12.02.2010

ಡಿಸೆಂಬರ್ - 09 ; ರಾಜ್ಯಾದ್ಯಂತ ಹರತಾಳ

ಭ್ರಷ್ಟ ಬಿಜೆಪಿ ಸರಕಾರ ತೊಲಗಿಸಿ-ಪ್ರಜಾಪ್ರಭುತ್ವ ಉಳಿಸಿ

ಬಿಜೆಪಿಯೆಂಬ ಭ್ರಷ್ಟಾಚಾರ : 
* ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಕರ್ನಾಟಕ ಎಂಬ ಕುಖ್ಯಾತಿಗೆ ರಾಜ್ಯವನ್ನು ದೂಡಿದ ಕೀರ್ತಿ ಯಡಿಯೂರಪ್ಪ ಬಿಜೆಪಿ ಸರಕಾರಕ್ಕೆ ಸಲುತ್ತದೆ.
* ಬಿಜೆಪಿ ವರಿಷ್ಟರು ಮುಖ್ಯಮಂತ್ರಿ ಬಾಯಿಗೆ ಸಿಹಿ ತಿನ್ನಿಸುವ ಮೂಲಕ ಭ್ರಷ್ಟರ ಜೊತೆ ಇದ್ದೇವೆಂಬ ನೈತಿಕ ಅಧಃಪತನದ ಸಂದೇಶ ನೀಡಿದ್ದಾರೆ.
* ಇನ್ನು ಮುಂದೆ ಡಿನೋಟಿಫೈ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುವ ಮೂಲಕ ತಮ್ಮ ಅಕ್ರಮವನ್ನು ಒಪ್ಪಿಕೊಂಡಿದ್ದಾರೆ.
* ಬಳ್ಳಾರಿ ರೆಡ್ಡಿ & ಕಂ.ಯ ಹಗಲು ದರೋಡೆ - 2003-04 ರಿಂದ 2010 ಏಪ್ರಿಲ್ವರೆಗೆ ಸುಮಾರು 3.5 ಕೋಟಿ ಟನ್ ಅಕ್ರಮ ರಫ್ತಾಗಿದೆ. ಬಿಜೆಪಿ ಬಂದ ನಂತರವೇ ಸುಮಾರು 1.5 ಕೋಟಿ ಟನ್ ಅಕ್ರಮ ರಫ್ತಾಗಿದೆ. ಇದರ ಮೌಲ್ಯ 22,500 ಕೋಟಿ ರೂ.ಗಳು. ರೆಡ್ಡಿ ಬ್ರದರ್ಸ್ ಮಾತ್ರವಲ್ಲದೆ, ರಾಜ್ಯ-ಕೇಂದ್ರ ಬಿಜೆಪಿ ನಾಯಕರೂ ಇದರ ಫಲಾನುಭವಿಗಳು.
* ಇಂದಿನ ಸರ್ಕಾರ, ಖಂಡಿತವಾಗಿ ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಭ್ರಷ್ಟವಾಗಿದೆ ಎಂದು ನ್ಯಾ.ಸಂತೋಷ ಹೆಗ್ಡೆಯವರೇ ಹೇಳುವಂತಾಗಿದೆ.
* ಸರ್ಕಾರದ ಮತ್ತು ರೈತರ ಜಮೀನನ್ನು ಲೂಟಿ ಹೊಡೆಯುವುದರಲ್ಲಿ ನಂ. 1 
* ನಕಲಿ ಹೆಸರಲ್ಲಿ ಬ್ಯಾಂಕಿಗೆ ಮತ್ತು ಕೆ.ಐ.ಎ.ಡಿ.ಬಿ.ಗೆ ವಂಚನೆ-ರೈತರಿಗೆ ಟೋಪಿ ಹಾಕಿದ ಕೃಷ್ಣಯ್ಯ ಶೆಟ್ಟಿ ರಾಜೀನಾಮೆ ಮರೆಯುವ ಮೊದಲೇ, ಟೋಪಿ ಮಂತ್ರಿ ಕಟ್ಟಾ ಮಗ ಜಗದೀಶನ ಭೂಸ್ವಾಹ ಪ್ರಕರಣ. ಎಕರೆ 5-10 ಲಕ್ಷಕ್ಕೆ ರೈತರಿಂದ ಖರೀದಿಸಿ ಸರ್ಕಾರಕ್ಕೆ 45 ಲಕ್ಷಕ್ಕೆ ಮಾರುವ ವ್ಯಾಪಾರಿ ಈ ಸರ್ಕಾರದ ಮಂತ್ರಿ.
* ಕೈಗಾರಿಕಾ ಅಭಿವೃದ್ಧಿ ಹೆಸರಲ್ಲಿ ನೂರಾರು ಎಕರೆ ನುಂಗುತ್ತಿರುವ ಕೈಗಾರಿಕಾ ಮಂತ್ರಿ ಮುರುಗೇಶ ನಿರಾಣಿ.
* ನಾನು ಸ್ವಚ್ಛ ಎನ್ನುತ್ತಲೇ ನೂರಾರು ಎಕರೆ ಮಾಡಿದ ಶೋಭಾ ಕರಂದ್ಲಾಜೆ.
* ನಾನೇನು ಕಡಿಮೆಯೇ ಎನ್ನುತ್ತಾ ಡಿನೋಟಿಫಿಕೇಷನ್ ಮಾಡಿಸಿಕೊಂಡ ಅಶೋಕ.
* ಮಗ, ಮಗಳು, ಅಳಿಯ ಇತ್ಯಾದಿ ಇತ್ಯಾದಿಗಳಿಗೆ ಕಂಡ-ಕಂಡಲೆಲ್ಲಾ ಭೂಮಿ ಗುಳುಂ ಮಾಡಲು ಅವಕಾಶ. ಬಡವರಿಗೆ ರೈತರಿಗೆ ವಂಚನೆ. ಗಣಿ-ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಶಾಮೀಲು, ನೂರಾರು ಕೋಟಿ ಭ್ರಷ್ಟಾಚಾರ. ಅದಕ್ಕಾಗಿ ಭೋಗಸ್ ಸಹಿ ಮಾಡಲು ಹೇಸದ ಮುಖ್ಯಮಂತ್ರಿ ಮಗ. ಮಗ ತಪ್ಪು ಮಾಡಿದರೆ ನಾನೇನು ಮಾಡಲಿ ಎನ್ನುವ ಮುಖ್ಯಮಂತ್ರಿ.
* ಬಡವರಿಗೆ ಸೈಟ್ ನೀಡಲಾರದ ಯಡಿಯೂರಪ್ಪ, ದುಬಾರಿ ಬೆಲೆಯ ಬಿಡಿಎ ಸೈಟುಗಳನ್ನು ಶ್ರೀಮಂತ ಶಾಸಕರಿಗೆ ಹಂಚಿಕೆ ಮಾಡಿದ್ದು. ಸಾಲದು ಎಂಬಂತೆ ಅಕ್ರಮ ನಿವೇಶನ ಪಡೆದಿರುವರೆನ್ನಲಾದ ನ್ಯಾ.ಪದ್ಮರಾಜ್ ನೇತೃತ್ವದಲ್ಲಿ ತನಿಖೆ. ಅಕ್ರಮ ಮಾಡಿದವರೇ ಅಧಿಕಾರದಲ್ಲಿದ್ದರೆ ನ್ಯಾಯವೆಲ್ಲಿ ಸಿಗುತ್ತದೆ.
* ಈ ಸರ್ಕಾರ ಬಂದಾಗಿನಿಂದಲೂ ಲೂಟಿ ಮಾಡುವುದರಲ್ಲಿ ನಿರತ. ಪೊಲೀಸ್ ವಗರ್ಾವಣೆಯಲ್ಲಿ, ಅಧಿಕಾರಿಗಳ ವಗರ್ಾವಣೆ, ಬಿಬಿಎಂಪಿ ರಾತ್ರೋರಾತ್ರಿ ಟೆಂಡರ್, ನಕಲಿ ವರ್ಕ್ ಕೋಡ್, ಹೀಗೆ.., ಸಾವಿರಾರು ಕೋಟಿ ಬಿಜೆಪಿ ಜೇಬಿಗೆ. ಅಕಸ್ಮಾತ್ !, ಸಚಿವ ರಾಮಚಂದ್ರಗೌಡ ಮೆಡಿಕಲ್ ಕಾಲೇಜ್ ನೇಮಕಾತಿಯಲ್ಲಿ ಸಿಕ್ಕಿಬಿದ್ದು ರಾಜೀನಾಮೆ.
* ಒಬ್ಬರ ನಂತರ ಒಬ್ಬರು ಮಂತ್ರಿಗಳು ಅಕ್ರಮಗಳಲ್ಲಿ ಭಾಗಿಯಾಗಿ ರಾಜೀನಾಮೆ ನೀಡುತ್ತಲ್ಲೇ ಇದ್ದಾರೆ. ಹಾಲಪ್ಪ ಅತ್ಯಾಚಾರ ಮಾಡಿ ಹೊರಗೆ ಬಿದ್ದ, ಇವರನ್ನು ರಕ್ಷಿಸಲು ಹೆಣಗಾಡಿದ್ದು ಬಿಜೆಪಿ ನಾಯಕತ್ವ.
* ಯಡಿಯೂರಪ್ಪ ಸ್ವಜಾತಿ/ಸ್ವಜನ ಪಕ್ಷಪಾತಕ್ಕೆ ಮತ್ತೊಂದು ಹೆಸರಾದರು. ಒಂದು ಜಾತಿ ಮುಖಂಡನ ರೀತಿಯ ವರ್ತನೆ. ಇದಕ್ಕೆ ಬೆಂಬಲವಾಗಿ ಕೆಲವು ಮಠ-ಮಾನ್ಯಗಳ ಲಜ್ಜೆಗೆಟ್ಟ ನಿಲುವುಗಳು. ಪ್ರತಿ ಬಜೆಟ್ ನಲ್ಲಿ ಬಿಜೆಪಿ ಸರ್ಕಾರ ಮಠಗಳಿಗೆ ನೀಡಿದ ಹಣದ ಋಣ ತೀರಿಸುವ ವಿಧಾನ.

ಬಿಜೆಪಿ ಸರ್ಕಾರ ಉಳಿದರೆ - ಪ್ರಜಾಪ್ರಭುತ್ವಕ್ಕೆ ಗಂಡಾಂತರ :
* ಭ್ರಷ್ಟ ಗಣಿ-ರಿಯಲ್ ಎಸ್ಟೇಟ್ ಹಣವನ್ನು ಬಳಸಿ ಆಪರೇಷನ್ ಕಮಲ ಎಂಬ ಬುಡಮೇಲು ಕೃತ್ಯ ನಡೆಸಿದರು.
* ನಿರಂತರ ರೆಸಾರ್ಟ್ ರಾಜಕೀಯಕ್ಕೆ ಮುನ್ನುಡಿ ಬರೆದರು. ಶಾಸಕರನ್ನು ಕೊಳ್ಳುವ-ಮಾರುವ ಹೊಸ ವಿಧಾನವನ್ನು ಬಿಜೆಪಿ ಸಂಶೋಧನೆ ಮಾಡಿದರು.
* ವಿಶ್ವಾಸಮತ ಸಂದರ್ಭದಲ್ಲಿ ಸ್ವೀಕರ್ ದುರ್ಬಳಕೆ-ಸಂವಿಧಾನದ ಅಪಮೌಲ್ಯ. ನೈತಿಕವಾಗಿ ಬಹುಮತವಿಲ್ಲದ ಸರ್ಕಾರವಿದು. 
* ಆಯಾರಾಂ-ಗಯಾರಾಂ ವಿಚಾರದಲ್ಲಿ ಕಾಂಗ್ರೆಸ್ ನ್ನೂ ಮೀರಿಸಿದ ಸಾಧನೆ.
* ತಾವೇ ಪ್ರತ್ಯೇಕ ಪಕ್ಷ ಮಾಡುವೆ ಎಂದು ವರಿಷ್ಟರಿಗೆ ಬೆದರಿಕೆ ಹಾಕಿದ ಮುಖ್ಯಮಂತ್ರಿ ಕಾಂಗ್ರೆಸ್-ಬಿಜೆಪಿ ಎರಡೇ ಪಕ್ಷಗಳಿರಬೇಕೆಂಬ ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿಯಾದ ಅಣಿಮುತ್ತುಗಳನ್ನು ಉದುರಿಸುತ್ತಿದ್ದಾರೆ.
* ಚುನಾವಣೆಗಳಲ್ಲಿ ಕಪ್ಪು ಹಣದ ಬಳಕೆ ಎಗ್ಗಿಲ್ಲದೆ ಬಳಸುವ ಪರಿಸ್ಥಿತಿ ನಿರ್ಮಾಣ ಮಾಡಿದರು. ನ್ಯಾಯಬದ್ಧವಾಗಿ ಯಾರೂ ಚುನಾವಣೆಗಳಲ್ಲಿ ಸ್ಪಧರ್ಿಸಬಾರದೆನ್ನುವ ಪರಿಸ್ಥಿತಿ ನಿರ್ಮಿಸಿದರು.
* ಬೆಲೆಕೇರಿ ಬಂದರಿನಿಲ್ಲಿ 6 ಲಕ್ಷ ಟನ್ ಅದಿರು ನಾಪತ್ತೆ ಕಂಡುಹಿಡಿದ ಅಧಿಕಾರಿ ಅಮಾನತು. ತನಿಖೆ ಮಾಡಲು ಅಸಹಕಾರ. ಲೋಕಾಯುಕ್ತರೇ ರಾಜೀನಾಮೆ ಕೊಡುವಂತಹ ಪರಿಸ್ಥಿತಿ ನಿರ್ಮಾಣ - ಅವರಿಗೆ ಸಂಪೂರ್ಣ ಅಸಹಕಾರ.
* ಬಿಜೆಪಿ-ಯಡಿಯೂರಪ್ಪ ಇರುವಷ್ಟು ದಿನವೂ ಪ್ರಜಾಪ್ರಭುತ್ವಕ್ಕೆ ಗಂಡಾಂತರ.
* ಭಷ್ಟ ಸಚಿವರು, ದುಷ್ಟ ಸಂಬಂಧಿಗಳು, ಲಂಚಕೋರ ಅಧಿಕಾರಿಗಳು, ಲೂಟಿಕೋರ ಕಾಂಟ್ರಾಕ್ಟರ್ ಗಳು, ಭೂಗಳ್ಳರು, ಗಣಿ ಮಾಫಿಯಾಗಳದೇ ಬಿಜೆಪಿ ಸರ್ಕಾರದಲ್ಲಿ ದರ್ಬಾರು. ಶಾಸಕರ ರೆಸಾರ್ಟ್ ಮಂಗಾಟಗಳು ಅಸಹ್ಯ ಹುಟ್ಟಿಸಿವೆ. ರೈತನ ಮೇಲೆ ಪ್ರಮಾಣ ಮಾಡಿದ ಈ ಸರ್ಕಾರಕ್ಕೆ ಇರುವ ನಿಷ್ಟೆ ಯಾವುದು ?
* ಜನರ ಬಗ್ಗೆ ಕಾಳಜಿಯಾಗಲೀ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಾಗಲೀ, ರಾಜ್ಯಕ್ಕೆ ರಕ್ಷಣೆಯಾಗಲೀ ಇವರಿಂದ ಸಿಗಲು ಸಾಧ್ಯವಿಲ್ಲ.


ಸಾಮಾಜಿಕ ನ್ಯಾಯದ ವಂಚನೆ :
ಮುಂಬರುವ ತಾಲ್ಲೂಕು/ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಂಚಿಸಲು ಬಿಜೆಪಿ ಹುನ್ನಾರ ನಡೆಸಿದೆ. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುವ ಹಾಗೆ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಬರಲು ಬಿಜೆಪಿ ರಾಮಾಜೋಯಿಸ್ ವಾದ ಮಾಡಿದ್ದಾರೆ. ಸರ್ಕಾರ ವಿಶೇಷ ಅಧಿವೇಶನ ಕರೆಯದೆ ವಂಚಿಸುತ್ತಿದೆ.

ಜನತೆಗೆ ಬಗೆಯುತ್ತಿರುವ ದ್ರೋಹ :
* ಬಡವರಿಗೆ 2 ರೂ.ಗೆ ಕೆ.ಜಿ. ಅಕ್ಕಿ ಮರೆತರು.
* ಕಳೆದ ವರ್ಷ ಮಳೆ ನೆರೆಗೆ ಸಿಕ್ಕಿ ಸಂತ್ರಸ್ತರಾದವರಿಗೆ ಈ ವರ್ಷ ಮಳೆ ಮುಗಿದರೂ ಮನೆ ಕೊಡಲಿಲ್ಲ. ಅದರಲ್ಲೂ ನೂರಾರು ಕೋಟಿ ಲೂಟಿ.
* ರೈತರಿಗೆ ಉಚಿತ ವಿದ್ಯುತ್ ಎಂದರು. ನೆಟ್ಟಿಗೆ 4 ಗಂಟೆ ವಿದ್ಯೂತ್ತೂ ಇಲ್ಲ. ಖಾಸಗಿ ವಿದ್ಯತ್ ಖರೀದಿಯಲ್ಲಿ ಲೂಟಿ.
* ಮಳೆಯಿಂದ ಬೆಳೆ ನಾಶವಾದ ರೈತರಿಗೆ ಪರಿಹಾರವಿಲ್ಲ. ಬೆಂಬಲ ಬೆಲೆಯಿಲ್ಲ. ರೈತರಿಗೆ ಗುಂಡಿಟ್ಟು ಕೊಂದರು.
* ಕೆ.ಐ.ಎ.ಡಿ.ಬಿ. ಹೆಸರಲ್ಲಿ ರಾಜ್ಯಾದ್ಯಂತ ಭೂಮಿ ಲೂಟಿಗೆ ನಿರ್ಧಾರ-ಅದಕ್ಕಾಗಿ ವಿಶ್ವ ಬಂಡವಾಳದಾರರ ಸಮಾವೇಶ.
* ಬೆಲೆ ಏರಿಕೆ, ಮನೆ ಬಾಡಿಗೆ, ದುಬಾರಿ ಸಾರಿಗೆ ದರ, ವೇತನ ಹೆಚ್ಚಳವಿಲ್ಲ, ಕನಿಷ್ಟ ಕೂಲಿ ಭದ್ರತೆಯಿಲ್ಲದ ಕಾರ್ಮಿಕರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ.
* ಯಡಿಯೂರಪ್ಪ ನಿತ್ಯ ಜಪಿಸುತ್ತಿರುವ ಅಭಿವೃದ್ಧಿ ಮಂತ್ರ ಜನತೆಯ ಅಭಿವೃದ್ಧಿಯಲ್ಲ. ತನ್ನ-ತನ್ನ ಕುಟುಂಬದ, ಭ್ರಷ್ಟ ಮಂತ್ರಿಗಳ ಅಭಿವೃದ್ಧಿಯನ್ನೇ ಹೀಗೆ ಹೇಳುತ್ತಿದ್ದಾರೆ.

ಆದ್ದರಿಂದ ಬಿಜೆಪಿಯ ಇಂತಹ ಕಪಟ, ವಂಚಕ, ಭ್ರಷ್ಟ, ಅನೈತಿಕ ಆಡಳಿತವನ್ನು ಮುಂದುವರಿಯಲು ಜನತೆ ಬಿಡಬಾರದು. ಜನತೆಯ ಪ್ರತಿರೋಧದಿಂದ ಇವರನ್ನು ಕೆಳಗಿಳಿಸಬೇಕು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 9 ರಂದು ಸಿಪಿಐ(ಎಂ), ಸಿಪಿಐ, ಫಾರ್ವರ್ಡ್ ಬ್ಲಾಕ್, ದ.ಸಂ.ಸ.(ಅಂಬೇಡ್ಕರ್ ವಾದ), ಮತ್ತಿತರ ಜನಪರ ಸಂಘಟನೆಗಳು ನಡೆಸುತ್ತಿರುವ ರಾಜ್ಯವ್ಯಾಪಿ ಹರತಾಳವನ್ನು ಯಶಸ್ವಿಗೊಳಿಸಲು ಮನವಿ ಮಾಡುತ್ತೇವೆ.

ಡಿಸೆಂಬರ್ 9, ಬೆಳಿಗ್ಗೆ 10 ಗಂಟೆಗೆ ಟೌನ್ಹಾಲ್ ಸರ್ಕಲ್ ನಿಂದ ಹೊರಟು
ವಿಧಾನಸೌಧ ಚಲೋ
ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ 

ಕಾಮೆಂಟ್‌ಗಳಿಲ್ಲ: