ನಿನ್ನೆ ಮಂಡಿಸಿದ ಬಜೆಟ್ ಹಾಗೂ ಕೃಷಿ ಬಜೆಟ್, ಹಾಗೂ ಇತ್ತೀಚಿನ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನಗಳು, ಅವುಗಳಲ್ಲಿ ಅಡಕವಾಗಿರುವ ಬಿಜೆಪಿ ಸರಕಾರದ ನೀತಿಗಳು ಜನರ ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆ ಸಿ.ಪಿ.ಐ.(ಎಂ) ಪಕ್ಷದ ನಿಲುವನ್ನ ವಿವರಿಸಲು ಈ ಪತ್ರಿಕಾ ಗೋಷ್ಠಿಯನ್ನ ಏರ್ಪಡಿಸಲಾಗಿದೆ.
ಮತದಾರರನ್ನ ಕೊಳ್ಳಲು ಸಕರ್ಾರದ ಹಣ : ರಾಜ್ಯದ ಬೀಜೆಪಿ ಸರ್ಕಾರ ಎದುರಿಸುತ್ತಿರುವ, ಹೊರ ಹಾಗೂ ಒಳ ಕುತ್ತುಗಳ ಹಿನ್ನೆಲೆಯಲ್ಲಿ ಸರ್ಕಾರದ ಉಳಿವಿನ ಬಗ್ಗೆ ಗಾಬರಿಗೊಂಡಿರುವ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತದಾರರನ್ನ ಕೊಂಡುಕೊಳ್ಳಲು ಸಕರ್ಾರದ ಹಣವನ್ನ ಬಳಕೆಮಾಡಲು ಬಜೆಟ್ ಎಂಬ ಸಂವಿಧಾನಿಕ ಸಾಧನವನ್ನ ದುರ್ಬಳಕೆ ಮಾಡುವದೇ ಬಜೆಟ್ ಹಾಗೂ ಕೃಷಿ ಬಜೆಟ್ ನ ಉದ್ದೇಶವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರಂತೂ, ಇದು ತಮ್ಮ ಕೊನೆಯ ಬಜೆಟ್ ಎಂದೇ ಭಾವಿಸಿ 17,000 ಕೋಟಿ ರೂ,ಗಳ ಹೆಚ್ಚಿನ ಸಾಲವನ್ನೆತ್ತಿ ಮುಂದಿನ ಬಜೆಟ್ಗಳನ್ನ ಅಪಾಯಕ್ಕೆ ಸಿಲುಕಿಸಿದ್ದಾರೆ.
ಕೃಷಿ ಬಜೆಟ್. :
ಕೃಷಿ ಬಜೆಟ್ ಎಂದು ಬಹಳ ಬಾಜಾಬಜಂತ್ರಿಗಳಿಂದ ನಿನ್ನೆ ಮಂಡಿತವಾಗಿರುವ ಬಜೆಟ್, ಒಂದುಕಡೆ ಮತದಾರರನ್ನ ಕೊಳ್ಳುವ ಬಜೆಟ್ ಆದರೆ ಮತ್ತೊಂದುಕಡೆ ಭೂಮಾಫಿಯಾಗಳ ಬಜೆಟ್, ರೈತರಿಂದ ಭೂಅಪಹರಣದ ಬಜೆಟ್ ಆಗಿದೆ. ದೇವರಾಜ್ ಅರಸುಕಾಲದ ಜನಪರ ಭೂಸುಧಾರಣೆಯ ಹೃದಯಕ್ಕೇ ಈರಿಯುವ ಬಜೆಟ್ ಆಗಿದೆ. ಹೀಗಾಗಿ ರೈತರನ್ನ ನಿರ್ಗತಿಕರನ್ನಾಗಿಸುವ ರೈತವಿರೋಧಿ ಹಾಗೂ ಕೃಷಿವಿರೋಧಿ ಬಜೆಟ್ ಆಗಿದೆ. ಅದೇಸಮಯದಲ್ಲಿ ಕೃಷಿಯಲ್ಲಿ ತೊಡಗಿರುವ ಜನರಲ್ಲಿ ಶೇ.80% ರಷ್ಟು ಭಾಗದ ಕೃಷಿಕೂಲಿಕಾರರ ಬಗ್ಗೆ ಒಂದೇ ಒಂದು ಮಾತಾಡದ ಬಜೆಟ್ ಕೃಷಿಬಜೆಟ್ ಆಗುವುದು ಹೇಗೆ?
ಭೂಸ್ವಾಧಿನವೋ ಭೂಅಪಹರಣವೋ : ರಾಜ್ಯ ಸರಕಾರ ಕಳೆದ ಮೂರುವರ್ಷಗಳಿಂದ ಸರ್ಕಾರದಿಂದ ಹಾಗೂ ಇತರ ಖಾಸಗಿ ಉದ್ಯಮಿಗಳಿಂದ ಅಪಾರ ಪ್ರಮಾಣದ ಭೂಸ್ವಾಧೀನಕ್ಕೆ ಮುಂದಾಗಿರುವದು ಎಲ್ಲರಿಗೂ ತಿಳಿದ ವಿಷಯ. ಈ ದಿಶೆಯಲ್ಲಿ, ಕೆ.ಐ.ಎ.ಡಿ.ಬಿ.ಯ ಭೂಹಗರಣಗಳೂ ಬೆಳಕಿಗೆ ಬಂದಿವೆ. ಜಾಗತಿಕ ಬಂಡವಾಳಿಗರ ಸಮಾವೇಶ, ಭೂಬ್ಯಾಂಕ್, ಖಾಸಗಿ - ಸಕರ್ಾರಿ ಸಹಭಾಗಿತ್ವದ ರಸ್ತೆಗಳು, ಇತ್ಯಾದಿಗಳ ಹೆಸರಿನಲ್ಲಿ ಹಲವು ಲಕ್ಷ ಎಕರೆಗಳನ್ನ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ, ಮುಖ್ಯವಾಗಿ ಬಳ್ಳಾರಿ, ಬಿಜಾಪುರ, ಜಿಲ್ಲೆಗಳಲ್ಲಿ ಒಂದು ಉಕ್ಕು ಕಾಖರ್ಾನೆಯ ಸ್ಥಾಪನೆಗೆ, 8-10,000 ಎಕರೆಗಳನ್ನ ಯಾವುದೇ ಮಾನದಂಡಗಳಿಲ್ಲದೇ, ಹುಚ್ಚಾಪಟ್ಟೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವದನ್ನ, ಅಗ್ಗದ ಬೆಲೆಗೆ ರೈತರು ಭೂಮಿಯನ್ನ ಮಾರಲು ನಿರ್ಭಂಧ ಹೇರಿರುವದನ್ನ ಕಾಣುತ್ತಿದ್ದೇವೆ. ಇದಕ್ಕೆ ಬಳ್ಳಾರಿಜಿಲ್ಲೆಯ ರೈತರು ನಿರಂತರ ಸಂಘರ್ಷ ನಡೆಸಿದ್ದಾರೆ. ಈ ಭೂಸ್ವಾಧೀನಗಳನ್ನ ನಿಲ್ಲಿಸಿ ರೈತರ ಬದುಕನ್ನ ನಾಶಮಾಡುವದನ್ನ ನಿಲ್ಲಿಸುವದರ ಬಗ್ಗೆ, ಒಂದು ಸಕಾರಣ ಬೂಸ್ವಾಧೀನ ನೀತಿ ಆರೋಗ್ಯಕರ ಭೂಬೆಲೆ ನೀತಿಯಬಗ್ಗೆ ಒಂದುಮಾತೂ ಈ ಬಜೆಟ್ ನಲ್ಲಿಲ್ಲ. ರಾಜ್ಯದ ಕೃಷಿಯ ಉಳಿವಿನ, ರೈತರ ಬದುಕಿನ ಒಂದುಪ್ರಮುಖ ಪ್ರಶ್ನೆಯ ಬಗ್ಗೆ ಈ ಕೃಷಿಬಜೆಟ್ ಗಮನ ಹರಿಸಿಲ್ಲ ಎನ್ನುವದೇ, ಇದು ಕೃಷಿಯ ಉದ್ದಾರಕ್ಕಾಗಿ ತಂದ ಬಜೆಟ್ ಅಲ್ಲಾ ಎನ್ನುವದನ್ನ ಸಾಬೀತುಪಡಿಸುತ್ತದೆ.
ಆದರೆ ಅದೇ ಸಮಯದಲ್ಲಿ, '' ಸಾರ್ವಜನಿಕರಿಗೆ ಭೂಲಭ್ಯತೆ ಹೆಚ್ಚಿಸಲು'' ಎಲ್ಲಾ ಉದ್ದೇಶಗಳಿಗೆ ಸುಲಭವಾಗಿ ಭೂಮಿ ದೊರಕುವಂತೆ ಮಾಡಲು'' ಭೂಸುಧಾರಣಾಕಾಯ್ದೆ ಹಾಗೂ ಭೂಕಂದಾಯ ಕಾಯ್ದೆಗಳನ್ನ ತಿದ್ದುಪಡಿಮಾಡುವದೆಂದು ಸರ್ಕಾರ ಘೋಷಿಸಿದೆ. ಬಜೆಟ್ ಘೋಷಣೆಯ ಜೊತೆಜೊತೆಯಲ್ಲಿಯೇ ಭೂಸುಧಾರಣಾ ಕಾಯ್ಡೆಗೆ ತಿದ್ದುಪಡಿಗಳನ್ನೂ ಸಚಿವ ಸಂಪುಟ ಅಂಗೀಕರಿಸಿದೆಯೆಂದೂ ವರದಿಯಾಗಿದೆ.
ಈ ತಿದ್ದುಪಡಿಗಳು ಈಗಾಗಲೇ ಹೇಳಿದಂತೆ ಯಾವುದೇ ನಿರ್ಭಂಧಗಳಿಲ್ಲದೇ, ಯಾರು ಬೇಕಾದರೂ ಎಷ್ಟು ಬೇಕಾದರೂ, ಕೃಷಿಭೂಮಿಯನ್ನ ಕೊಳ್ಳಲು, ಅಮಾಯಕ ರೈತರನ್ನ ಬಲಿತೆಗೆದುಕೊಳ್ಳಲು, ಭೂಮಾಫಿಯಾಕ್ಕೆ, ದೊಡ್ಡಕಂಪೆನಿಗಳಿಗೆ ನೀಡುವ ಸ್ವಾತಂತ್ರ್ಯವಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಂತೆ, ಕೃಷಿಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಕೃಷಿ-ವಾಣಿಜ್ಯನೀತಿ, ಜಾಗತಿಕ ಹಾಗೂ ದೇಶದ ದೊಡ್ಡಬಂಡವಾಳದಾರರಿಗೆ, ಕೃಷಿಭೂಮಿಯನ್ನ ಲಪಟಾಯಿಸಲು ಸಹಕಾರನೀಡುವ ಯೋಜನೆಗಳೇ ಆಗಿವೆ. ಇದು ರೈತರಿಗೆ, ಆಹಾರೋತ್ಪಾದನೆಗೆ ಒಟ್ಟಾರೆ ಕೃಷಿಗೆ ಮಾರಕವಾಗಿದೆ.
ಸಾವಯವ ಕೃಷಿ, ಗೋಶಾಲೆ, ಆಯುರ್ವೇದದ ಮೂಲಿಕೆಗಳ ಬೆಳವಣಿಗೆಗೆ, ಜೈವಿಕ ಇಂಧನದ ಹೆಸರಿನಲ್ಲಿ ಅರಣ್ಯ ಭೂಮಿಯು ಸೇರಿದಂತೆ ಸರ್ಕಾರಿ ಭೂಮಿಯನ್ನು ಸಂಘ ಪರಿವಾರದ ಅನೇಕ ಸಂಸ್ಥೆಗಳಿಗೆ ಭೂಮಿ ನೀಡುವ, ಭೂಮಿಯನ್ನು ಕೊಂಡು ನೀಡುವ ಒಳಹುನ್ನಾರವನ್ನು ಅನೇಕ ಯೋಜನೆಗಳು ಹೊಂದಿವೆ.
ಮತದಾರರನ್ನ ಕೊಳ್ಳಲು ಸರಕಾರದ ಹಣ :
ಸರ್ಕಾರದ ಹಣವನ್ನ ಅಪಾರ ಪ್ರಮಾಣದಲ್ಲಿ ಸಾಲಎತ್ತಿ ಮಾಡಲು ಹೊರಟಿರುವದೇನು? ಹಲವು ಸಾವಿರ ಕೋಟಿಗಳನ್ನ ಕೃಷಿಅಭಿವೃದ್ದಿಯ ಹೆಸರಿನಲ್ಲಿ, ಇನ್ನೂ ಬೇರೆ ಬೇರೆ ಹೆಸರಿನಲ್ಲಿ ಜನರಿಗೆ ಹಣ ಹಂಚುವುದೇ ಕೃಷಿ ಬಜೆಟ್ ಹಾಗೂ ಸಾಮಾನ್ಯ ಬಜೆಟ್ನ ಮುಖ್ಯಧ್ಯೇಯವಾಗಿದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದಾಗಿದೆ, ಅದರಲ್ಲಿ ಒಂದು ಉದಾಹರಣೆ ಮಾತ್ರ ಸಾಕು. ಎರಡು ಎಕರೆಗಿಂತ ಕಡಿಮೆ ಭೂಮಿ ಇರುವ ಸುವರ್ಣಭೂಮಿ ಎಂಬ ಹೆಸರಿನಲ್ಲಿ 10 ಲಕ್ಷ ಕುಟುಂಬಗಳಿಗೆ ಒಂದು ಕುಟುಂಬಕ್ಕೆ 10,000 ರೂನಂತೆ ನೇರ ಹಣ ಸಂದಾಯ ಮಾಡುವುದು ಈ ಯೋಜನೆ. ಅದಕ್ಕೆ ಪ್ರೋತ್ಸಾಹಧನವೆಂದು ಹೆಸರಿಡಲಾಗಿದೆ. ಹೀಗೆ ಹಣ ಹಂಚುವ ಈ ಹೋಜನೆಯನ್ನು ಯಾವುದೇ ತಾಂತ್ರಿಕ ಮಾತುಗಳಲ್ಲಿ ಮುಚ್ಚಿಕೊಂಡರೂ ಕೂಡ 35-40 ಲಕ್ಷ ಮತದಾರರಿಗೆ ಅವರ ಮತಗಳನ್ನು ಕೊಳ್ಳುವ ಸರ್ಕಾರದ ಹಣವನ್ನು, ಸಾಲ ಮಾಡಿದ ಹಣವನ್ನು ನೀಡುವುದೇ ಆಗಿದೆ.
ಕೃಷಿ ಬಜೆಟ್ನಲ್ಲಿ ಕೂಲಿಕಾರರಿಗೆ ಎಡೆಯಿಲ್ಲ : ರಾಜ್ಯದಲ್ಲಿ ಕೃಷಿಯಲ್ಲಿ ತೊಡಗಿರುವ ಜನತೆಯಲ್ಲಿ ರೈತಾಪಿ ಜನತೆ ಒಂದು ಭಾಗವಾದರೆ ಕೃಷಿ ಕೂಲಿಕಾರರು ಅದರ ಅರ್ಧ ಭಾಗಕ್ಕಿಂತ ಹೆಚ್ಚು. ಕೃಷಿ ಕೂಲಿಕಾರರಲ್ಲಿ ಶೇ 60ಕ್ಕಿಂತ ಹೆಚ್ಚು ಭಾಗ ಮಹಿಳೆಯರು, ದಲಿತ, ಹಿಂದುಳಿದ ಜಾತಿಗಳ ಸಮುದಾಯವೇ ಶೇ 80ರಷ್ಟು ಕೆಲಸ ಕಡಿಮೆಯಾಗಿರುವುದರಿಂದ, ತೀವ್ರವಾಗಿ ಬಳಲಿರುವವರು ಕೃಷಿ ಕೂಲಿಕಾರರು. ಕೃಷಿ ಕೂಲಿಕಾರರೇ ಇಲ್ಲವೆಂಬುವಂತೆ ರೂಪಿಸಿರುವ ಬಜೆಟ್ ಕೃಷಿ ಬಜೆಟ್ ಹೇಗಾಗುತ್ತದೆ ? ಅವರ ಕನಿಷ್ಠ ಕೂಲಿಯ ಬಗ್ಗೆ, ಆಹಾರ, ಆರೋಗ್ಯಗಳ ಬಗ್ಗೆ ಒಂದು ಮಾತಿಲ್ಲ. ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಅದನ್ನು ಬಳಸಿ ಬಿಜೆಪಿ ಬೆಂಬಲಿತ ಕಂಟ್ರಾಕ್ಟರ್ ಗಳು ಲೂಟಿ ಹೊಡೆಯುತ್ತಿರುವ ಬಗ್ಗೆ ಅದನ್ನು ನಿಯಂತ್ರಿಸುವ ಬಗ್ಗೆ ಒಂದು ಚಕಾರವಿಲ್ಲ. ಅದರ ಕೂಲಿ ಹೆಚ್ಚಳ ಮಾಡುವ ಬಗ್ಗೆ, ರಾಜ್ಯದಲ್ಲೂ ಕೂಲಿಕಾರರಿಗೆ ಕೆಲಸ ನೀಡುವ ಬಗ್ಗೆ ಅವರ ವಲಸೆ ನಿಲ್ಲಿಸುವ ಬಗ್ಗೆ, ವಲಸೆ ಕಾಮರ್ಿಕರಿಗೆ ಆಹಾರ, ವಸತಿ, ರಕ್ಷಣೆಯ ಬಗ್ಗೆ ಸಾಮಾನ್ಯ ಬಜೆಟ್ನಲ್ಲಿಯೂ ಒಂದೇ ಒಂದು ಇಲ್ಲ.
ಕೃಷಿ ಕೂಲಿಕಾರರ ಹೊಟ್ಟೆಯ ಮೇಲೆ ಹೊಡೆಯುವ ನೀತಿ : ಈಗ ಕೃಷಿ ಕೂಲಿಕಾರರಿಗೆ ಲಭ್ಯವಿರುವ ಕೆಲಸವೇ ಕಡಿಮೆಯಾಗುತ್ತಿರುವ ಕಬ್ಬು ನಾಟಿಯಂತ್ರ, ಕಬ್ಬು ಕಟಾವು ಯಂತ್ರಗಳಿಗೆ ಶೇ 50 ರಷ್ಟು ಸಹಾಯಧನ ನೀಡಿ ಅವರ ಬದುಕನ್ನು ಕತ್ತಲೆಗೆ ದೂಡುವ ನೀತಿಯಾಢಳಾಗಿದೆ.
ಸಾವಯವ ಕೃಷಿಯ ಹೆಸರಿನಲ್ಲಿ ಕಂಪನಿ ಕೃಷಿಯನ್ನು ಪ್ರೋತ್ಸಾಹಿಸುವ ಬಜೆಟ್ :
ಸರ್ಕಾರ ಸಾವಯವ ಕೃಷಿಯ ಬಗ್ಗೆ ಬಹಳ ಮಾತನಾಡುತ್ತಿದೆ. ಮುಖ್ಯಮಂತ್ರಿಗಳೂ ತಮ್ಮ ಅಮೂಲ್ಯವೇಳೇಯನ್ನು ಅದಕ್ಕಾಗಿ ಮೀಸಲಿಡುತ್ತಿದ್ದಾರೆ. ಆದರೆ ಅವೆಲ್ಲವೂ ಹೊರ ತೋರಿಕೆಯ ಮಾತುಗಳಷ್ಟೇ ಆಗಿವೆ. ಆದರೆ ಕೃಷಿ ಬಜೆಟ್ನ ದಿಕ್ಕು ಪೂರ್ಣವಾಗಿ ಕೃಷಿಯ ಕಂಪನೀಕರಣದತ್ತ. ರೈತ ಕೃಷಿಯ ನಾಶ ಕಂಪನಿ ಕೃಷಿಯ ಬೆಳವಣಿಗೆ ಇದು ಕೃಷಿ ಬಜೆಟ್ನ ಗುರಿಯಾಗಿದೆ. ಭೂ ದಾಖಲೆಗಳ ನವೀಕರಣ ಮಾರುಕಟ್ಟೆಗಳ ಕಂಪೂಟರೀಕರಣದ ಗುರಿಯೂ ಇದೇ ಆಗಿದೆ.
ಕೃಷಿ ಸಾಲದ ಕೊರತೆಗಳು ಮತ್ತು ರೈತರ ಆತ್ಮಹತ್ಯೆಗಳು : ಬಡ್ಡಿಯ ಪ್ರಮಾಣವನ್ನು ಕೇಂದ್ರ ಸಕರ್ಾರವೂ ಇಳಿಸುತ್ತಿದೆ. ಧರ್ಮಸಿಂಗ್ ಸಕರ್ಾರದಿಂದ ಆರಂಭಿಸಿ ರಾಜ್ಯ ಸಕರ್ಾರವು ಶೇ 3ರಷ್ಟು ಬಡ್ಡಿಯ ವಿನಾಯಿತಿ ನೀಡುತ್ತಿದೆ. ಆದರೆ ರಾಜ್ಯ ಸಕರ್ಾರವೇ ಹೇಳಿದಂತೆ ರಾಜ್ಯದಲ್ಲಿ ಶೇ76 ಲಕ್ಷ ಕೃಷಿ ಕುಟುಂಬಗಳಿವೆ. ಇತ್ಯಾಧಿಗಳಲ್ಲಿ ಕೇವಲ 25-26ಲಕ್ಷ ಕುಟುಂಬಗಳಿಗೆ ಮಾತ್ರ ಕೃಷಿಯ ಸಾಂಸ್ಥಿಕ ಸಾಲದ ಕಡಿಮೆ ಬಡ್ಡಿಯ ಪ್ರಯೋಜನೆ ಸಿಗುತ್ತಿದೆ. ಉಳಿದವರ ಪಾಡಿನ ಬಗ್ಗೆ ಕೃಷಿ ಬಜೆಟ್ನಲ್ಲಿ ಚಕಾರವಿಲ್ಲ. ಖಾಸಗಿ ಲೇವಾದೇವಿಗಾರರ ಸುಳಿಯಲ್ಲಿ ಸಿಲುಕಿದ ರೈತರ ಆತ್ಮಹತ್ಯೆಗಳ ಬಗ್ಗೆ ಪ್ರಸ್ತಾಪವಿಲ್ಲ. ಖಾಸಗೀ ಲೇವಾದೇವಿಯ ವಿಪರೀತ ಬಡ್ಡಿಗಳು, ಅವರ ಕಿರುಕುಳ ತಪ್ಪಿಸುವ, ನಿಯಂತ್ರಿಸುವ ಒಂದೇ ಒಂದು ಮಾತಿಲ್ಲ. ಅದಕ್ಕೆ ಬದಲಾಗಿ ಸಹಕಾರಿ ಸಂಘಗಳ ಆರೋಗ್ಯವನ್ನು ಕೆಡಿಸುವ ವೈದ್ಯನಾಥ್ ವರದಿ ಜಾರಿ ಮಾಡಲು ಸಕರ್ಾರ ಮುಂದಾಗಿದೆ.
ಬೆಲೆ ಏರಿಕೆ ನಿಯಂತ್ರಣ, ಪಡಿತರ ವ್ಯವಸ್ಥೆ, ಪೆಟ್ರೋಲ್ ಬೆಲೆಗಳು : ಬೆಲೆ ಏರಿಕೆ ವಿಪರೀತವಾಗಿದೆ ಎಂಬ ತುಟಿಯಂಚಿನ ಮಾತುಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿನ ಕಾಳಸಂತೆಕೋರರ ಪಾತ್ರ ಅವರನ್ನು ನಿಯಂತ್ರಿಸುವ ಕೆಲಸ, ಒಬ್ಬರಿಗೆ ನಾಲ್ಕೇ ಕೆ.ಜಿ.ಎನ್ನು ಯೂನಿಟ್ ಪದ್ದತಿ, ಸಾರ್ವತ್ರಿಕ ಪಡಿತರ ವ್ಯವಸ್ಥೆ, ಎಪಿಎಲ್ ಕಾಡರ್ುದಾರರಿಗೆ ಆಹಾರ ಧಾನ್ಯಗಳು, ಇವುಗಳ ಬಗ್ಗೆ ಚಕಾರವಿಲ್ಲ ಬೆಲೆ ಏರಿಕೆಗೆ ತಕ್ಕನಾಗಿ ಕನಿಷ್ಠ ಕೂಲಿ ಏರಿಸುವ ಬಗ್ಗೆ 2 ವರ್ಷಗಳಿಂದ ಕಾಮರ್ಿಕರು ಲಾಠಿಯೇಟು ಎದುರಿಸಿ ಹಲವಾರು ಹೋರಾಟ ಮಾಡಿದರೂ ಅದರ ಬಗ್ಗೆ ಚಕಾರವಿಲ್ಲ. ಸಕರ್ಾರಿ ನೌಕರರು, ಖಾಸಗಿ ಕಂಪನಿಗಳ ನೌಕರರ ವೇತನ ಏರಿಕೆ ಬಗ್ಗೆ, ಒಂದೇ ಶಬ್ದವಿಲ್ಲ ಆದರೆ ಸಚಿವ ಸಂಪುಟ ಬಂಡವಾಳಶಾಹಿ ಮಾಲಿಕರ ಒವರಟೈಂ ಹೆಚ್ಚಿಸುವ ನೀತಿಯನ್ನು ದಿಢೀರ್ ಎಂದು ಒಪ್ಪಿಬಿಟ್ಟಿದೆ.
ಕೃಷಿ ಸಾಲದ ಕೊರತೆಗಳು ಮತ್ತು ರೈತರ ಆತ್ಮಹತ್ಯೆಗಳು : ಬಡ್ಡಿಯ ಪ್ರಮಾಣವನ್ನು ಕೇಂದ್ರ ಸಕರ್ಾರವೂ ಇಳಿಸುತ್ತಿದೆ. ಧರ್ಮಸಿಂಗ್ ಸಕರ್ಾರದಿಂದ ಆರಂಭಿಸಿ ರಾಜ್ಯ ಸಕರ್ಾರವು ಶೇ 3ರಷ್ಟು ಬಡ್ಡಿಯ ವಿನಾಯಿತಿ ನೀಡುತ್ತಿದೆ. ಆದರೆ ರಾಜ್ಯ ಸಕರ್ಾರವೇ ಹೇಳಿದಂತೆ ರಾಜ್ಯದಲ್ಲಿ ಶೇ76 ಲಕ್ಷ ಕೃಷಿ ಕುಟುಂಬಗಳಿವೆ. ಇತ್ಯಾಧಿಗಳಲ್ಲಿ ಕೇವಲ 25-26ಲಕ್ಷ ಕುಟುಂಬಗಳಿಗೆ ಮಾತ್ರ ಕೃಷಿಯ ಸಾಂಸ್ಥಿಕ ಸಾಲದ ಕಡಿಮೆ ಬಡ್ಡಿಯ ಪ್ರಯೋಜನೆ ಸಿಗುತ್ತಿದೆ. ಉಳಿದವರ ಪಾಡಿನ ಬಗ್ಗೆ ಕೃಷಿ ಬಜೆಟ್ನಲ್ಲಿ ಚಕಾರವಿಲ್ಲ. ಖಾಸಗಿ ಲೇವಾದೇವಿಗಾರರ ಸುಳಿಯಲ್ಲಿ ಸಿಲುಕಿದ ರೈತರ ಆತ್ಮಹತ್ಯೆಗಳ ಬಗ್ಗೆ ಪ್ರಸ್ತಾಪವಿಲ್ಲ. ಖಾಸಗೀ ಲೇವಾದೇವಿಯ ವಿಪರೀತ ಬಡ್ಡಿಗಳು, ಅವರ ಕಿರುಕುಳ ತಪ್ಪಿಸುವ, ನಿಯಂತ್ರಿಸುವ ಒಂದೇ ಒಂದು ಮಾತಿಲ್ಲ. ಅದಕ್ಕೆ ಬದಲಾಗಿ ಸಹಕಾರಿ ಸಂಘಗಳ ಆರೋಗ್ಯವನ್ನು ಕೆಡಿಸುವ ವೈದ್ಯನಾಥ್ ವರದಿ ಜಾರಿ ಮಾಡಲು ಸಕರ್ಾರ ಮುಂದಾಗಿದೆ.
ಬೆಲೆ ಏರಿಕೆ ನಿಯಂತ್ರಣ, ಪಡಿತರ ವ್ಯವಸ್ಥೆ, ಪೆಟ್ರೋಲ್ ಬೆಲೆಗಳು : ಬೆಲೆ ಏರಿಕೆ ವಿಪರೀತವಾಗಿದೆ ಎಂಬ ತುಟಿಯಂಚಿನ ಮಾತುಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿನ ಕಾಳಸಂತೆಕೋರರ ಪಾತ್ರ ಅವರನ್ನು ನಿಯಂತ್ರಿಸುವ ಕೆಲಸ, ಒಬ್ಬರಿಗೆ ನಾಲ್ಕೇ ಕೆ.ಜಿ.ಎನ್ನು ಯೂನಿಟ್ ಪದ್ದತಿ, ಸಾರ್ವತ್ರಿಕ ಪಡಿತರ ವ್ಯವಸ್ಥೆ, ಎಪಿಎಲ್ ಕಾಡರ್ುದಾರರಿಗೆ ಆಹಾರ ಧಾನ್ಯಗಳು, ಇವುಗಳ ಬಗ್ಗೆ ಚಕಾರವಿಲ್ಲ ಬೆಲೆ ಏರಿಕೆಗೆ ತಕ್ಕನಾಗಿ ಕನಿಷ್ಠ ಕೂಲಿ ಏರಿಸುವ ಬಗ್ಗೆ 2 ವರ್ಷಗಳಿಂದ ಕಾಮರ್ಿಕರು ಲಾಠಿಯೇಟು ಎದುರಿಸಿ ಹಲವಾರು ಹೋರಾಟ ಮಾಡಿದರೂ ಅದರ ಬಗ್ಗೆ ಚಕಾರವಿಲ್ಲ. ಸಕರ್ಾರಿ ನೌಕರರು, ಖಾಸಗಿ ಕಂಪನಿಗಳ ನೌಕರರ ವೇತನ ಏರಿಕೆ ಬಗ್ಗೆ, ಒಂದೇ ಶಬ್ದವಿಲ್ಲ ಆದರೆ ಸಚಿವ ಸಂಪುಟ ಬಂಡವಾಳಶಾಹಿ ಮಾಲಿಕರ ಒವರಟೈಂ ಹೆಚ್ಚಿಸುವ ನೀತಿಯನ್ನು ದಿಢೀರ್ ಎಂದು ಒಪ್ಪಿಬಿಟ್ಟಿದೆ.
ಖಾಸಗೀ ಸಹಭಾಗಿತ್ವ : ರಾಜ್ಯ ಸಕರ್ಾರ ಬೃಹತ್ಬಜೆಟ್ ಎಂದು ಜಾಗಟಿ ಬಾರಿಸುತ್ತಿದ್ದರೂ ಕೂಡ ಪ್ರತಿಯೊಂದು ವಿಷಯದಲ್ಲಿಯೂ ಖಾಸಗೀ ಸಹಭಾಗಿತ್ವಕ್ಕೆ ಮುಂದಾಗಿದೆ. ರಾಜ್ಯದ ಜನತೆ ಖಾಸಗಿ ಬಂಡವಾಳಿಗರ ಲಾಭದಾಹಕ್ಕೆ ತುತ್ತಾಗಿ ಬಳಲುವುದು ಬಿಜೆಪಿಯ ನೀತಿಯ ಅವಶ್ಯವಾದ ಭಾಗವಾಗಿದೆ. ವಿದ್ಯುತ್ ಉತ್ಪಾದನೆ, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ಜೊತೆ ತೋಟಗಾರಿಕೆ ಕ್ಷೇತ್ರಗಳು ಪಶುಸಂಗೋಪನಾ ಕ್ಷೇತ್ರಗಳ ಭೂಮಿ, ಆಸ್ಪತ್ರೆಗಳು ಇತ್ಯಾದಿಗಳನ್ನು ಖಾಸಗಿಯವರ ಕೈಗೊಪ್ಪಿಸುವ ಹುನ್ನಾರ ಬಜೆಟ್ನಲ್ಲಿ ಅಡಗಿದೆ.
ಪದೇ ಪದೇ ಪರಿಣತ ಸಂಸ್ಥೆಗಳ ಎಂಬ ಮಾತು ಬಜೆಟ್ನಲ್ಲಿ ಬಂದಿದೆ. ಇದರಲ್ಲಿ ಕೆಲವು ಸಾರ್ವಜನಿಕ ಸಂಶೋಧನ ಸಂಸ್ಥೆಗಳಿಗೆ ಬಹುದಾದರೂ ಬಹುಪಾಲು ವಿದೇಶಿ ಖಾಸಗಿ ಕನ್ಸಲ್ಟೆಂಟುಗಳು ಮತ್ತು ಖಾಸಗಿ ಕಂಪನಿಗಳನ್ನು ಪ್ರೋತ್ಸಾಹಿಸುವ ಐ.ಐ.ಎಂ.ನಂತಹ ಸಂಸ್ಥೆಗಳು ಎನ್ನುವ ಅನುಮಾನಕ್ಕೆ ಎಡೆ ಮಾಡಿದೆ.
ಭ್ರಷ್ಟಾಚಾರದ ಬಗ್ಗೆ ಸೊಲ್ಲೆತ್ತದ ಬಜೆಟ್ : ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಗರಣಗಳ ಮೇಲೆ ಹಗರಣಗಳು ಹೊರಬೀಳುತ್ತಿವೆ. ಅಧಿಕಾರಿಗಳ ಮೇಲೆ ಲೋಕಾಯುಕ್ತರು ಅನೇಕ ಧಾಳಿಗಳನ್ನು ಮಾಡಿದ್ದಾರೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ 78 ಸಾವಿರ ಕೋಟಿ ರೂಗಳ ಭ್ರಷ್ಟಾಚಾರ, ಉದ್ಯೋಗ ಖಾತರಿ ಯೋಜನೆಗಳ ಭ್ರಷ್ಟಾಚಾರ, ಒಟ್ಟಿನಲಿ ರಾಜ್ಯ ಬಜೆಟ್ ಜನಪ್ರಿಯ ಬಜೆಟ್, ಕೃಷಿ ಬಜೆಟ್ನ ರೂಪದಲ್ಲಿ ಭೂದಾಹಿಗಳ, ಖಾಸಗೀ ಕಂಪನಿಗಳ ಪ್ರೋತ್ಸಾಹಿಸುವ ಬಜೆಟ್ ಆಗಿದೆ. ಸಂಘ ಪರಿವಾರದ ಸಂಸ್ಥೆಗಳಿಗೆ ಭೂಮಿ ಹಾಗೂ ಹಣವನ್ನು ವರ್ಗಾಯಿಸುವ ಹುನ್ನಾರವನ್ನು ಹೊಂದಿರುವ, ಭ್ರಷ್ಟಾಚಾರದ ಬಗ್ಗೆ ಸೊಲ್ಲೆತ್ತದ, ಅದನ್ನು ಪ್ರೋತ್ಸಾಹಿಸುವ ಬಜೆಟ್ ಆಗಿದೆ.
ಇವು ದಿನನಿತ್ಯದ ಮಾತಾಗಿದೆ. ಇದರಿಂದಾಗಿ ಬಜೆಟ್ನ ಯೋಜನೆಗಳ ಸಣ್ಣ ಪಾಲೂ ಜನರಿಗೆ ಮುಟ್ಟುತ್ತಿಲ್ಲ. ನೀರಾವರಿ ಯೋಜನೆಗಳ ಭ್ರಷ್ಟಾಚಾರದ ಫಲವಾಗಿ ಕಾಲುವೆಗಳ ಕೆಟ್ಟು ತಿಂಗಳು ಗಟ್ಟಲೇ ರೈತರು ಪರದಾಡಿದ್ದಾರೆ. ಹೀಗಿರುವಾಗ ನೀರಾವರಿ ಹಾಗೂ ವಿದ್ಯುತ್ಗೆ ಹೆಚ್ಚು ಹಣ ನೀಡಿರುವುದು ಸ್ವಾಗತಾರ್ಹವಾದರೂ ಅದರಲ್ಲಿ ಇನ್ನಿತರ ಯೋಜನೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತೇ ಇಲ್ಲ. ಈ ಮೌನವೇ ಬಜೆಟ್ನ ನೀತಿಯನ್ನು ಗಟ್ಟಿಯಾಗಿ ಹೇಳುತ್ತಿದೆ. ಇದಲ್ಲದೇ ಬಜೆಟ್ನ ಅನೇಕ ಯೋಜನೆಗಳ ಭ್ರಷ್ಟಾಚಾರಕ್ಕೆ ಹೇಳಿ ಮಾಡಿಸಿದಂತಿವೆ. ಇದರಿಂದಾಗಿ ಈ ಬಜೆಟ್ನ ಕೆಲ ಯೋಜನೆಗಳ ಪ್ರಯೋಜನವೂ ಜನರಿಗೆ ದಕ್ಕುವುದು ಅನುಮಾನಾಸ್ಪದವಾಗಿದೆ.
(ಜಿ.ಎನ್.ನಾಗರಾಜ್)
ಕಾರ್ಯದರ್ಶಿ ಮಂಡಳಿ ಸದಸ್ಯರು
(ಎಸ್.ವೈ.ಗುರುಶಾಂತ್)
ಕಾರ್ಯದರ್ಶಿ ಮಂಡಳಿ ಸದಸ್ಯರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ