27.11.2007
ರಾಜ್ಯ ಸಮ್ಮಿಶ್ರ ಸರ್ಕಾರ ತಂದಿರುವ ಸಕ್ರಮ-2007 ಮತ್ತು ಇದರ ಆಧಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಹೊರಡಿಸಿರುವ ಆದೇಶವು ಅತ್ಯಂತ ಜನವಿರೋಧಿಯಾಗಿದೆ. ಸಾಮಾನ್ಯ ಜನರನ್ನು ದೋಚುವ ಕ್ರಮವಾಗಿದೆ. ಎಂದು ದಿನಾಂಕ 27.11.2007ರಂದು ಬೆಂಗಳೂರು ಮಹಾನಗರ ಪಾಲಿಕೆಯ ಕಛೇರಿಗೆ ಮುತ್ತಿಗೆ ಹಾಕಲಾಯಿತು.
ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಾಂ||ಪ್ರಕಾಶ್.ಕೆ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ||ಮೀನಾಕ್ಷಿ ಸುಂದರಂ, ಕಾಂ||ಕೆ.ಎನ್.ಉಮೇಶ್ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ||ಜಿ.ಸಿ.ಬಯ್ಯಾರೆಡ್ಡಿರವರು ಮಾತನಾಡಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಪಾಲಿಕೆಯ ಪರವಾಗಿ ಆಗಮಿಸಿದ ಸಹಾಯಕ ಆಯುಕ್ತರಾದ ಶ್ರೀರಾಂ ಪ್ರಸಾದ್ರವರಿಗೆ ಮನವಿ ಪತ್ರವನ್ನು ನೀಡಲಾಯಿತು.
ನಂತರ ಮಾತನಾಡಿದ ಶ್ರೀರಾಂ ಪ್ರಸಾದ್ರವರು ತಮ್ಮ ಮನವಿಯನ್ನು ರಾಜ್ಯ ಸರ್ಕಾರದ ವರಿಷ್ಟರಾದ ರಾಜ್ಯಪಾಲರಿಗೆ ಕಳುಹಿಸಿ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಯೋಜನೆಯು ತಕ್ಷಣದಲ್ಲೇ ತಡೆಹಿಡಿಯದಿದ್ದರೆ ಡಿಸೆಂಬರ್ 6 ರಿಂದ 14 ರವರೆಗೆ 8 ವಲಯ ಕೇಂದ್ರಗಳಲ್ಲಿ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಬಿಬಿಎಂಪಿ ಮತ್ತು ರಾಜ್ಯ ಉಸ್ತುವಾರಿ ಸರ್ಕಾರಕ್ಕೆ ಪ್ರತಿಭಟನಾ ಸ್ಥಳದಲ್ಲಿ ಎಚ್ಚರಿಕೆಯನ್ನು ನೀಡಲಾಯಿತು. ಇದೇ ರೀತಿಯಲ್ಲಿ ಮುಂದುವರೆದರೆ ತೀವ್ರತರವಾದ ಹೋರಾಟವನ್ನು ನಡೆಸಲಾಗುವುದು ಎಂದು ಸಿಪಿಐ(ಎಂ) ಪಕ್ಷವು ತಿರ್ಮಾನಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ