ಇವರಿಗೆ
ಮಾನ್ಯ ಜಿಲ್ಲಾಧಿಕಾರಿಗಳು
ಬೆಂಗಳೂರು ನಗರ ಜಿಲ್ಲೆ.
ಮಾನ್ಯ ಜಿಲ್ಲಾಧಿಕಾರಿಗಳು
ಬೆಂಗಳೂರು ನಗರ ಜಿಲ್ಲೆ.
ಮನವಿ
ಕೇಂದ್ರ - ರಾಜ್ಯ ಸರ್ಕಾರಗಳು ದಲಿತರ ಅಭಿವೃದ್ಧಿಗಾಗಿ ಕೋಟಿ ಕೋಟಿ ಹಣವನ್ನು ಪರಿಶೀಲಿಸಿದಾಗ ಈ ಹಣ ದಲಿತ ಅಭಿವೃದ್ಧಿ ಸಿಗದೆ ದುರುಪಯೋಗವಾಗಿರುವುದು ಕಂಡುಬರುತ್ತಿದೆ ವಿನಹ ದಲಿತ ಅಭಿವೃದ್ಧಿ ಸಾಧನೆಯಾಗಿರುವುದಿಲ್ಲ. ದಲಿತರು ಇಂದಿಗೂ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದು. ಕೆಳಸ್ತರದ ಜೀವನ ನಡೆಸುತ್ತಿದ್ದಾರೆ. ಜಾತಿ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ದೌರ್ಜನ್ಯಗಳು ಹೆಚ್ಚುತ್ತಿವೆ. ಪ್ರತಿ 20 ನಿಮಿಷಗಳಿಗೊಂದರಂತೆ ಜಾತಿ, ಅಸ್ಪ್ರಶ್ಯತೆ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿವೆ. ಶೇ.16.2ರಷ್ಟು ದಲಿತರಿದ್ದಾರೆ. ಶೇ. 80ರಷ್ಟು ದಲಿತರು ಕೃಷಿಕೂಲಿಕಾರರಾಗಿದ್ದಾರೆ, ಬಡವರಾಗಿದ್ದಾರೆ. ಒಟ್ಟು ಮಾನವ ಅಭಿವೃದ್ಧಿ ಸ್ಯೂಚ್ಯಾಂಕ ಶೇ.0.575 ಆಗಿದೆ ಜನಸಂಖ್ಯೆ ಅನುಗುಣವಾಗಿ ನೀಡಬೇಕಾದ ಕೇಂದ್ರ - ರಾಜ್ಯ ಸರ್ಕಾರಗಳ ಬಜೆಟ್ ಅನುದಾನವು ತೀವ್ರತರವಾದ ತಾರತಮ್ಯದಿಂದ ಕೂಡಿದೆ.
2011-12 ಒಟ್ಟು ಯೋಜನಾ ಬಜೆಟ್ ಕೇಂದ್ರ ಸರ್ಕಾರದ್ದು 3,40,225 ಕೋಟಿಯಷ್ಟು. ಇದರಲ್ಲಿ 30,551 ಕೋಟಿ ಮಾತ್ರ ಎಸ್.ಸಿ. - ಎಸ್ ಟಿ. ಗೆ ಹಂಚಿಕೆಯಾಗಿದೆ. ಜನಸಂಖ್ಯೆ ರೀತಿ (ಶೇ.16.6) ಇನ್ನೂ ಸುಮಾರು 24 ಸಾವಿರ ಕೋಟಿ ಹಣ ನಿರಾಕರಿಸಲಾಗಿದೆ. 62 ಕೇಂದ್ರ ಮಂತ್ರಿಗಳಲ್ಲಿ ೧೧ ಇಲಾಖೆಗಳು ಮಾತ್ರ ಎಸ್.ಸಿ.ಪಿ. ಗೆ ಹಣ ನೀಡಿವೆ. ಕರ್ನಾಟಕ ರಾಜ್ಯ ಸರ್ಕಾರ 1994-95 ರಿಂದ 2008-09ರ ಅವಧಿಯಲ್ಲಿ ನಿಗದಿಸಿದ ಒಟ್ಟು ಮೊತ್ತವು 13,23,164.08 ಲಕ್ಷಗಳಾದರೆ ಖರ್ಚು ಮಾಡಿದ ಹಣ ಕೇವಲ 09,42,328.44 ಲಕ್ಷಗಳಾಗಿವೆ. ನಿಗದಿಸಿದ ಹಣದಲ್ಲಿ 3.80.835 ಲಕ್ಷ ಖರ್ಚು ಮಾಡಿಲ್ಲ. ರಾಜ್ಯ ಸರ್ಕಾರ ಎಸ್.ಸಿ. - ಎಸ್ ಟಿ. ಜನಸಂಖ್ಯೆಗೆ ಅನುಗುಣವಾಗಿ ಶೇ. ೨೩.65ರಂತೆ ನಿಗದಿಸಬೇಕು. ಆದರೆ ಶೇ. ೧೮ ಮಾತ್ರ ನಿಗದಿಸುತ್ತಿದೆ. ಬಿಡುಗಡೆ ಮಾಡುವುದು ಕಡಿಮೆ ಮತ್ತು ಖಚರ್ು ಮಾಡುವುದು ಇನ್ನೂ ಕಡಿಮೆಯಾಗಿದೆ. ಅದೇ ರೀತಿಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ 74.35 ಕೋಟಿ ಕೇಂದ್ರ ಸರ್ಕಾರ ಹಣವನ್ನೂ ದುರ್ಬಳಕೆ ಮಾಡಿದೆ. ಈ ರೀತಿಯ ಬಜೆಟ್ ಹಣದಲ್ಲಿ ಕಡಿತ, ಹಲವು ಮಂತ್ರಿಗಳ ಇಲಾಖೆಗಳು ವಿಶೇಷ ಘಟಕ ಯೋಜನೆ (ಎಸ್.ಸಿ.ಪಿ.) ಹಾಗೂ ಬುಡಕಟ್ಟು ಉಪಯೋಜನೆ(ಟಿ.ಎಸ್.ಪಿ) ಗೆ ಹಣ ನೀಡದಿರುವುದು, ದುರ್ಬಳಕೆ ಮಾಡುತ್ತಿರುವುದು ಮತ್ತು ಬಿಡುಗಡೆ ಮಾಡಲಾದ ಹಣವನ್ನೂ ಸಮರ್ಪಕವಾಗಿ ಖರ್ಚು ಮಾಡದೆ ಉಳಿತಾಯ ಮಾಡುತ್ತಿರುವುದು ಎಲ್ಲವೂ ದಲಿತ ವಿರೋಧಿಯಾಗಿದ್ದು, ಇವುಗಳನ್ನು ಸರಿಪಡಿಸಬೇಕಾಗಿದೆ. ಆದ್ದರಿಂದ ದಲಿತರ ಬಜೆಟ್ ಹಣದ ಪರಿಣಾಮಕಾರಿ ಜಾರಿಗಾಗಿ ಕೇಂದ್ರ ಶಾಸನದ ಅಗತ್ಯವಿದೆ. ಈ ನೀತಿಯಲ್ಲಿ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡುವುದು, ಅದರ ಪರಿಣಾಮಕಾರಿ ಜಾರಿಗಾಗಿ ಕೇಂದ್ರ ಶಾಸನ ರೂಪಿಸುವುದು ಸೇರಿದಂತೆ ದಲಿತರ ಏಳ್ಗೆಗಾಗಿ ಕೆಳಕಂಡ ಹಕ್ಕೊತ್ತಾಯಗಳಿಗಾಗಿ ರಾಜ್ಯದಾದ್ಯಂತ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮಾಡುತ್ತಿದೆ.
ಹಕ್ಕೊತ್ತಾಯಗಳು
1. ದಲಿತರ ಎಸ್.ಸಿ.ಪಿ ಯೋಜನೆಗಳ ಸೂಕ್ತ ಅನುಷ್ಠಾನಕ್ಕಾಗಿ, 'ಒಂದು ಕೇಂದ್ರ ಶಾಸನ'ವನ್ನು ಜಾರಿಗೆ ತರಬೇಕು. ದಲಿತರ ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಪಿ.ಗೆ ಹಣ ಹಂಚಿಕೆ ಆಗಬೇಕು ಹಾಗೂ ಉದ್ದೇಶಗಳ ಈಡೇರಿಕೆಗಾಗಿ ಮಾತ್ರ ಈ ಹಣ ಬಳಸಬೇಕು.
2. ಎಸ್.ಸಿ.ಪಿ ಯೋಜನೆಗಳು ಸರ್ಕಾರದ 'ವಾರ್ಷಿಕ ಹಾಗೂ ಪಂಚವಾರ್ಷಿಕ ಯೋಜನೆಗಳ ಸಮಗ್ರ ಭಾಗವಾಗಿರಬೇಕಾಗಿದ್ದು ಈ ಹಂಚಿಕೆಯ ಮೊತ್ತವನ್ನು ಪರಿವರ್ತನೆಗೊಳಿಸುವುದು ಅಥವಾ ಅಳಿದು (ಲ್ಯಾಪ್ಸ್) ಹೋಗದಂತೆ ತಡೆಯಬೇಕು. ಈಗಿರುವ ಮಾರ್ಗಸೂಚಿಗಳಿಗೆ ಸೂಕ್ತ ತಿದ್ದುಪಡಿ ತರಬೇಕು. ಈ ಯೋಜನೆಯ ಮೊತ್ತವು ದಲಿತರಿಗೆ ಮತ್ತು ಇವರ ಕುಟುಂಬಗಳಿಗೆ, ಹಾಗೂ ಇವರು ವಾಸಿಸುವ ಪ್ರದೇಶಗಳಿಗೆ ತಲುಪುವಂತೆ ನಿಗಾವಹಿಸಬೇಕು.
3. ಎಸ್.ಸಿ.ಪಿ ಯೋಜನೆಯ ಅನುಷ್ಠಾನದ ಪರಿಶೀಲನೆಗಾಗಿ ಒಂದು ಶ್ವೇತ ಪತ್ರ ಹೊರಡಿಸಬೇಕು.
4. ಎಸ್.ಸಿ-ಎಸ್.ಟಿ.ಗಳಿಗೇ ಸಂಬಂಧಪಟ್ಟ ವಿಷಯಗಳನ್ನು-ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿಯೇ ಒಂದು ವಿಶೇಷವಾದ ವಿಧಾನಸಭೆ ಹಾಗೂ ಲೋಕಸಭಾ ಅಧಿವೇಶನ ಕರೆಯಬೇಕು.
5. ಬಹು ದೊಡ್ಡ ಸಂಖ್ಯೆಯಲ್ಲಿರುವ ಭೂರಹಿತ ದಲಿತರಿಗೆ ಭೂಮಿಯನ್ನು ಹಂಚಬೇಕು.
6. ಎಲ್ಲಾ ಮಂತ್ರಿಗಳ ಇಲಾಖೆಗಳಲ್ಲಿಯೂ ಹಾಗೂ ವಿಭಾಗಗಳಲ್ಲಿಯೂ, ಎಸ್.ಸಿ.ಪಿ. ಬಜೆಟ್ನ ಪ್ರತ್ಯೇಕ ತಲೆಬರಹದಡಿಯಲ್ಲಿ ಲೆಕ್ಕವಿಡಬೇಕು.
7. ನೋಡಲ್ ಪ್ರತಿನಿಧಿಯನ್ನು ಎಲ್ಲ ಇಲಾಖೆಗಳಲ್ಲಿಯೂ ಸ್ಥಾಪಿಸಬೇಕು. ಮ್ಯಾಜಿಸ್ಟ್ರೇಟ್ಗೆ ಸಮಾನವಾದ ಅಧಿಕಾರವನ್ನು ಕೊಟ್ಟು ಎಲ್ಲಾ ಜಿಲ್ಲಾ ಮಟ್ಟದಲ್ಲಿಯೂ ವಿಶೇಷ ಅಧಿಕಾರಿಗಳನ್ನು ಎಸ್.ಸಿ.ಎಸ್.ಪಿ ಯೋಜನೆಯ ಪರಿಣಾಮಕಾರಿ ಪರಿಶೀಲನೆಗೆ ನೇಮಿಸಬೇಕು.
8. ದಲಿತರ ಹಸಿವನ್ನು ನೀಗಿಸಲು ಎಲ್ಲರಿಗೂ ಅಂತ್ಯೋದಯ ಕಾರ್ಡುಗಳನ್ನು ನೀಡಬೇಕು. ಇಲ್ಲವೇ ದಲಿತರನ್ನೂ ಆಹಾರ ಭದ್ರತೆ ಕಾಯ್ದೆಗೆ ಒಳಪಡಿಸಬೇಕು.
9. ಪ್ರತಿ ವರ್ಷ ಸಾಮಾಜಿಕ ಆಡಿಟಿಂಗ್ ನಡೆಸಬೇಕು. ಒಂದು 'ತೊಂದರೆ ನಿವಾರಣಾ ಕೇಂದ್ರ' ರಚಿಸಿ, ಮೂರು ತಿಂಗಳೊಳಗೆ 'ದೂರು'ಗಳ ವಿಲೇವಾರಿಯಾಗುವಂತೆ ಮಾಡಬೇಕು.
10. ಯೋಜನಾ ಆಯೋಗದ ಅಡಿಯಲ್ಲಿ, ಸಾಮಾಜಿಕ ನ್ಯಾಯ ವಿಭಾಗವನ್ನು ರಚಿಸಬೇಕು.
11. ದೇವದಾಸಿ ಮಹಿಳೆಯರಿಗೆ ಮಾಸಿಕ ಸಹಾಯಧನವನ್ನು 1000ಕ್ಕೆ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರ ಹೆಣ್ಣು ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಗಳಿಗೆ ಸೇರಿಸಿಕೊಳ್ಳಬೇಕು, ದೇವದಾಸಿಯರ ನಡುವೆ ಕಾರ್ಯನಿರ್ವಹಿಸುವ ಸ್ವಯಂ ಸೇವಕರಿಗೆ ಕನಿಷ್ಠ 3000 ಮಾಸಿಕ ಗೌರವಧನ ನೀಡುವುದರ ಜೊತೆಗೆ ಪ್ರಯಾಣ ಹಾಗೂ ದಿನಭತ್ಯೆ ನೀಡಬೇಕು. ಶೇ.75 ಸಬ್ಸಿಡಿ ಇರುವ ಮತ್ತು ಶೇ25ಕ್ಕೆ ಬಡ್ಡಿ ಇರದೆ ತಲಾ 50 ಸಾವಿರ ರೂ.ಗಳ ಸಾಲ ನೀಡಬೇಕು.
12. ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ತುಂಬಬೇಕು. ಹೆಚ್ಚಿನ ಇಲಾಖೆಗಳಲ್ಲಿ ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಖಾಸಗೀ ವಲಯದಲ್ಲಿ ಮೀಸಲಾತಿ ಜಾರಿಯಾಗಬೇಕು.
13. ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸಬೇಕು. ಮಲ ಹೊರುವ ಪದ್ಧತಿ ರದ್ದುಗೊಳಿಸಬೇಕು. ಮರಣ ಹೊಂದಿದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು. ಹಾಗೂ ಅವರ ಕುಟುಂಬ ಸದಸ್ಯರಿಗೆ ತಕ್ಷಣ ಸರ್ಕಾರಿ ನೌಕರಿ ನೀಡಬೇಕು.
14. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೇರಳ ಸರ್ಕಾರ ನೀಡುವಂತೆ ಪ್ರತೀ ತಿಂಗಳು ರೂ. 1600/- ಆಹಾರ ಭತ್ಯೆ ಮತ್ತು ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ