ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಲಿದೆ ಎಂದು ರಾಜ್ಯ ಸರಕಾರಕ್ಕೆ 7 ತಿಂಗಳ ಹಿಂದೆಯೇ ಗೊತ್ತಾಗಿತ್ತು. ಅಕ್ಟೋಬರ್ 4ರಿಂದ ನವೆಂಬರ್ 4ರವರೆಗೆ 4 ಹಂತಗಳಲ್ಲಿ 99 ತಾಲ್ಲೂಕುಗಳಲ್ಲಿ ಬರಗಾಲವಿದೆ ಎಂದು ಸರಕಾರ ಘೋಷಿಸಿತ್ತು. ಫೆಬ್ರುವರಿ 2ನೇ ತಾರೀಖಿನಂದು ನಡೆಸಿದ ಸಮೀಕ್ಷೆಯಲ್ಲಿ ಇನ್ನೂ 24 ತಾಲ್ಲೂಕುಗಳು ಬರಗಾಲದ ಪಟ್ಟಿಗೆ ಸೇರಿದ್ದು ಒಟ್ಟು 123 ತಾಲ್ಲೂಕುಗಳಲ್ಲಿ ತೀವ್ರ ಬರಗಾಲವಿದೆ ಎಂದು ವರದಿ ನೀಡಲಾಯಿತು.
ಮುಖ್ಯಮಂತ್ರಿಗಳು ವಿಧಾನ ಸಭೆಯಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ 55,90,000 ಎಕರೆ ಕೃಷಿ ಬೆಳೆ ಖಾರೀಫ್ ಸೀಸನ್ನಲ್ಲಿ ಮತ್ತು 30,28,000 ಎಕರೆ ಪ್ರದೇಶದ ಬೆಳೆ ರಾಬಿ ಸೀಸನ್ನಲ್ಲಿ ನಷ್ಟವಾಗಿದೆ, ಇದಲ್ಲದೆ ಕುಡಿಯುವ ನೀರು, ಜಾನುವಾರುಗಳಿಗೆ ನೀರು, ಮೇವು ಪೂರೈಸಬೇಕಾಗಿದೆ ಎಂದು ಹೇಳಿದರು. ಆದರೆ ಇದನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಲು ಸಕರ್ಾರ ವಿಫಲವಾಗಿದೆ. ಬಿಜೆಪಿಯಲ್ಲಿನ ಒಳ ಜಗಳ, ಹಗರಣ-ಅಕ್ರಮಗಳಿಂದಾಗಿ, ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಸ್ವಲ್ಪ ಪ್ರಮಾಣದ ನೀರು ಕೊಡಲಾಗುತ್ತಿದೆ. ಖಾಸಗಿ ನೀರಿನ ಮಾರಾಟಗಾರರ ಜಾಲವು ಜನರನ್ನು ಲೂಟಿ ಮಾಡುತ್ತಿದೆ. ಹಲವು ವಾಡರ್್ಗಳಲ್ಲಿ ಜನಪ್ರತಿನಿಧಿಗಳೇ ಕಾಪರ್ೊರೇಷನ್ ನೀರನ್ನು ಮಾರಾಟ ಮಾಡಿ ಹಣ ಮಾಡುತ್ತಿರುವ ಬಗ್ಗೆ ಪತ್ರಿಕೆಗಳು ವರದಿ ಮಾಡಿವೆ. ಬಿಬಿಎಂಪಿಯ ಬಿಜೆಪಿ ಆಡಳಿತವಾಗಲೀ, ರಾಜ್ಯದ ಬಿಜೆಪಿ ಸಕರ್ಾರವಾಗಲೀ ಬೆಂಗಳೂರು ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಪಯರ್ಾಯದ ಬಗ್ಗೆ ಯೋಚಿಸುತ್ತಿಲ್ಲ. ಅದಕ್ಕೆ ಅಗತ್ಯವಾದ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಬದಲಿಗೆ ರಾಜ್ಯದಲ್ಲೂ ಮತ್ತು ಬಿಬಿಎಂಪಿಯಲ್ಲೂ ಜನಪ್ರತಿನಿಧಿಗಳ ಸಂಬಳಗಳನ್ನು ಮನಸ್ಸಿಗೆ ಬಂದಂತೆ ಏರಿಸಿಕೊಳ್ಳಲು ಯಾವ ಹಣಕಾಸಿನ ಸಮಸ್ಯೆಯನ್ನೂ ಇವರು ಕಾಣುತ್ತಿಲ್ಲ.
ರಾಜ್ಯದಲ್ಲಿ 4853 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಿದೆಯೆಂದು ಕಂದಾಯ ಇಲಾಖೆಯ ಆಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಆದರೆ ಈವರೆಗೆ ಟ್ಯಾಂಕರ್ಗಳ ಮೂಲಕ ನೀರು ಒದಗಿಸಿರುವುದು ಕೇವಲ 400 ಗ್ರಾಮಗಳಿಗೆ. ಕೆಲವೊಮ್ಮೆ ಬಾವಿಗಳಲ್ಲಿ ನೀರಿದ್ದರೂ, ವಿದ್ಯುತ್ ಇಲ್ಲದೆ ನೀರು ಪೂರೈಸಲಾಗುತ್ತಿಲ್ಲ. ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಲ್ಲದೆ, ಜನರು ಮಂತ್ರಿಗಳಿಗೆ ಘೇರಾವ್ ಮಾಡಿದ ವರದಿಗಳು ಬಂದಿವೆ.
ಆಡಳಿತ ಯಂತ್ರ ಚುರುಕುಗೊಳಿಸಲು ಬಹುತೇಕ ಜಿಲ್ಲೆಗಳ ಉಸ್ತುವಾರಿ ಸಚಿವರು ಪ್ರಯತ್ನವನ್ನೇ ನಡೆಸಿಲ್ಲ. ಬದಲಾಗಿ ಮೊನ್ನೆ ಮೊನ್ನೆಯವರೆಗೆ ರೆಸಾಟರ್್ ರಾಜಕೀಯದಲ್ಲೇ ಮುಳುಗಿದ್ದರು. ಕೊಪ್ಪಳ ಜಿಲ್ಲೆಯಲ್ಲಿಯಂತೂ ಉಸ್ತುವಾರಿ ಸಚಿವರೇ ಇಲ್ಲ. 'ಜನರ ಕಷ್ಟವನ್ನು ಕೇಳಲಾಗದೆ, ರೆಸಾಟರ್್ಗೆ ಬಂದಿದ್ದೇವೆ' ಎಂದು ಸಚಿವರಾದ ರೇವುನಾಯಕ್ ಬೆಳಮಗಿ ಒಪ್ಪಿಕೊಂಡಿದ್ದಾರೆ.
ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಜಿಲ್ಲಾಧಿಕಾರಿಗಳ ಖಾತೆಗೆ 182 ಕೋಟಿ ಜಮಾ ಆಗಿದ್ದು, ಇನ್ನೂ 175 ಕೋಟಿ ರೂ. ಅವರ ಬಳಿಯಲ್ಲಿದೆ. ಅಂದರೆ ಖrchu ಮಾಡಿದ್ದು ಕೇವಲ 7 ಕೋಟಿ ರೂ. ಮಾತ್ರ. ದುಂದು ವೆಚ್ಚ ಮಾಡಬಾರದು ಎಂಬುದು ಸರಿ, ಆದರೆ ಕುಡಿಯುವ ನೀರು, ಮೇವು, ಬೆಳೆ ನಷ್ಟ ಪರಿಹಾರ, ನೀಡಲು ಹಣ ಬೇಕು. ಇಲ್ಲವಾದರೆ, ಗ್ರಾಮೀಣ ಪ್ರದೇಶದ ಜನತೆ ಬದುಕುವುದಾದರೂ ಹೇಗೆ? ಜೊತೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡುವುದನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಕೆಲಸಕ್ಕಾಗಿ ಪರದಾಡುತ್ತಾ ಜನ ಗುಳೆ ಹೋಗುತ್ತಾರೆ. ಈಗಾಗಲೇ ಜನ ಗುಳೆ ಹೋಗುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ.
ಸಾಮಾನ್ಯ ಜನ ಗುಳೆ ಹೋಗುತ್ತಿದ್ದರೆ, ಸಚಿವರು, ಶಾಸಕರು ರೆಸಾಟರ್್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಅಥವಾ ಬರ ಪರಿಶೀಲನೆ ಹೆಸರಿನಲ್ಲಿ ವಿಮಾನಯಾನ, ಹೆಲಿಕಾಪ್ಟರ್ ಪ್ರಯಾಣ ಹೆಚ್ಚಾಗಿದೆ. ಮುಖ್ಯಮಂತ್ರಿಯವರಂತೂ, ರಾಜ್ಯವನ್ನು ಮಾರಲು ಕೈಗಾರಿಕಾ ಮಂತ್ರಿಗಳೊಂದಿಗೆ ಬಂಡವಾಳಗಾರರನ್ನು ಕರೆದು ತರಲು ವಿದೇಶ ಪ್ರಯಾಣಕ್ಕೆ ಸಜ್ಜಾಗಿದ್ದಾರೆ. ಅಂದರೆ ಬರ ಪರಿಹಾರಕ್ಕೆ ವ್ಯವಸ್ಥೆ ಇಲ್ಲ. ಆದರೆ ದೊಡ್ಡ ಮತ್ತು ವಿದೇಶಿ ಬಂಡವಾಳಗಾರರಿಗೆ ಡೊಗ್ಗು ಸಲಾಮು ಹಾಕಲು ಮುಖ್ಯಮಂತ್ರಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೆ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ದುಂದುವೆಚ್ಚವಾಗುತ್ತಿದೆ.
ಆದ್ದರಿಂದ ಬರ ಪರಿಹಾರ ಕಾಮಗಾರಿಗಳನ್ನು ತೀವ್ರಗೊಳಿಸಬೇಕು, ಹೆಚ್ಚು ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುವಾಗಲೇ ಮುಖ್ಯಮಂತ್ರಿಗಳು ಹಾಗೂ ಇನ್ನಿತರ ಮಂತ್ರಿಗಳು ವಿದೇಶಿ ಪ್ರವಾಸ, ಹೆಲಿಕಾಪ್ಟರ್ ಪ್ರವಾಸ ರದ್ದುಗೊಳಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಬರಗಾಲದ ಈ ಸನ್ನಿವೇಶದಲ್ಲಿ, ಅಬ್ಬರದ ಪ್ರಚಾರಕ್ಕಾಗಿ ಕೋಟ್ಯಾಂತರ ರೂಪಾಯಿ ದುಂದುವೆಚ್ಚಮಾಡುವ ಬಂಡವಾಳಗಾರರ ಸಮಾವೇಶವನ್ನು ಕೂಡ ರದ್ದುಗೊಳಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಬೆಂಗಳೂರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಜಿ.ಎಸ್.ಪರಮಶಿವಯ್ಯಮವರ ಯೋಜನೆಯಲ್ಲಿ ಪ್ರಸ್ತಾಪಿಸಿರುವ ಹಾಗೆ ಪಯರ್ಾಯಗಳ ಕುರಿತು ತುತರ್ುಕ್ರಮಕೈಗೊಳ್ಳಬೇಕು.
ಜನತೆಯ ಗಂಭೀರ ಸಮಸ್ಯೆಗಳ ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯ ಮತ್ತು ಬಿಬಿಎಂಪಿ ಆಡಳಿತದ ಜನವಿರೋಧಿ ನಿರ್ಲಕ್ಷತನದ ವಿರುದ್ಧ ಪರಿಹಾರಕ್ಕೆ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿ ಈ ಮನವಿಯನ್ನು ನೀಡಲಾಗಿದೆ.
ಲೇಬಲ್ಗಳು
- Cpim press
- Cpim
- 20th conference
- BBMP
- cpim karnataka
- govt. bjp
- press note
- Cpim Bangalore
- Left partys
- Price rice
- budget
- chickaballapura
- corruption
- karnataka state
- programs
- protest
- water
- 19th Conforence
- 28.03.2010
- 2g
- Akrama-Sakrama
- Campaign Material
- Communal valence
- Cpim candidates
- FOOD INFLATION IN INDIA
- March
- Price Rise
- User charge
- againest corruption
- aifb
- anna hajare
- attaks
- bbm
- bjp
- book
- budjet
- bwssb
- campaining
- cbi
- citu
- convention
- coroption
- district committee
- election
- govt
- hand bill
- janardana reddy
- karnataka band
- karnataka govt.
- left
- parliament
- prajavani
- press invetion
- privatization
- sriramulu
- upa-2
- water problem
- working class
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ