂಬರ್ 2ರ ಪತ್ರದ ಆಕ್ಷೇಪಣೆಗಳು ಹಾಗೂ ಟೆಲಿಕಾಂ ಸಚಿವಾಲಯದ ಆರ್ಥಿಕ ಇಲಾಖೆಯ ಅಧಿಕಾರಿಗಳ ಆಕ್ಷೇಪಣೆಗಳು, ನಿಯಂತ್ರಣ ಪ್ರಾಧಿಕಾರ, ಕಾನೂನು ಸಚಿವಾಲಯ ಮತ್ತು ಇತರರ ಆಕ್ಷೇಪಣೆಗಳ ನಡುವೆಯೂ ಅಗ್ಗದ ಬೆಲೆ ನೀತಿಯನ್ನು ಮಂತ್ರಿಗಳು ಜಾರಿಗೊಳಿಸುತ್ತಿದ್ದಾರೆಂಬುದು ಪ್ರಧಾನ ಮಂತ್ರಿಯವರಿಗೆ ಗೊತ್ತಿತ್ತು.
ಆದ್ದರಿಂದ ಪ್ರಶ್ನೆ: ಪ್ರಧಾನ ಮಂತಿಯವರು ನಿರ್ಣಾಯಕವಾಗಿ ಏಕೆ ಕ್ರಮವಹಿಸಿಲ್ಲ? ಮೈತ್ರಿ ಧರ್ಮದ ಹೆಸರಿನಲ್ಲಿ ಅವರ ನಾಯಕತ್ವದಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡಬಹುದೆಂಬುದು ಇದರರ್ಥವೇನು?
ಜಂಟಿ ಸದನ ಸಮಿತಿ ರಚಿಸಲು ಒತ್ತಾಯ :
ಹಗರಣದ ಬಹು-ಆಯಾಮದ ಸ್ವಭಾವದ ಕಾರಣಕ್ಕಾಗಿಯೇ ಜಂಟಿ ಸದನ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಲಾಗಿದೆ. ಸರ್ಕಾರವು ಈ ಬೇಡಿಕೆಯನ್ನು ಸ್ವೀಕರಿಸಲು ತಿರಸ್ಕರಿಸಿದೆ. ಏಕೆ ಇಂಥಹ ದ್ವಿಮುಖ ಧೋರಣೆಗಳು? 2001ರ ಬಿಜೆಪಿ ಆಳ್ವಿಕೆಯಲ್ಲಿ, ರಕ್ಷಣಾ ವ್ಯವಹಾರ ಕುರಿತು ತೆಹಲ್ಕಾ ಹಗರಣ ಬಯಲಿಗೆ ಬಂತು. ಆ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷದ ನಾಯಕರಾಗಿ ಶ್ರೀ ಪ್ರಣಬ್ ಮುಖರ್ಜಿಯವರು ಇತರರೊಂದಿಗೆ ಸೇರಿ ತೆಹಲ್ಕಾ ಹಗರಣವನ್ನು ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸಬೇಕೆಂದು ರಾಜ್ಯ ಸಭೆಯಲ್ಲಿ ಒತ್ತಾಯಿಸಿದ್ದರು. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಎರಡು ವಾರಗಳ ಕಾಲ ಸಂಸತ್ತನ್ನು ಸ್ಥಗಿತಗೊಳಿಸಲಾಗಿತ್ತು. ಜಂಟಿ ಸದನ ಸಮಿತಿ ರಚನೆಯ ಕನಿಷ್ಟ ಬೇಡಿಕೆಯ ಮೂಲಕ ಸ್ಥಗಿತತೆಯನ್ನು ಕೊನೆಗೊಳಿಸಲು ಕಾಂಗ್ರೆಸ್ ಪಕ್ಷವು ತನ್ನೆಲ್ಲ ಪ್ರಯತ್ನ ಮಾಡಿದೆ ಎಂದು ಆ ಸಮಯದಲ್ಲಿ ಶ್ರೀಮತಿ ಸೋನಿಯಾಗಾಂಧಿ ಹೇಳಿದ್ದರು. ಸರ್ಕಾರವು ರಾಜಕೀಯ ತಂತ್ರಜ್ಞತೆಯನ್ನು ಪ್ರದರ್ಶಿಸಬೇಕು ಮತ್ತು ವಿರೋಧ ಪಕ್ಷದ ಬೇಡಿಕೆಯನ್ನು ಒಪ್ಪಿ ಸ್ಥಗಿತತೆಗೆ ಅಂತ್ಯ ಕಾಣಿಸಬೇಕು ಎಂದು ಅವರು ಸಲಹೆ ಮಾಡಿದ್ದರು. ಶ್ರೀಮತಿ ಗಾಂಧಿಯವರು ಅದೇ ಸಲಹೆಯನ್ನು ತಮ್ಮ ಪಕ್ಷದ ನಾಯಕತ್ವದಲ್ಲಿರುವ ಪ್ರಸಕ್ತ ಕೇಂದ್ರ ಸರ್ಕಾರಕ್ಕೆ ನೀಡುತ್ತಾರೆಂದು ಆಶಿಸೋಣ.
ಅದೇನೆ ಇರಲಿ, 2ಜಿ ಹಗರಣವು ವ್ಯವಸ್ಥೆಯಲ್ಲಿರುವ ಕೊಳೆತವನ್ನು ಬಯಲಿಗೆಳೆದಿದೆ. ಪ್ರಧಾನ ಮಂತ್ರಿಗಳ ವೈಯುಕ್ತಿಕ ಪ್ರಾಮಾಣಿಕತೆ ಕುರಿತ ಪ್ರಚಾರದಿಂದ ಇದನ್ನು ಮರೆಮಾಚಲಾಗದು. ಬಾಕಿವುಳಿವ ಪ್ರಶ್ನೆಯೆಂದರೆ; ಪ್ರಧಾನ ಮಂತ್ರಿ ಏಕೆ ಕ್ರಮವಹಿಸಲಿಲ್ಲ? ಅವರು ಕ್ರಮವಹಿಸಿದ್ದರೆ ರೂ. 1.76ಲಕ್ಷ ಕೋಟಿ ಸಾರ್ವಜನಿಕ ಹಣವನ್ನು ಅವರು ಉಳಿಸಲಾಗುತ್ತಿರಲಿಲ್ಲವೇ?
ಕಾಮನ್ ವೆಲ್ತ್ ಕ್ರೀಡಾಕೂಟ :
ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಜನತೆಯ ಆಸ್ತಿಯನ್ನು ಲೂಟಿ ಮಾಡಲಾಯ್ತು. ಕೇಂದ್ರ ಸರ್ಕಾರ ಮತ್ತು ಮೇಲಧಿಕಾರಿಗಳು ಕಣ್ಣುಮುಚ್ಚಿ ಕುಳಿತು ಈ ಲೂಟಿಗೆ ಅವಕಾಶ ಮಾಡಿಕೊಟ್ಟರು. ಕೇಂದ್ರ ಸರ್ಕಾರದ ನಗರಾಭಿವೃದ್ಧಿ, ಕ್ರೀಡೆ ಮತ್ತು ಯುವಜನ, ಮಾಹಿತಿ ಮತ್ತು ಪ್ರಸಾರ ಮಂತ್ರಾಲಯಗಳು, ದೆಹಲಿ ಸರ್ಕಾರ ಮತ್ತು ಕಾಮನ್ ವೆಲ್ತ್ ಕ್ರೀಡೆಯ ಅಧಿಕಾರಿಗಳು ಈ ಲೂಟಿಯಲ್ಲಿ ಪಾಲುದಾರರು. ಕಾಮನ್ ವೆಲ್ತ್ ಕ್ರೀಡೆಯ ಸಿದ್ದತೆಗಳಾಗುತ್ತಿರುವಂತೆಯೇ ಮಾಧ್ಯಮಗಳಲ್ಲಿ ಬೃಹತ್ ಭ್ರಷ್ಠಾಚಾರದ ವರದಿಯಾಗಿತ್ತು. ಕೇಂದ್ರ ವಿಜಿಲೆನ್ಸ್ ಕಮಿಷನ್ ನ ವರದಿಯು ಭ್ರಷ್ಟಾಚಾರವನ್ನು ದೃಢೀಕರಿಸಿತ್ತು. ಸ್ಟೇಡಿಯಂಗಳ ನಿರ್ಮಾಣ ಮತ್ತು ನಿರ್ವಹಣೆ, ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದು, ಕ್ರೀಡಾ ಉಪಕರಣಗಳ ಕೊಳ್ಳುವಿಕೆಯಲ್ಲಿ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ನಡೆದಿದೆ. ದೂರದರ್ಶನವೇ ಈ ಕ್ರೀಡೆಗಳನ್ನು ಬಿತ್ತರಿಸಬಹುದಾಗಿದ್ದರೂ ಅದನ್ನು ಬೇರೊಂದು ಸಂಸ್ಥೆಗೆ ಒಪ್ಪಿಸಿರುವುದು ಇನ್ನೊಂದು ಹಗರಣ. ಪ್ರಸಾರ ಭಾರತಿಯ ಮುಖ್ಯಸ್ಥರೇ ಹೇಳಿರುವಂತೆ ಕೇಂದ್ರ ಸಚಿವರೇ ಈ ಗುತ್ತಿಗೆಯನ್ನು ಮಾನ್ಯ ಮಾಡಿದ್ದರು.
ಈ ಹಗರಣಗಳು ಹೊರಬರುತ್ತಿರುವಂತೆಯೇ ಕಾಂಗ್ರೆಸ್ ಸರ್ಕಾರವು ದೇಶದ ಘನತೆಯ ಪ್ರಶ್ನೆಯೆಂದು ಕ್ರೀಡಾ ಕೂಟ ಸಾಂಗವಾಗಿ ನಡೆಯಲು ಅವಕಾಶವಾಗಬೇಕೆಂದು ಹಗರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿತ್ತು. ಕ್ರೀಡಾಕೂಟ ಮುಕ್ತಾಯವಾದ ನಂತರ ನಿವೃತ್ತ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ರವರ ನೇತೃತ್ವದಲ್ಲಿ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ. ಈ ಸಮಿತಿಗೆ ಯಾವುದೇ ಅಧಿಕಾರವಿಲ್ಲ. ಸಾರ್ವಜನಿಕರ ಒತ್ತಾಸೆಯ ನಂತರ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿಯಾಗಿದ್ದ ಸುರೇಶ್ ಕಲ್ಮಾಡಿಯವರನ್ನು ಪಾರ್ಲಿಮೆಂಟರಿ ಪಾರ್ಟಿಯ ಕಾರ್ಯದರ್ಶಿ ಹುದ್ದೆಯಿಂದ ರಾಜೀನಾಮೆ ನೀಡುವಂತೆ ಮಾಡಲಾಗಿದೆ. ರಾಣಿಯ ಬೇಟನ್ ರಿಲೇಗೆ ತಗುಲಿದ ವೆಚ್ಚವನ್ನು ಹೆಚ್ಚಿಸಿದ (ಸುಮಾರು ಎರಡು ಕೋಟಿ ರೂ.ಗೆ ) ಕಾರಣದಿಂದ ಇಬ್ಬರು ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಆದರೆ ದೊಡ್ಡ ಮೀನುಗಳ ಬಗ್ಗೆ ಏನು ಮಾಡಲಾಗಿದೆ. ಕಟ್ಟಡ ಮತ್ತು ಸೌಕರ್ಯ ನಿರ್ಮಾಣ, ನಿರ್ವಹಣೆಗೆ ಮಾಡಿದ ಖರ್ಚಿನ ಅಲ್ಪಭಾಗ ಮಾತ್ರವೇ ಕಾಮನ್ ವೆಲ್ತ್ ಕ್ರೀಡೆಗೆ ಸಂಘಟಕರು ಮಾಡಿರುವ ಖರ್ಚು. ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡಿದ್ದ ಸಂಘಟನಾ ಸಮಿತಿ, ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಸಶಕ್ತ ಸಮಿತಿಯಿಂದ ಎಲ್ಲ ಹಂತಗಳಲ್ಲಿ ತಕ್ಷಣವೇ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಅನಗತ್ಯ ಅಗಾಧ ಖರ್ಚುಗಳು :
- 2010 ರ ಕಾಮನ್ ವೆಲ್ತ್ ಕ್ರೀಡಾಕೂಟ ದುಂದುಗಾರಿಕೆಯಿಂದ ಕೂಡಿತ್ತು. ಇದೀಗ ಹೊರಬಂದಿರುವ ಈ ಕೆಳಕಂಡ ಅಂಶಗಳಿಂದ ಅದು ಸಾಬೀತಾಗುತ್ತದೆ.
- 2003ರಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ಗುತ್ತಿಗೆ ಹಿಡಿದಾಗ ಅಂದಾಜು ಮಾಡಲಾಗಿದ್ದ ವೆಚ್ಚ - 1,899 ಕೋಟಿ ರೂ.ಗಳು.
- 2007ರಲ್ಲಿ ಕೇಂದ್ರ ಮಂತ್ರಿ ಮಂಡಲ ಕ್ರೀಡಾಕೂಟಕ್ಕೆ ಅನುಮೊದಿಸಲಾಗಿದ್ದ ವೆಚ್ಚ - 3,566 ಕೋಟಿ ರೂ.ಗಳು.
- ಜುಲೈ 2009ರಲ್ಲಿ ಸಿಎಜಿ ವರದಿಯು ಮೂಲಭೂತ ಸೌಲಭ್ಯ ನಿರ್ಮಾಣ, ಕ್ರೀಡಾ ಸ್ಥಳ ನಿರ್ಮಾಣ ಮತ್ತು ನಿರ್ವಹಣೆ ಮತ್ತು ಕ್ರೀಡಾ ಕೂಟದ ಖರ್ಚಿಗೆ ಅಂದಾಜು ಮಾಡಿದ್ದ ವೆಚ್ಚ - 12,888 ಕೋಟಿ ರೂ.ಗಳು.
- ಕ್ರೀಡಾಕೂಟ ಆರಂಭವಾಗುವಾಗ ಅಂದಾಜು ಖರ್ಚು 70,000 ಕೋಟಿ ರೂಗಳಿಗೇರಿತ್ತು !.
- 2005ರಲ್ಲಿ ಮೆಲ್ಬೊರ್ನ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ ಖರ್ಚು ಕೇವಲ 5,200 ಕೋಟಿ ರೂ.ಗಳು. ಈ ವೆಚ್ಚದ ಶೇ.100 ರಷ್ಟು ಏರಿಕೆ ಮಾಡಿದ್ದರೂ 2010ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಈಗ ತಗುಲಿದ ವೆಚ್ಚದ 1/7 ರಷ್ಟು ಮೊತ್ತ ಸಾಕಿತ್ತು.
ಅಗಾಧ ಭ್ರಷ್ಟಾಚಾರ :
ವೆಚ್ಚದ ಅಂದಾಜಿನಲ್ಲಿ ಉಂಟಾದ ಈ ತೀವ್ರ ಹೆಚ್ಚಳವೇ ಅಗಾಧ ಭ್ರಷ್ಟಾಚಾರದ ಅನುಮಾನ ಹುಟ್ಟಿಸುತ್ತದೆ. ಈ ಕೆಳಕಾಣಿಸಿದ ಅಂಶಗಳು ಅದನ್ನು ಇನ್ನಷ್ಟು ದೃಢೀಕರಿಸುತ್ತದೆ.
ಹೈದರಾಬಾದಿನಲ್ಲಿ ಹೊಸತೊಂದು ಕ್ರಿಕೆಟ್ ಸ್ಟೇಡಿಯಂ ಕಟ್ಟಲು ತಗುಲಿದ ವೆಚ್ಚ ರೂ.90 ಕೋಟಿಯಾಗಿದ್ದರೆ, ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನ ರಿಪೇರಿಗೆ ತಗುಲಿದ ವೆಚ್ಚ ಬರೋಬ್ಬರಿ 961 ಕೋಟಿ ರೂ.ಗಳು !
ಜವಾಹರಲಾಲ್ ನೆಹರೂ ಸ್ಟೇಡಿಯಂನ ಎದುರು ಕುಸಿದು ಬಿದ್ದ ಪಾದಚಾರಿ ಸೇತುವೆಯ ವೆಚ್ಚವನ್ನು 10 ಕೋಟಿಯೆಂದು ತೋರಿಸಲಾಗಿತ್ತು. ನಿಕೃಷ್ಟ ಸಾಮಾಗ್ರಿಗಳು ಮತ್ತು ನಿರ್ಮಾಣ ವಿಧಾನದಿಂದಾಗಿ ಅದು ಕಟ್ಟುವ ಮೊದಲೇ ಕುಸಿದು ಬಿದ್ದಿತ್ತು.
ನಿಗದಿತ ಮೊತ್ತಕ್ಕೆ ಗುತ್ತಿಗೆ ನೀಡಿದ ನಂತರವೂ ಹೆಚ್ಚುವರಿ ಹಣ ನೀಡಲು ಒಪ್ಪಿಕೊಂಡಿರುವುದು ಬೆಳಕಿಗೆ ಬಂದಿದೆ. ಉದಾಹರಣೆಗೆ ಗೇಮ್ಸ್ ವಿಲೇಜ್ ಕಟ್ಟಲು ರೂ.1,032 ಕೋಟಿ ರೂ.ಗಳಿಗೆ ಗುತ್ತಿಗೆ ಪಡೆದಿದ್ದ ಬಹುರಾಷ್ಟ್ರೀಯ ಸಂಸ್ಥೆ ಎಮಾರ್ ಎಂಜಿಎಫ್ ಗೆ ರೂ. 700 ಕೋಟಿಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ನಿರ್ಮಾಣವಾಗಿರುವ ಕಟ್ಟಡದ ಗುಣಮಟ್ಟದ ಬಗ್ಗೆಯೂ ಅನುಮಾನವಿದೆ.
ಸಾಮಾಜಿಕ ಕಲ್ಯಾಣ ಯೋಜನೆಯ ಹಣದ ಬಳಕೆ :
ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ದುರ್ಬಲ ಜನತೆಯ ಹಿತಕ್ಕಾಗಿ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಸುಮಾರು 700 ಕೋಟಿ ರೂ.ಗಳನ್ನು ಕಾನೂನು ಬಾಹಿರವಾಗಿ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಬಳಕೆ ಮಾಡಿದೆ. ಇದು ವಿಶೇಷವಾಗಿ ಕಲ್ಯಾಣ ಯೋಜನೆಗಾಗಿ ಮೀಸಲಿಟ್ಟು ರಾಜ್ಯ ಸಭೆ ಆಗಸ್ಟ್ 27 ರಂದು ಅನುಮೋದಿಸಿದ್ದ ಕಾರ್ಯಕ್ರಮದ ಹಣದ ಒಂದು ಭಾಗ. ದೆಹಲಿ ಸರ್ಕಾರ ನೇಮಿಸಿದ ಕನಿಷ್ಠ ಕೂಲಿಯನ್ನು ನೀಡಲೊಪ್ಪದ ಗುತ್ತಿಗೆದಾರರು ಕೋಟ್ಯಾಂತರ ರೂ.ಗಳ ಲಾಭ ಗಳಿಸಿದ್ದಾರೆ. ಕಾರ್ಮಿಕ ಆಯೋಗ ತನಿಖೆ ನಡೆಸಿದ 958 ಪ್ರಕರಣಗಳಲ್ಲಿ ಶೇ. 86 ರಷ್ಟು ಪ್ರಕರಣಗಳಲ್ಲಿ ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗಿರುವುದು ದೃಢಪಟ್ಟಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತೊಡಗಿಕೊಂಡವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ ಕ್ರೀಡಾಕೂಟದ ಲೋಪದೋಷಗಳಿಗೆ ಹೊಣೆಗಾರಿಕೆ ಹೊರುವಂತೆ ಮಾಡಬೇಕು.
ಹಲವು ತನಿಖಾ ಸಂಸ್ಥೆಗಳನ್ನೊಳಗೊಂಡ ಜಂಟಿ ಸಮಿತಿಯನ್ನು ನೇಮಿಸುವ ಬದಲಿಗೆ ಸರ್ಕಾರ ಎರಡು ಸದಸ್ಯರ ಸಮಿತಿಯನ್ನು ನೇಮಿಸಿದ್ದು ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ. ಈ ಸಮಿತಿಯು ಸಂಘಟನಾ ಸಮಿತಿಯ ಕಾರ್ಯದಲ್ಲಿ ಭ್ರಷ್ಟಾಚಾರ ತನಿಖೆ ಮಾಡುವುದಲ್ಲದೆ ತನ್ನ ಸರ್ಕಾರವನ್ನು ತನಿಖೆಗೊಳಪಡಿಸುವುದಿಲ್ಲವೆಂದು ದೆಹಲಿಯ ಮುಖ್ಯಮಂತ್ರಿಗಳು ಸಾರ್ವಜನಿಕರೆದುರು ಸ್ಪಷ್ಟಪಡಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು, ಡಿ.ಡಿ.ಎ, ಸಿಪಿಡಬ್ಲೂಡಿ, ಎಂ.ಸಿ.ಡಿ ಮತ್ತು ಡಿ.ಎಂ.ಆರ್.ಸಿ ಇವುಗಳ ಪಾತ್ರವನ್ನು ಮುಚ್ಚಿಟ್ಟು ಕೇವಲ ಸಂಘಟನಾ ಸಮಿತಿಯ ಕಾರ್ಯಚರಣೆಗೆ ತನಿಖೆಯನ್ನು ಸೀಮಿತಗೊಳಿಸುವ ಪ್ರಯತ್ನವಿದಾಗಿದೆ.
ಆದರ್ಶ ಸೊಸೈಟಿಯ ಹಗರಣ : ಕಾಂಗ್ರೆಸ್ ಹಿರಿಯ ನಾಯಕರ ಪಾತ್ರ
ಮಹಾರಾಷ್ಟ್ರದ ಆದರ್ಶ ಸೊಸೈಟಿಯ ಹಗರಣವಂತೂ ದಿಗ್ಭ್ರಮೆಗೊಳಿಸಿದ ಭ್ರಷ್ಟಾಚಾರ ಪ್ರಕರಣವಾಗಿದೆ. ಈ ಪ್ರಕರಣದ ನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕಚವ್ಹಾಣ್ ರಾಜೀನಾಮೆ ನೀಡಲೇಬೇಕಾಯ್ತು. ಆದರೆ ಇತರರು ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಯುದ್ದದಲ್ಲಿ ಮಡಿದ ಸೈನಿಕರ ವಿಧವೆಯರಿಗೆ ನ್ಯಾಯವಾಗಿ ದೊರೆಯಬೇಕಿದ್ದ ಮನೆಗಳನ್ನು ಕಸಿದುಕೊಂಡು ಈ ಭ್ರಷ್ಟಾಚಾರ ಪ್ರಕರಣ ಆಡಳಿತಾರೂಢ ಸರ್ಕಾರ ಎಂತಹ ನೀಚಮಟ್ಟಕ್ಕೆ ಇಳಿಯಬಹುದೆಂಬುದನ್ನು ತೋರಿಸುತ್ತದೆ. ಕಾರ್ಗಿಲ್ ಯುದ್ಧದ ನಂತರ 1999ರಲ್ಲಿ ಆದರ್ಶ ಗೃಹ ನಿರ್ಮಾಣ ಸಂಸ್ಥೆ ಸ್ಥಾಪಿಸಲಾಗಿತ್ತು. ಸರ್ಕಾರದ ದಾಖಲೆಗಳಲ್ಲಿ ಇದು ಕಾರ್ಗಿಲ್ ಯುದ್ದದಲ್ಲಿ ಮಡಿದ ಸೈನಿಕರ ವಿಧವೆಯರು ಮತ್ತು ಹಿರಿಯ ಸೈನಿಕರಿಗಾಗಿ ಮೀಸಲಾಗಿದೆ ಎಂದು ನಮೂದಿಸಲಾಗಿತ್ತು. ಈ 11 ವರ್ಷಗಳಲ್ಲಿ ದಕ್ಷಿಣ ಮುಂಬೈನ ಕೊಲಬಾದಲ್ಲಿ ಎಲ್ಲ ಕಾನೂನು ಮತ್ತು ನಿಯಮಗಳನ್ನು ಮುರಿದು 31 ಮಹಡಿಗಳ ಕಟ್ಟಡವನ್ನು ಕಟ್ಟಲಾಗಿದೆ.
ಆದರ್ಶ ಹಗರಣವು ಎಲ್ಲ ನೀತಿ, ನಿಯಮ ಮತ್ತು ಕಾನೂನುಗಳನ್ನು ಗಾಳಿಗೆ ತೂರಿದೆ. ಈ ಕಟ್ಟಡವೆದ್ದಿರುವ ಭೂಮಿ ಸಮುದ್ರ ತೀರದ ನಿಯಮಾವಳಿಯ ವ್ಯಾಪ್ತಿಗೆ ಒಳಪಟ್ಟಿದ್ದು ಅಲ್ಲಿ ಕಟ್ಟಡ ಕಟ್ಟಲು ಪರಿಸರ ಮಂತ್ರಾಲಯದ ಅನುಮತಿ ಅಗತ್ಯವಿದ್ದರೂ ಯಾವುದೇ ಅನುಮತಿ ಪಡೆಯಲಾಗಿಲ್ಲ. ಬದಲಿಗೆ ಅನುಮತಿ ಪಡೆಯಲಾಗಿದೆಯೆಂದು ಸುಳ್ಳು ಹೇಳಲಾಗಿದೆ. ರಾಜ್ಯ ಸರ್ಕಾರದ ಪರಿಸರ ಮಂತ್ರಾಲಯ ಕಣ್ಣು ಮುಚ್ಚಿ ಕೂತಿದೆ. ಸಿ.ಆರ್.ಝಡ್ ನಿಯಮಾನುಸಾರ ಈ ಜಾಗದಲ್ಲಿ ಕಟ್ಟಬಹುದಾದ ಕಟ್ಟಡದ ಗರಿಷ್ಟಮಿತಿ 30 ಮೀಟರ್. ಆದರೆ ಕಟ್ಟಿರುವ ಕಟ್ಟಡದ ಎತ್ತರ ಅದರ ಮೂರು ಪಟ್ಟು - 103 ಮೀಟರ್. ಮೂಲದಲ್ಲಿ ಯೋಜನೆ ಮಾಡಿದಂತೆ ಆರು ಮಹಡಿಯ ಕಟ್ಟಡದ ಬದಲಿಗೆ 31 ಮಹಡಿಯ ಗಗನ ಚುಂಬಿ ಕಟ್ಟಡ ನಿರ್ಮಿಸಲಾಗಿದೆ.
ನಿರ್ಮಿಸಿದ 103 ಮನೆಗಳಲ್ಲಿ ಒಂದನ್ನಾದರೂ ಯುದ್ಧ ವಿಧವೆ ಅಥವ ಹಿರಿಯ ಸೈನಿಕರಿಗೆ ನೀಡಿಲ್ಲ. ಎಲ್ಲ ಮನೆಗಳನ್ನೂ ಹಿರಿಯ ರಾಜಕಾರಣಿಗಳು, ಸೈನ್ಯದ ಮತ್ತು ಇತರ ಮೇಲಧಿಕಾರಿಗಳಿಗೇ ನೀಡಲಾಗಿದೆ. ಈ ಮನೆಗಳ ಮಾರುಕಟ್ಟೆ ಬೆಲೆ 8-10 ಕೋಟಿ ರೂ.ಗಳಾಗಿದ್ದರೆ ಅವುಗಳನ್ನು ಕೇವಲ 60-80 ಲಕ್ಷ ರೂ.ಗಳಿಗೆ ಮಾರಲಾಗಿದೆ.
ಎಲ್ಲ ಕಾನೂನುಗಳ ಉಲ್ಲಂಘನೆ :
ಎಲ್ಲ ಕಾನೂನು, ನೀತಿ, ನಿಯಮಗಳನ್ನು ಗಾಳಿಗೆ ತೂರಿ ಇಂತಹ ಕಟ್ಟಡ ನಿರ್ಮಿಸಲು ಅನುಮತಿ ನೀಡಿದವರು ಐದು ಮಾಜಿ ಮುಖ್ಯಮಂತ್ರಿಗಳು. ಅವರು ನಗರಾಭಿವೃದ್ಧಿ ಖಾತೆಯನ್ನು ಮತ್ತು ಕೆಲವರು ಆ ಸಂದರ್ಭದಲ್ಲಿ ಕಂದಾಯ ಖಾತೆಯನ್ನೂ ಹೊಂದಿದ್ದವರು. ಒಬ್ಬ ಮುಖ್ಯಮಂತ್ರಿಯಂತೂ ತನ್ನ ಅತ್ತೆ ಮಾವನಿಗೆ ಮೂರು ಮನೆಗಳನ್ನು ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ. ಮತ್ತೊಬ್ಬ ಮುಖ್ಯಮಂತ್ರಿ ಸಂಬಂಧಿಸಿದ 11 ಇಲಾಖೆಗಳ ಮೂಲಕ ತ್ವರಿತ ಕಾರ್ಯನಡೆಸಿ 103 ರಲ್ಲಿ 51 ಮನೆಗಳನ್ನು ನೀಡಲು ಶಿಫಾರಸ್ಸು ಮಾಡಿದ್ದಾರೆ. ಸಾಮಾನ್ಯವಾಗಿ ತಿಂಗಳುಗಳೇ, ವರ್ಷಗಳೇ ಹಿಡಿಯುವ ಈ ಇಡೀ ಪ್ರಕ್ರಿಯೆಯನ್ನು ಒಂದೇ ದಿನದಲ್ಲಿ ಮುಗಿಸಲಾಗಿದೆ.
ಆದರ್ಶ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ನ ಪಾತ್ರ ಹೀಗಿದ್ದರೆ, ಎನ್.ಸಿ.ಪಿ.ಯೂ ಏನೂ ಹಿಂದಿರಲಿಲ್ಲ. ಅವರಲ್ಲಿ ಕೆಲವರು ಪ್ರಸ್ತುತ ಮತ್ತು ಹಿಂದಿನ ಸರ್ಕಾರದಲ್ಲಿ ಮಂತ್ರಿಗಳು. ತಾವು ಏನು ಕಡಿಮೆಯಿಲ್ಲವೆಂಬಂತೆ ಶಿವಸೇನೆ ಮತ್ತು ಬಿಜೆಪಿಯ ನಾಯಕರುಗಳೂ ಕೆಲವು ಮನೆಗಳನ್ನು ಹೊಂದಿದ್ದಾರೆ. ಕೇಂದ್ರ ಸಚಿವರಾದ ಸುರೇಶ್ ಪ್ರಭು ಕೂಡ ಅವರಲ್ಲೊಬ್ಬರು.
ಇಲ್ಲಿ ಮನೆ ಹೊಂದಿರುವ 40 ಜನ ತಮ್ಮ ತಿಂಗಳ ಆದಾಯ ರೂ.12,500ಕ್ಕಿಂತ ಕಡಿಮೆ ಇದೆಯೆಂದು ನಮೂದಿಸಿದ್ದಾರೆ. ಹಾಗಿದ್ದೂ ಅವರು 60-80 ಲಕ್ಷ ಬೆಲೆಬಾಳುವ ಮನೆ ಕೊಂಡಿದ್ದಾರೆ. ಇದು ಅಧಿಕಾರದಲ್ಲಿರುವ ರಾಜಕಾರಣಿ ಮತ್ತು ಮೇಲಧಿಕಾರಿಗಳು ಹೊಂದಿರುವ ಬೇನಾಮಿ ಆಸ್ತಿಯೆಂಬುದನ್ನು ದೃಢಪಡಿಸಿದೆ.
ಉಚ್ಛ ಅಧಿಕಾರಿಗಳು ಮತ್ತು ಮೇಲಧಿಕಾರಿಗಳ ಪಾತ್ರ :
ಉಚ್ಛ ಅಧಿಕಾರಿಗಳು ಮತ್ತು ಸೈನಿಕರು ಆದರ್ಶ ಸೊಸೈಟಿಯಲ್ಲಿ ಹೆಮ್ಮೆಯ ಸ್ಥಾನ ಹೊಂದಿದ್ದಾರೆ. ಕಾನೂನು ಬಾಹಿರವಾಗಿ ಅನುಮತಿ ನೀಡಲು ಅವರನ್ನು ಬಳಸಿಕೊಳ್ಳಲಾಗಿದೆ. ಸಹಜವಾಗಿಯೇ ಅದಕ್ಕೆ ಪ್ರತಿಯಾಗಿ ಅವರಿಗೂ ಪ್ರತಿಫಲ ದೊರೆತಿದೆ. ಮಾಜಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಮಾಜಿ ಮುಂಬೈ ಮುನಿಸಿಪಲ್ ಕಮಿಷನರ್, ಮಾಜಿ ಮುಂಬೈ ಜಿಲ್ಲಾ ಕಮಿಷನರ್, ಬೆಸ್ಟ್ನ ಹಿಂದಿನ ಪ್ರಧಾನ ವ್ಯವಸ್ಥಾಪಕರು ಹಿಂದಿನ ನಗರಾಭಿವೃದ್ದಿ ಅಧಿಕಾರಿಗಳು, ಸಾರಿಗೆ ನಿರ್ದೇಶಕರು, ಆದಾಯ ತೆರಿಗೆ ಅಧಿಕಾರಿಗಳು ಎಲ್ಲರೂ ಇದರಲ್ಲಿ ಸೇರಿದ್ದಾರೆ. ಇಂತಹ ಇನ್ನೂ ಹಲವು ಉದಾಹರಣೆಗಳಿವೆ.
ಸೈನ್ಯದ ಮೇಲಧಿಕಾರಿಗಳಿಗೂ ಆದರ್ಶ ಸೊಸೈಟಿಯಲ್ಲಿ ಮನೆಗಳನ್ನು ನೀಡಲಾಗಿದೆ. ಅವರಲ್ಲಿ ಇಬ್ಬರು ಮಾಜಿ ಸೇನಾಮುಖ್ಯಸ್ಥರು, ಜಲಸೇನೆ ಮುಖ್ಯಸ್ಥರೂ ಮತ್ತು ಇತರ ಮೇಲಧಿಕಾರಿಗಳು ಸೇರಿದ್ದಾರೆ.
ತಾರಕಕ್ಕೇರಿದ ಸಾರ್ವಜನಿಕ ಆಕ್ರೋಶದಿಂದಾಗಿ ಕಟ್ಟಡವನ್ನು ಏಕೆ ಕೆಡವಬಾರದು ಎಂದು ಪರಿಸರ ಮಂತ್ರಾಲಯ ಈಗ ನೋಟಿಸು ಜಾರಿ ಮಾಡಿದೆ. ರಕ್ಷಣಾ ಮಂತ್ರಾಲಯ ಸಿಬಿಐ ತನಿಖೆಗೆ ಆದೇಶ ನೀಡಿದೆ. ಕೆಲವು ರಾಜಕಾರಣಿಗಳು ಇಂದಿಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿ ಮುಂದುವರೆದಿದ್ದು ತನಿಖೆಯ ಮೇಲೆ ಒತ್ತಡ ತರಬಲ್ಲವರಾಗಿದ್ದಾರೆ. ಹಲವು ಮೇಲಾಧಿಕಾರಿಗಳೂ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಹೀಗೆ ಮುಂದುವರೆಯಲು ಅವರಿಗೆ ಯಾವ ನೈತಿಕ ಅಧಿಕಾರವಿದೆ ? ಈ ಹಗರಣವನ್ನು ಸಮಗ್ರವಾಗಿ ತನಿಖೆ ನಡೆಸಿ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು.
ಇತರ ಹಗರಣಗಳು :
ಅಕ್ಕಿಯ ಕೊರತೆ ಮತ್ತು ಬೆಲೆಯೇರಿಕೆಯ ಕಾರಣದಿಂದ ಅಕ್ಕಿಯನ್ನು ರಪ್ತು ಮಾಡಲು ನಿರ್ಬಂಧವಿದ್ದರೂ ಆಫ್ರಿಕಾಕ್ಕೆ ಅಕ್ಕಿ ರಪ್ತು ಮಾಡಿರುವ ಹಗರಣ ಬೆಳಕಿಗೆ ಬಂದಿದೆ. ಕಮಲನಾಥರ ನೇತೃತ್ವದ ವಾಣಿಜ್ಯ ಮಂತ್ರಾಲಯ ಮಾನವೀಯ ಸಹಾಯವೆಂದು ರಪ್ತು ಮಾಡಲು ವಿಶೇಷ ಕೋರಿಕೆ ಸಲ್ಲಿಸಿತ್ತು. ತಾರತಮ್ಯ ತೋರಿ ಅನುಮತಿ ಪಡೆದ ಈ ಕಂಪನಿಗಳು ಬಿಪಿಎಲ್ ದರದಲ್ಲಿ ಅಕ್ಕಿಯನ್ನು ಕೊಂಡು ಅದಕ್ಕಿಂತ ಅತಿ ಹೆಚ್ಚಿನ ಬೆಲೆಗೆ ಈ ಅಕ್ಕಿಯನ್ನು ಆಫ್ರಿಕಾದ ಸಂಸ್ಥೆಗಳಿಗೆ ಮಾರಿದವು. ಈ ಮಾರಾಟದಿಂದ 2500 ಕೋಟಿ ರೂ.ಗಳಿಸಲಾಗಿದೆ. ಕೆಲವು ಆಫ್ರಿಕದ ದೇಶಗಳು ತಮಗೆ ಅಕ್ಕಿ ಬಂದಿಲ್ಲವೆಂದು ದೂರು ನೀಡಿದ್ದರಿಂದ ಈ ಅಂಶ ಬೆಳಕಿಗೆ ಬಂದಿತ್ತು. ಪಾರ್ಲಿಮೆಂಟಿನಲ್ಲಿ ಈ ಬಗ್ಗೆ ತನಿಖೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ.
ಐಪಿಎಲ್ ಹಗರಣ :
ಕ್ಯಾಬಿನೆಟ್ ಮಂತ್ರಿಗಳು, ಆಡಳಿತ ಪಕ್ಷದ ಮತ್ತು ಪ್ರಮುಖ ವಿರೋಧ ಪಕ್ಷದ ಉನ್ನತ ನಾಯಕರುಗಳು ಬಿಸಿಸಿಐ ಸೇರಿದಂತೆ ಹಲವಾರು ಕ್ರೀಡಾ ಸಂಸ್ಥೆಗಳ ನೇತೃತ್ವ ಹೊಂದಿದ್ದಾರೆ. ಐಪಿಎಲ್ ನಲ್ಲಿ ಒಂದು ತಂಡವನ್ನು ಘೋಷಿಸಿ ಗುತ್ತಿಗೆ ಪಡೆಯಲು ಹಣಕಾಸು ಲೇವಾದೇವಿ ಸಂಸ್ಥೆಯೊಂದಕ್ಕೆ ನೆರವು ನೀಡಿದ್ದರಿಂದ ಅವರ ಪಾಲುದಾರರಿಗೆ ರೂ. 70 ಕೋಟಿ ನೀಡಲಾದ ಬಗ್ಗೆ ಭುಗಿಲೆದ್ದ ಜನತೆಯ ಆಕ್ರೋಶದಿಂದಾಗಿ ಸಚಿವ ಶಶಿತರೂರ್ ರಾಜೀನಾಮೆ ನೀಡಬೇಕಾಯ್ತು. ಆಡಳಿತ ಪಕ್ಷದ ಮತ್ತು ಸರ್ಕಾರದ ಮಿತ್ರ ಪಕ್ಷಗಳ ಇತರೆ ಹಲವು ನಾಯಕರು ಐಪಿಎಲ್ ನ ಈ ಮೋಸದ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದಾರೆ. ಇದರಿಂದಾಗಿ ಕ್ರಿಕೆಟ್ ಆಟವನ್ನು ಒಂದು ವ್ಯಾಪಾರವನ್ನಾಗಿಸಿ ಮತ್ತು ಕ್ರಿಕೆಟ್ ಗುಂಪುಗಳಿಗೆ ಹೂಡಿಕೆಯ ಅವಕಾಶವನ್ನೊದಗಿಸಿದೆ. ಒಂದು ಟೀಮ್ ನ ಬೆಲೆಯು ಆಶ್ಚರ್ಯಪಡುವ ರೀತಿಯಲ್ಲಿ ಸುಮಾರು 1,500 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಸಿಬಿಐ ತನಿಖೆಗೆ ಒಳಪಟ್ಟು ತಲೆ ಮರೆಸಿಕೊಂಡಿರುವ ಉನ್ನತ ಹೂಡಿಕೆದಾರನೊಬ್ಬ ಅಭಿಪ್ರಾಯಪಟ್ಟಿರುವ ರೀತಿಯಲ್ಲಿ ಕ್ರಿಕೆಟ್ ಅಸೋಸಿಯೇಷನ್ಗಳು ಸುಮಾರು 8 ಬಿಲಿಯನ್ ಡಾಲರ್ಸ್ (ಸುಮಾರು 37,000 ಕೋಟಿ ರೂ.)ಹಣವನ್ನು ದೋಚಿಕೊಂಡಿವೆ.
ಬ್ರಾಡ್ ಕ್ರಾಸ್ಟಿಂಗ್ ಸೇರಿದಂತೆ ಇತರೆ ಕಾಂಟ್ರಾಕ್ಟ್ ಗಳಿಂದ ಹೊಡೆದಿರುವ ಲಂಚದ ಹಣ ಇದರಲ್ಲಿ ಸೇರ್ಪಡೆಯಾಗಿಲ್ಲ. ಇಲ್ಲಿ ಮಾಲಿಕರು ಎಂದು ಕಾಣುವವರು ಹಲವು ಕಂಪನಿಗಳ ಮುಖವಾಡಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಐ.ಪಿ.ಎಲ್. ಮೂಲಕ ಇವರು ಮಾಡಿರುವ ಅಗಾಧವಾದ ಗಳಿಕೆಗೆ ಯಾವುದೇ ತೆರಿಗೆಯನ್ನು ನೀಡಿಲ್ಲ. ಮಾತ್ರವಲ್ಲ ಈ ಎಲ್ಲಾ ಹಣವು ಅನ್ಯಾಯದ ಹಾದಿಯಲ್ಲಿ, ಮೊಸದ ಮೂಲದಿಂದ ಬರುತ್ತಿದೆಯೆಂದು ತಿಳಿದು ಬಂದಿದೆ. ಐಪಿಎಲ್ ನಲ್ಲಿರುವ ಅಧಿಕಾರಿಗಳೊಳಗಿನ ಜಗಳದಿಂದ ಮಾತ್ರ ಈ ಎಲ್ಲಾ ಭ್ರಷ್ಟಾಚಾರದ ವಿವರಗಳು ಹೊರಗೆ ಬರಲು ಸಾಧ್ಯವಾಗಿದೆ. ಹಣಕಾಸು ಮಂತ್ರಿಗಳು ತಪ್ಪು ಮಾಡಿರುವವರ ವಿರುದ್ಧ ಕ್ರಮಜರುಗಿಸಿಯೇ ತೀರುತ್ತೇವೆಂದು ಹೇಳಿದ್ದರೂ ಸಹ ಸರ್ಕಾರದಿಂದ ಈವರೆಗೆ ಯಾವುದೇ ಪ್ರಗತಿ ಕಾಣಲಿಲ್ಲ. ಇದರಿಂದ ಇವರು ಎಷ್ಟರ ಮಟ್ಟಿಗೆ ಆಡಿದ ಮಾತಿಗೆ ನಡೆಯುತ್ತಾರೆಂದು ತಿಳಿಯುತ್ತದೆ.
ಕರ್ನಾಟಕ : ಬಿಜೆಪಿ ಸರಕಾರದ ಇಬ್ಬಂದಿತನ :
ದಕ್ಷಿಣ ಭಾರತದ ಹೆಬ್ಬಾಗಿಲು ಎನ್ನುತ್ತಾ ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕರ್ಕಾಟಕದ ಜನತೆ ಪಶ್ಚಾತ್ತಾಪ ಪಡುವಂತಾಗಿದೆ. 'ಆಪರೇಷನ್ ಕಮಲ'ವೆಂಬ ಹೊಲಸಿನಲ್ಲಿ ಹೊರಳಾಟ ಪ್ರಾರಂಭಸಿ, ರೆಸಾರ್ಟ್ ರಾಜಕೀಯ, ಭೂಕಬಳಿಕೆ, ಲಂಪಟತನ, ಸ್ವಜಾತಿ/ಸ್ವಜನ ಪಕ್ಷಪಾತ,.. ಎಲ್ಲವೂ ಲೂಟಿಗಾಗಿ ನಡೆದಿದೆ. ಯಡ್ಯೂರಪ್ಪನವರ ಸರ್ಕಾರವು ಭ್ರಷ್ಟಚಾರದ ಕೂಪದಲ್ಲಿ ಸಿಲುಕಿದ್ದು ಅದರ ಕೇಂದ್ರ ಬಿಂದು ಮುಖ್ಯಮಂತ್ರಿಗಳೇ ಆಗಿದ್ದಾರೆ. ಮುಖ್ಯಮಂತ್ರಿ ತಮ್ಮ ಅಧಿಕಾರ ದುರುಪಯೋಗ ಮಾಡಿ ತಮ್ಮ ಸಂಬಂಧಿಕರಿಗೆ ಶಿಫಾರಸ್ಸು ಮಾಡಿ ಲಾಭ ಮಾಡಿಕೊಟ್ಟಿದ್ದಾರೆಂಬುದಕ್ಕೆ ಪುರಾವೆ ಇದ್ದರೂ ಸಹ ಕೇಂದ್ರದಲ್ಲಿರುವ ವರಿಷ್ಠ ಮುಖಂಡರು ಇವರಿಗೆ ರಕ್ಷಣೆ ನೀಡುತ್ತಿದ್ದಾರೆ. ಅನೈತಿಕ ಹಾಗೂ ಕಾನೂನು ಬಾಹಿರವಾಗಿ ಗಣಿಗಾರಿಕೆಯನ್ನು ನಡೆಸುತ್ತಿರುವ ಮಾಲಿಕರು ಸಕರ್ಾರದ ಬೊಕ್ಕಸಕ್ಕೆ ತೆರಿಗೆಯ ರೂಪದಲ್ಲಿ ನೀಡದೇ ನಷ್ಟ ಮಾಡುತ್ತಿರುವುದು ಅಲ್ಲದೆ, ಸರ್ಕಾರದಲ್ಲಿ ಮುಂದುವರಿಯುತ್ತಿರುವುದು ವಿಪರ್ಯಸವಾಗಿದೆ. ಇವೆಲ್ಲವೂ ಬಿಜೆಪಿಯ ಕಪಟತನ ಹಾಗೂ ಇಬ್ಬಂದಿತನವನ್ನು ಬಹಳ ಸ್ಪಷ್ಟವಾಗಿ ತೋರಿಸುತ್ತದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದಾಗಿನಿಂದಲೂ 500 ಎಕರೆ ಪ್ರಮುಖ ಭೂಮಿಯನ್ನು ಬೆಂಗಳೂರಿನ ಒಳಗೆ ಹಾಗೂ ಹೊರಗೆ ಡಿ ನೋಟಿಪಿಕೇಶನ್ ಮಾಡಿರುವುದಾಗಿ ವಿರೋಧ ಪಕ್ಷಗಳು ಲೋಕಾಯುಕ್ತರಿಗೆ ದೂರು ನೀಡಿರುವುದು ತಿಳಿದಿದೆ. ಇದು ಸುಮಾರು ಐದು ಸಾವಿರ ಕೋಟಿ ರೂ.ಗಳಷ್ಟಾಗುತ್ತದೆಂದು ಅಂದಾಜು ಮಾಡಲಾಗಿದೆ. ಸರ್ಕಾರವು ತನ್ನ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಅಪಾಧಿಸಿ. ಲೋಕಾಯುಕ್ತರು ಒಂದು ಸಲ ರಾಜಿನಾಮೆ ನೀಡಿ ಪುನಃ ವಾಪಸ್ಸು ಪಡೆದಿದ್ದಾರೆ. ಈ ಎಲ್ಲಾ ಅಪಾದನೆಗಳನ್ನು ಸಮಗ್ರವಾಗಿ ತನಿಖೆ ಮಾಡುತ್ತೇನೆ ಅಲ್ಲಿವರೆಗೆ ಅಧಿಕಾರದಿಂದ ಇಳಿಯುತ್ತೇನೆ ಎಂದು ಹೇಳುವ ಬದಲಿಗೆ, ಈ ಮುಖ್ಯಮಂತ್ರಿ ಹಿಂದಿನ ಎಲ್ಲಾ ಸರ್ಕಾರಗಳು ಮಾಡಿರುವುದನ್ನೇ ನಾನು ಮಾಡಿದ್ದೇನೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
- ಮಾರುಕಟ್ಟೆ ಬೆಲೆಯು 15 ಕೋಟಿಗಿಂತ ಮಿಗಿಲಾಗಿದ್ದರೂ ಕೇವಲ 1 ಕೋಟಿ ರೂ.ಗೆ ಮುಖ್ಯಮಂತ್ರಿಯ ಮಕ್ಕಳು ಹಾಗೂ ಅಳಿಯಂದಿರು ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫೈ ಆದ ಜಮೀನನ್ನು ಪಡೆದಿದ್ದಾರೆ.
- ಮುಖ್ಯಮಂತ್ರಿಯ ಮಕ್ಕಳು ಪಾಲುದಾರರಾಗಿರುವ ಜಂಟಿ ಸಾಹಸೋದ್ಯಮ ಬಂಡವಾಳದ ಕೆಲವು ಕಂಪನಿಗಳಿಗೆ ಬನಶಂಕರಿ ಬಡಾವಣೆಯಲ್ಲಿದ್ದ ವಸತಿ ಉದ್ದೇಶದ ಜಮೀನುಗಳನ್ನು ಡಿನೋಟಿಫೈ ಮಾಡಿಸಿ 175 ಕೋಟಿರೂ.ಗಳಷ್ಟು ಆಸ್ತಿಯನ್ನು ಲಪಟಾಯಿಸಿದ್ದಾರೆ.
- ಕೇವಲ 15 ದಿನಗಳ ಹಿಂದೆಯಷ್ಟೇ ಪ್ರಾರಂಭವಾಗಿದ್ದ, ಮುಖ್ಯಮಂತ್ರಿ ಮಕ್ಕಳು ಹಾಗೂ ಅಳಿಯಂದಿರು ಪಾಲುದಾರರಾಗಿರುವ ಫ್ಲೂಯಿಡ್ ಪವರ್ ಟೆಕ್ನಾಲಜೀಸ್ ಎಂಬ ಕಂಪೆನಿಗೆೆ 2 ಎಕರೆ ಜಮೀನನ್ನು ಬೆಂಗಳೂರಿನ ಬಳಿಯ ಕೈಗಾರಿಕಾ ಬಡಾವಣೆಯಲ್ಲಿ ನೀಡಿದ್ದಾರೆ. ಇದರ ಮಾರುಕಟ್ಟೆಯ ಬೆಲೆ 8.5 ಕೋಟಿ ರೂಗಳಾದರೆ, ಇವರಿಗೆ ಕೇವಲ 84 ಲಕ್ಷ ರೂಗಳಿಗೆ ಮಾರಲಾಗಿದೆ.
- ಸಿ.ಎಂ. ಮಗಳ ಒಡೆತನದ ಬಿಪಿಓಗೆ ಬೆಂಗಳೂರಿನಿಂದ 55 ಕಿ.ಮಿ.ದೂರದಲ್ಲಿ 2 ಕೋಟಿ ಬೆಲೆ ಬಾಳುವ 2 ಎಕರೆ ಜಮೀನನ್ನು ಕೇವಲ 40 ಲಕ್ಷಕ್ಕೆ ನೀಡಿದ್ದಾರೆ. ಸಿ.ಎಂ. ಮಗಳಿಗೆ ಬೆಂಗಳೂರಿನ ದುಬಾರಿ ವಸತಿ ಪ್ರದೇಶದಲ್ಲಿ ಕಾನೂನು ಮೀರಿ ಸೈಟನ್ನು ನೀಡಿದ್ದಾರೆ
- 5 ಕೋಟಿ ರೂ ಬೆಲೆ ಬಾಳುವ ನಿವೇಶನಗಳನ್ನು ತಮ್ಮ ತಂಗಿ ಹಾಗೂ ಅವರ ಮಗನಿಗೆ ಮಂಜೂರು ಮಾಡಿದ್ದಾರೆ.
- ಇನ್ನೊಂದು ಪ್ರಕರಣದಲ್ಲಿ, (181 ಕೋಟಿಗೂ ಹೆಚ್ಚಿನ ಬೆಲೆಯುಳ್ಳ) 11.25 ಎಕರೆ ಜಮೀನನ್ನು ಡಿನೋಟಿಪೈ ಮಾಡಿ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲ ಮಾಡಿದ್ದಾರೆ. ಉದಾಹರಣೆಗೆ, ಮುಖ್ಯಮಂತ್ರಿ ಮಗ ಪಾಲುದಾರನಾಗಿ ಇತ್ತೀಚೆಗಷ್ಟೆ ಪ್ರಾರಂಭಿಸಿಲಾಗಿದ್ದ ಒಂದು ಕಂಪೆನಿಗೆ, 39 ಕೋಟಿ ರೂ ಬೆಲೆಬಾಳುವ ಈ ಜಮೀನಿನ ಒಂದು ಭಾಗವನ್ನು ಕೇವಲ 2 ಕೋಟಿ ರೂ.ಗೆ ಮಾರಿದ್ದಾರೆ.
- 13 ಕೋಟಿ ಬೆಲೆ ಬಾಳುವ 2.05 ಎಕರೆಯಷ್ಟು ಮತ್ತೊಂದು ಭೂಮಿಯನ್ನು ಡಿನೋಟಿಫೈ ಮಾಡಿ ಕೇವಲ 2.02 ಕೋಟಿಗೆ ಮಾರಲಾಗಿದೆ. ಈ ಭೂಮಿ ಪಡೆದ ಕಂಪನಿಯ ಹಣಕಾಸು ವರದಿಯ ಪ್ರಕಾರ ಇದರ ಮಾಲೀಕ 2 ಕೋಟಿ ರೂಗಳನ್ನು ಸಿಎಂ ಮಕ್ಕಳು ಇತ್ತೀಚೆಗಷ್ಟೆ ಪ್ರಾರಂಭಿಸಿದ ಕಂಪನಿಗೆ ನೀಡಿದ್ದಾನೆ.
ಈ ಎಲ್ಲಾ ಹಗರಣಗಳು ಬಯಲಾದ ನಂತರವೂ ಸಹ ಮುಖ್ಯಮಂತ್ರಿ ಯಡಿಯೂರಪ್ಪ ತಮಗೆ ಪಕ್ಷದ ಕೇಂದ್ರ ವರಿಷ್ಟರ ಆಶೀರ್ವಾದ ಇದೆಯೆಂದು ನಾಚಿಗೆಯಿಲ್ಲದೆ ನುಡಿದಿದ್ದಾರೆ. ಇದು ವಿಭಿನ್ನ ಪಕ್ಷವೆಂದು ಕೊಚ್ಚಿಕೊಳ್ಳುವ ಬಿಜೆಪಿಗೆ ನಾಚಿಗೆಯ ಸಂಗತಿ!
ಈ ರೀತಿಯಾಗಿ ಮುಖ್ಯಮಂತ್ರಿ ತಮ್ಮ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ಮಾಡಿರುವ ಭ್ರಷ್ಟ ಸಹಾಯ, ಬಳ್ಳಾರಿ ಜಿಲ್ಲೆ ಗಣಿ ಮಾಫಿಯಾ ಹರಿಸುತ್ತಿರುವ ಹಣದ ಹೊಳೆಯನ್ನು ಸಹ ಮಸುಕು ಮಾಡಿಬಿಟ್ಟಿದೆ.
ಗಣಿ ಸಂಪತ್ತಿನ ಲೂಟಿ :
ಎಲ್ಲರಿಗೂ ತಿಳಿದಂತೆ ಗಣಿ ಉದ್ಯಮಿ-ಮಂತ್ರಿಗಳಾದ ಜನಾರ್ಧನ ರೆಡ್ಡಿ & ಕಂ.ಗೆ- ಬಿಜೆಪಿಯ ಕೇಂದ್ರ ವರಿಷ್ಠರಿಂದ ಶ್ರೀರಕ್ಷೆಯಿದೆ. ಗಣಿಗಾರಿಕೆ ಭ್ರಷ್ಟಾಚಾರವು ಬೆಳಕಿಗೆ ಬಂದನಂತರ, ಬಿಜೆಪಿ ನಾಯಕಿಯಾದ ಶ್ರೀಮತಿ ಸುಷ್ಮಸ್ವರಾಜ್ ರವರ ಜೊತೆಗೆ ಫೋಟೋ ತೆಗೆಸಿಕೊಂಡಿರುವದನ್ನು ನೋಡಿದರೆ, ಅವರುಗಳಿಗೆ ಬೆಂಬಲ ಎಲ್ಲಿಂದ ಹರಿಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಕಬ್ಬಿಣದ ಅದಿರಿನ ಬೆಲೆಯು ಒಂದು ಟನ್ಗೆ ರೂ.5,000 ದಿಂದ ರೂ.7,000ಕ್ಕೆ ಏರಿದಾಗ, ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ರಾಯಲ್ಟಿ ಹೆಸರಿನಲ್ಲಿ ಒಂದು ಟನ್ ಗೆ ಕೇವಲ ರೂ.27 ಮಾತ್ರ ಬರುತ್ತಿತ್ತು. ಅಪಾರ ಪ್ರಮಾಣದ ಅದಿರನ್ನು ಅಧಿಕ ಲಾಭಕ್ಕೆ ಅಕ್ರಮವಾಗಿ ರಫ್ತು ಮಾಡಲಾಗುತ್ತಿದೆ. ಲೋಕಾಯುಕ್ತ ಶೀ ಸಂತೋಷ್ ಹೆಗಡೆೆಯವರೇ ಸ್ವತಃ ಗಣಿಗಾರಿಕೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿದ್ದು ಗಣಿಮಾಫಿಯಾದ ಆಕ್ರೋಶಕ್ಕೆ ಒಳಗಾಗಿದ್ದಾರೆ. ಬಹುಸಂಖ್ಯಾತ ಗಣಿಗಾರಿಕೆಯ ಲೀಸ್ ಗಳನ್ನು ಬಲಿಷ್ಟ ಲಾಬಿಗಳು ಗುತ್ತಿಗೆಗೆ ಪಡೆದುಕೊಂಡಿವೆ ಎಂಬ ಅಂದಾಜಿದೆ. ಇಂತಹ ಲಾಬಿಗಳೇ ಲೀಸ್ ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಕಬ್ಬಿಣದ ಅದಿರನ್ನು ತೆಗೆದು ಶೇ.80ಕ್ಕೂ ಹೆಚ್ಚಿನ ಲಾಭವನ್ನು ಗಳಿಸುತ್ತಿದ್ದಾರೆ. ಒಂದು ದಿನದ ಆದಾಯವನ್ನು 39 ಕೋಟಿ ರೂ. ಎಂದು, ಅದರಲ್ಲಿ ನಿವ್ವಳ ಲಾಭ 17 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ದೊಡ್ಡ ಪ್ರಮಾಣದಲ್ಲಿದೆ. ಬೇಲೇಕೇರಿ ಬಂದರಿನಿಂದ 6 ಲಕ್ಷ ಟನ್ ಕಬ್ಬಿಣದ ಅದಿರು "ನಾಪತ್ತೆಯಾದ" ಬಗ್ಗೆ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಈ ಒಂದು ಪ್ರಕರಣವೇ ಸುಮಾರು 2500 ಕೋಟಿ ರೂ ಗಳಷ್ಟು ಬೆಲೆ ಬಾಳುತ್ತದೆ. ಕಾನೂನುಬಾಹಿರ ಹಾಗೂ ಕಾಂಟ್ರಾಕ್ಟ್ ಗಣಿಗಾರಿಕೆಯಿಂದಾಗಿ ರಾಜ್ಯಕ್ಕೆ ಸುಮಾರು 25,000 ಕೋಟಿಯಿಂದ 30,000 ಕೋಟಿ ರೂಗಳಷ್ಟು ನಷ್ಟವಾಗುತ್ತಿದೆ.
ಇದು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರದ ಒಂದು ಚಿತ್ರಣ. ಆದರೆ ಇನ್ನೊಂದು ಅಂಶವನ್ನು ಗಮನಿಸಬೇಕಿದೆ. ಆಂದ್ರ ಪ್ರದೇಶದ ಕಾಂಗ್ರೆಸ್ ಸರ್ಕಾರವು ತನ್ನ ಗಡಿಯುದ್ದಕ್ಕೂ ರೆಡ್ಡಿ ಸಹೋದರರ ಮಾಲೀಕತ್ವದ ಕಂಪನಿ ನಡೆಸುತಿರುವ ಅನೈತಿಕ ಗಣಿಗಾರಿಕೆಯಲ್ಲಿ ಶಾಮಿಲಾಗಿದೆ. ಆಂಧ್ರದಲ್ಲಿರುವ ಸಿಪಿಐ(ಎಂ) ಮತ್ತು ಇತರೆ ಪಕ್ಷಗಳು ಅನೈತಿಕ ಗಣಿಗಾರಿಕೆ ಹಾಗೂ ಸಹಸ್ರಾರು ಕೋಟಿ ರೂಗಳ ನಷ್ಟದ ಬಗ್ಗೆ ಧ್ವನಿ ಎತ್ತಿವೆ. ಗಡಿಯ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಈ ಗಣಿ ಮಾಫಿಯಾದವರನ್ನು ಪೋಷಿಸುತ್ತಿದ್ದಾರೆ ಹಾಗೂ ಅವರ ಹಿತಾಸಕ್ತಿಗಳನ್ನು ಕಾಪಾಡುತ್ತಿದ್ದಾರೆ.
ವ್ಯವಸ್ಥೆಯ ದೋಷ :
ನಮ್ಮ ಸುತ್ತಲೂ ಈಗ ಆವರಿಸಿರುವ ಭ್ರಷ್ಟಾಚಾರವನ್ನು ಕೆಲವು ರಾಜಕಾರಣಿಗಳ ಅಥವಾ ಕೆಲವು ಕಾರ್ಪೋರೇಟ್ ಗಳ ಅಥವಾ ಇತರರ ಭ್ರಷ್ಟತೆಯ ಕುರುಹುಗಳಾಗಿ ಮಾತ್ರ ನೋಡಿದರೆ ತಪ್ಪಾಗುತ್ತದೆ. ಈ ಕೊಳೆ ತುಂಬಾ ಆಳವಾಗಿದೆ ಮತ್ತು ವ್ಯವಸ್ಥಿತವಾಗಿದೆ. ಉನ್ನತ ಸ್ಥರಗಳಲ್ಲಿ ಭ್ರಷ್ಟಾಚಾರವು ಹೊಸ ಬೆಳವಣಿಗೆಯೇನಲ್ಲ. 1990ರಲ್ಲಿ ಉದಾರೀಕರಣ ಪ್ರಾರಂಭವಾದಾಗಿನಿಂದ ಇದು ದಾಪುಗಾಲಿಕ್ಕಿ ಮುನ್ನಡೆಯುತ್ತಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ್ ಕಾರಟ್ ರವರು ಇದನ್ನೇ ಹೀಗೆ ವಿವರಿಸುತ್ತಾರೆ :
ಉದಾರೀಕರಣದ ಹಿಂದಿನ ಮತ್ತು ನಂತರದ ಭ್ರಷ್ಟಾಚಾರದ ಸ್ವರೂಪದಲ್ಲಿನ ವ್ಯತ್ಯಾಸವೇನು? ಉದಾರೀಕರಣ ಪೂರ್ವ ಘಟ್ಟದಲ್ಲಿ, ನಿರ್ದಿಷ್ಟವಾಗಿ 80'ರ ದಶಕದ ಮಧ್ಯಭಾಗದವರೆಗೆ, ದೊಡ್ಡ ಬಂಡವಾಳದಾರರು ಲೈಸನ್ಸ್ ಗಳನ್ನು ಪಡೆಯಲು ಪ್ರಭಾವ ಬೀರುವುದರಲ್ಲೋ ಅಥವಾ ಕೆಲವು ನಿಯಮಾವಳಿಗಳನ್ನು ಕಡೆಗಣಿಸುವುದರಲ್ಲೋ ನೀಡುವ ಲಂಚದಿಂದ ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರದ ಮೂಲ ಹೊರಹೊಮ್ಮುತ್ತಿತ್ತು. ಇಂತಹ ಭ್ರಷ್ಟಾಚಾರದ ಪ್ರಕರಣಗಳು ನಿರ್ದಿಷ್ಟ ಪ್ರಾಜೆಕ್ಟ್ ಅಥವಾ ನಿಯಮಾವಳಿಗಳಿಗೆ ಸಂಬಂಧಿಸಿದ ನಿರ್ದಿಷ್ಟ ದೊಡ್ಡ ಬಂಡವಾಳದಾರ ಕುಟುಂಬ ಮತ್ತು ಸಂಬಂಧಿಸಿದ ಮಂತ್ರಿ ಅಥವಾ ಅಧಿಕಾರಿಗಳನ್ನು ಒಳಗೊಂಡಿರುತ್ತಿತ್ತು. ಈಗ ಉದಾರೀಕರಣ ಮತ್ತು ನಿಯಂತ್ರಣ ಮುಕ್ತತೆಯಿಂದಾಗಿ, ಒಟ್ಟಾರೆ ಸರ್ಕಾರದ ನೀತಿಯನ್ನೇ ವ್ಯಾಪಾರಕ್ಕಿಡಲಾಗಿದೆ. ಒಂದು ಕೈಗಾರಿಕೆಯ ಒಟ್ಟಾರೆ ನೀತಿಗಳನ್ನು ಅತಿ ಹೆಚ್ಚಿನ ಹರಾಜು ಕೂಗಲು ವಿದೇಶೀ ಮತ್ತು ದೇಶೀಯ ದೊಡ್ಡ ಬಂಡವಾಳದಾರರು ಮುಕ್ತವಾಗಿದ್ದಾರೆ. ಒಂದು ವೇಳೆ ಬೆಲೆ ಸೂಕ್ತವಾಗಿದ್ದರೆ, ರಾತ್ರೋ ರಾತ್ರಿ ಅಂತಹ ನೀತಿಗಳನ್ನು ಬದಲಾಯಿಸಬಹುದು. ಇಂತಹ ಬೆಳವಣಿಗೆ ಟೆಲಿಕಾಂ ರಂಗದಲ್ಲಿ ಯಾವುದೇ ಲಜ್ಜೆಯಿಲ್ಲದೆ ನಡೆದಿದೆ ಮತ್ತು ವಿದ್ಯುತ್, ತೈಲ ಮತ್ತು ಇತರೆ ಪ್ರಮುಖ ವಲಯಗಳ ಉದಾರೀಕೃತ ನೀತಿಗಳಲ್ಲಿ ಇದು ಮುಂದುವರೆದಿದೆ. ವಾಸ್ತವವಾಗಿ ಈ ಬಹುತೇಕ ವಲಯಗಳ ಪ್ರತಿಯೊಂದು ನೀತಿ ನಿರ್ಣಯಗಳನ್ನು, ಅಥವಾ ನೀತಿ ಬದಲಾವಣೆಯನ್ನು ಭಾರತೀಯ ದೊಡ್ಡ ಬಂಡವಾಳದಾರರ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಒಕ್ಕೂಟಗಳು ನೀಡುವ ಹಣವನ್ನು ಆಧರಿಸಿ ಮಾಡಲಾಗುತ್ತದೆ. ಎಲ್ಲಾ ಸಂಸ್ಥೆಗಳು ಮತ್ತು ಪ್ರಭುತ್ವದ ಏಜೆನ್ಸಿಗಳು ದೊಡ್ಡ ಬಂಡವಾಳದಿಂದ ಪ್ರೇರೇಪಿತವಾಗಿವೆ. ಬಹುರಾಷ್ಟ್ರೀಯ ಕಂಪನಿಗಳ ಮತ್ತು ಚಮಚಾ ಬಂಡವಾಳಶಾಹಿಯ ಮುಕ್ತ ಕಾರ್ಯಚರಣೆ ಹೊಂದಿರುವ ಥಾಯ್ಲೆಂಡ್, ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾದಂತಹ ದೇಶಗಳ ಮಟ್ಟಕ್ಕೆ ಭಾರತ ವೇಗವಾಗಿ ಮುನ್ನಡೆಯುತ್ತಿದೆ.
ದೊಡ್ಡ ಬಂಡವಾಳದಾರರು-ರಾಜಕಾರಣಿಗಳು-ಅಧಿಕಾರಶಾಹಿಯ ಕೂಟ ನವ-ಉದಾರವಾದಿ ವ್ಯವಸ್ಥೆಯ ಉಪ-ಉತ್ಪನ್ನವಾಗಿದೆ. ಭ್ರಷ್ಟಾಚಾರದ ಹಗರಣಗಳ ಮೊದಲ ಅಲೆ ನರಸಿಂಹರಾವ್ ಸರ್ಕಾರದ ಸಂದರ್ಭದಲ್ಲಿ ಬಂತು. ಬಂಡವಾಳಶಾಹಿ ಪಕ್ಷಗಳ ಉನ್ನತ ನಾಯಕರನ್ನು ಒಳಗೊಂಡ ಹವಾಲ ಹಗರಣ, ಬ್ಯಾಂಕ್ ಸೆಕ್ಯೂರಿಟೀಸ್ ಹಗರಣ, ಪೆಟ್ರೋಲ್ ಪಂಪ್ ಹಗರಣ, ಹೀಗೆ.. ಒಂದರ ನಂತರ ಒಂದು ಸಂಭವಿಸಿದವು. ಟೆಲಿಕಾಂ, ಮೈನಿಂಗ್ ಮತ್ತು ತೈಲ ಉತ್ಪಾದನೆ ನೀತಿಗಳು ಕೆಲವು ದೊಡ್ಡ ಬಂಡವಾಳಗಾರ ಕುಟುಂಬಗಳು ಮತ್ತು ಕೆಲವು ಕಾರ್ಪೋರೇಟ್ ಗಳ ಲಾಭಕ್ಕಾಗೇ ರೂಪುಗೊಂಡವು. ಬಂಡವಾಳದ ಶೇಖರಣೆಯ ಪ್ರಕ್ರಿಯೆಯಲ್ಲಿ ಪ್ರಭುತ್ವದ ನೀತಿಯು ಲಜ್ಜೆಗೆಟ್ಟ ಆಯುಧವಾಗಿದೆ.
ಕಾಂಗ್ರೆಸ್ ಪಕ್ಷವು ದೊಡ್ಡ ಬಂಡವಾಳದೊಂದಿಗಿನ ಭ್ರಷ್ಟಾಚಾರದ ಮೈತ್ರಿಯಲ್ಲಿ ಮುಳುಗಿಹೋಗಿದೆ. ಜೆಎಂಎಂ ಲಂಚ ಪ್ರಕರಣದಲ್ಲಿ ಅಂಬಾನಿ, ಎಸ್ಸಾರ್ ಮತ್ತು ವಿಡಿಯೋಕಾನ್ ಮುಂತಾದ ದೊಡ್ಡ ಬಂಡವಾಳಗಾರರು ಕಾಂಗ್ರೆಸ್ ನ ಉನ್ನತ ನಾಯಕರಿಗೆ ಲಂಚ ನೀಡಿದ ಸಿಬಿಐ ಪಟ್ಟಿಯನ್ನು ಮರೆಯುವುದಾದರೂ ಹೇಗೆ? ಆದರೆ ಈ ಪ್ರಕರಣದಲ್ಲಿ ಎಲ್ಲರೂ ಖುಲಾಸೆಯಾದರು ಎಂಬುದು ಬೇರೆ ಮಾತು.
ಬಿಜೆಪಿಗಾದರೂ ಇದಕ್ಕಿಂತ ಬೇರೆ ರೆಕಾರ್ಡ್ ಇಲ್ಲ. ಇದು ಅಧಿಕಾರದಲ್ಲಿದ್ದಾಗ ಸಾರ್ವಜನಿಕ ವಲಯದ ಕಂಪನಿಗಳ ಮಾರಾಟದ ಮೂಲಕ ದೊಡ್ಡ ಬಂಡವಾಳದಾರರಿಗೆ ಹಾಕಿದ ಮಣೆ, ದೇಶದ ಅಮೂಲ್ಯ ಸ್ವತ್ತುಗಳ ಮಾರಾಟ, ಟೆಲಿಕಾಂ ರಂಗ, ಪೆಟ್ರೋಲ್ ಪಂಪ್ ಮತ್ತು ಗ್ಯಾಸ್ ಏಜೆನ್ಸಿಗಳ ಮಾರಾಟ, ರಕ್ಷಣಾ ವ್ಯವಹಾರಗಳಲ್ಲಿ ಲೂಟಿ, ಹುಡ್ಕೋ ಹಗರಣ ಇಂತಹುದೇ ಮಾದರಿಯನ್ನು ತೋರಿಸುತ್ತದೆ. ಈಗ ಕರ್ನಾಟಕದಲ್ಲಿ ಭೂಕಬಳಿಕೆಗೆ, ಅಕ್ರಮ ಗಣಿಗಾರಿಕೆಗೆ ಮತ್ತೊಂದು ಹೆಸರೇ ಬಿಜೆಪಿ ಎನ್ನುವಂತಾಗಿದೆ.
ಭ್ರಷ್ಟಾಚಾರವನ್ನು ನೈತಿಕ ಮೌಲ್ಯಗಳ ಉಲ್ಲಂಘನೆಯಾಗಿ ಬಿಂಬಿಸುತ್ತಾ ಮತ್ತು ಅದನ್ನು ಒಂದು ನೈತಿಕ ಪ್ರಶ್ನೆಯಾಗಿ ಪರಿಗಣಿಸುವುದರಲ್ಲಿ ಬಂಡವಾಳಶಾಹಿಗೆ ಅನುಕೂಲವಾದ ಅಂಶವಿದೆ. ವ್ಯವಸ್ಥೆಯ ಮೂಲ ಬೇರುಗಳಿಂದ ಇದನ್ನು ಬೇರ್ಪಡಿಸುವ ತಂತ್ರ ಇದರಲ್ಲಿದೆ. ಚಮಚಾ ಬಂಡವಾಳಶಾಹಿ ಮತ್ತು ಭ್ರಷ್ಟಾಚಾರಗಳು ನವ-ಉದಾರವಾದಿ ವ್ಯವಸ್ಥೆಯ ಅವಳಿ-ಜವಳಿ ಎಂಬ ಅಂಶವನ್ನು ಮುಚ್ಚಿಡುವ ಪ್ರಯತ್ನವಿದಾಗಿದೆ.
ರಾಡಿಯಾ ಟೇಪ್ ಪ್ರಕರಣವು ದೊಡ್ಡ ಬಂಡವಾಳದಾರರು ಮತ್ತು ಸರ್ಕಾರದ ನಡುವಿನ ಸಹಜೀವನ ಸಂಬಂಧಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದೆ. ಕೆಲವು ಸಂಪಾದಕರು, ಪತ್ರಕರ್ತರು ಮತ್ತು ದೊಡ್ಡ ಬಂಡವಾಳದಾರರ ಏಜೆಂಟರ ನಡುವಿನ ಲಾಭದಾಯಕ ಸಂಬಂಧಗಳು ಮಧ್ಯಮವರ್ಗಗಳಿಗೆ ಷಾಕ್ ರೀತಿಯಲ್ಲಿ ಆಗಿರಬಹುದು. ಆದರೆ ಕಾರ್ಪೋರೇಟ್ ಮಾಧ್ಯಮಗಳಿಂದ ವ್ಯವಸ್ಥಿತವಾದ ನಿಂದನೆಗೆ ಒಳಗಾಗಿರುವ ಎಡಪಕ್ಷಗಳಿಗೆ ಇವು ಆಶ್ಚರ್ಯಕರವಾಗೇನೂ ಕಾಣುತ್ತಿಲ್ಲ. ಸ್ವತಃ ಕಾರ್ಪೋರೇಟ್ ಸ್ವರೂಪದ ಮಾಧ್ಯಮದ ಬಹುತೇಕ ವಿಭಾಗವು, ಪ್ರಜ್ಞಾಪೂರ್ವಕವಾಗಿ ಸರ್ಕಾರ ಹೇಗೆ ನವ-ಉದಾರವಾದೀ ವ್ಯವಸ್ಥೆಯಲ್ಲಿ ಕಾಯರ್ಾಚರಣೆ ಮಾಡುತ್ತಿದೆ ಎಂಬುದನ್ನು ಕಡೆಗಣಿಸುತ್ತಿದೆ. ದಯಾನಿಧಿ ಮಾರನ್ ಅಥವಾ ಎ.ರಾಜಾ ಯಾರು ಟೆಲಿಕಾಂ ಮಂತ್ರಿಗಳಾಗಬೇಕೆಂಬುದು, ಪರಸ್ಪರ ವಿರೋಧಿ ಕಾರ್ಪೋರೇಟ್ ಗಳಿಗೆ ಮಧ್ಯಪ್ರವೇಶಿಸಲು ಮತ್ತು ಪ್ರಭಾವ ಬೀರಲು ಮುಖ್ಯವಾಗುತ್ತದೆ. ಇಂತಹ ಆಧಾರದಲ್ಲಿ ಅಕಸ್ಮಾತ್ ಆಯ್ಕೆ ಆಗದಿದ್ದರೂ, ಮಂತ್ರಿಗಳ ಸಾಧನೆಯನ್ನು ಅವರು ದೊಡ್ಡ ಬಂಡವಾಳಿಗರ ಹಿತಾಸಕ್ತಿಗಳಿಗೆೆ ಎಷ್ಟು ಹತ್ತಿರವಾಗಿದ್ದಾರೆ ಎಂಬುದರ ಮೇಲೆ ತೀರ್ಮಾನಿಸಲಾಗುತ್ತದೆ. ಯುಪಿಎ-1 ಸರ್ಕಾರದಲ್ಲಿ ಹೇಗೆ ಮಣಿಶಂಕರ್ ಅಯ್ಯರ್ ರನ್ನು ಬದಲಾಯಿಸಿ ಮುರಳಿ ದೇವ್ರಾರನ್ನು ಪೆಟ್ರೋಲಿಯಂ ಖಾತೆಗೆ ತಂದರೆಂಬುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.
ರಾಜಕೀಯದಲ್ಲಿ ಹಣದ ಶಕ್ತಿಯನ್ನು ಎದುರಿಸಬೇಕು :
ಇತ್ತೀಚಿನ ಬಹಿರಂಗಗೊಂಡ ಸಂಗತಿಗಳು ಸತ್ಯವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿವೆ. ಕೇಂದ್ರದಲ್ಲಿ ಕೆಲವರು ವ್ಯಾಪಾರಿ ಹಿತಾಸಕ್ತಿಗಳ ಬೆಂಬಲಿಗರು ಮತ್ತು ಕೆಲವರು ಸ್ವತಃ ವ್ಯಾಪಾರಿಗಳೇ ಆಗಿರುವ ಮಂತ್ರಿಮಂಡಳದ ಮುಖಂಡತ್ವವನ್ನು ಪ್ರಧಾನ ಮಂತ್ರಿ ವಹಿಸಿದ್ದಾರೆ. ರಾಜ್ಯ ಸಕರ್ಾರದ ಪರಿಸ್ಥಿತಿಯೂ ಇದೇ ಆಗಿದೆ. ಕೆಲವು ಬಂಡವಾಳದಾರರ ಕಂಪನಿಗಳಿಗೆ ವಕೀಲರಾಗಿರುವವರು ಈಗ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಈಗ ತಾವು ವಹಿಸಿಕೊಂಡಿರುವ ಖಾತೆಗಳ ಮೂಲಕ ಅದೇ ಬಂಡವಾಳದಾರರ ಜೊತೆ ವ್ಯವಹರಿಸಬೇಕಾಗಿದೆ. ದೊಡ್ಡ ಬಂಡವಾಳದಾರ-ರಾಜಕಾರಣಿ-ಅಧಿಕಾರಶಾಹಿಯ ಭ್ರಷ್ಟ ಕೂಟದಿಂದ ಉದ್ಭವವಾದ ಅಕ್ರಮ ಹಣವು, ರಾಜಕೀಯ ವ್ಯವಸ್ಥೆಯೊಳಗೆ ಹರಿದು ರಾಜಕೀಯವನ್ನು ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತಿದೆ. ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಅಕ್ರಮ ಹಣ ಮತ್ತು ಈ ಭ್ರಷ್ಟಾಚಾರಕ್ಕೂ ನೇರವಾದ ಸಂಬಂಧವಿದೆ.
ಹೀಗಾಗಿ ಭ್ರಷ್ಟಾಚಾರವನ್ನು ಎದುರಿಸುವುದೆಂದರೆ, ಭ್ರಷ್ಟ ಕೂಟದ ಮೂಲಕ್ಕೆ ಏಟನ್ನು ಹಾಕಬೇಕಾಗುತ್ತದೆ. 2 ಜಿ ಹಗರಣದಲ್ಲಿ ಕೇವಲ ಮಂತ್ರಿ, ಅಧಿಕಾರಿಗಳು ಮಾತ್ರವಲ್ಲದೆ, ಅವರನ್ನು ಪ್ರೇರೇಪಿಸಿದ ಮತ್ತು ಲಂಚ ಕೊಟ್ಟ ಕಾರ್ಪೋರೇಟ್ ಗಳನ್ನೂ ಶಿಕ್ಷಿಸಬೇಕಾಗಿದೆ. ಸರ್ಕಾರ ಈಗ ವಹಿಸುತ್ತಿರುವ ಕ್ರಮಗಳು ಬಂಡವಾಳದಾರರನ್ನು ರಕ್ಷಿಸುವ ಪ್ರಯತ್ನವಾಗಿ ಕಾಣುತ್ತವೆ.
ಉಪಸಂಹಾರ :
ನವ ಉದಾರೀಕರಣದ ಜಗತ್ತಿನಲ್ಲಿ ಭ್ರಷ್ಟಾಚಾರದ ರಾಜಕೀಯ ಆರ್ಥಿಕತೆಯು ಒಂದು ಹೊಸ ತಿರುವನ್ನು ಪಡೆದಿದೆ. ಹಿಂದಿನ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ನಡೆಸಿದಾಗ ಸತತ ಹಗರಣಗಳಿಂದಾಗಿ, ದೊಡ್ಡ ಬಂಡವಾಳಿಗರ ಹಾಗೂ ಸರ್ಕಾರದ ಸಂಬಂಧಗಳನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರೆ, ಈಗಿನ ಯುಪಿಎ-2ರ ಸರ್ಕಾರವು ಅದನ್ನು ಮೀರಿಸಿದೆ. ಅದು ಕಾಂಗ್ರೆಸ್ ಆಗಲಿ ಅಥವಾ ಅದರ ಮಿತ್ರ ಪಕ್ಷಗಳಾಗಲಿ, ಈ ವಿಷಯದಲ್ಲಿ ಒಂದು ಹೊಸ ದಾಖಲೆಯನ್ನೇ ಸೃಷ್ಟಿಸಿ ಭಾರತ ದೇಶವೇ ಅವಮಾನ ಅನುಭವಿಸುವಂತೆ ಮಾಡಿವೆ. ಕರ್ನಾಟಕದ ಬಿಜೆಪಿ ಯಡಿಯೂರಪ್ಪ ಸರ್ಕಾರ ಕರ್ನಾಟಕವನ್ನು ನಂ.1 ಭ್ರಷ್ಟ ರಾಜ್ಯವೆಂಬ ಕೀರ್ತಿಗೆ ಭಾಜನವಾಗಿಸಿದೆ.

ಬನ್ನಿ - ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ .
ಭ್ರಷ್ಟಾಚಾರದ ವಿರುದ್ಧ ಪ್ರಚಾರಾಂದೋಲನಕ್ಕೆ ಸೇರಿ ಹಾಗೂ ತಪ್ಪಿತಸ್ತರನ್ನು ಶಿಕ್ಷಿಸುವಂತೆ ಒತ್ತಾಯಿಸಿ.
ಭ್ರಷ್ಟಾಚಾರದ ವಿರುದ್ಧ ಪ್ರಚಾರಾಂದೋಲನಕ್ಕೆ ಸೇರಿ ಹಾಗೂ ತಪ್ಪಿತಸ್ತರನ್ನು ಶಿಕ್ಷಿಸುವಂತೆ ಒತ್ತಾಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ