12.22.2007

CPI(M) ಬೆಂಗಳೂರು ಜಿಲ್ಲಾ 19ನೇ ಸಮ್ಮೇಳನ-ದೊಡ್ಡಬಳ್ಳಾಪುರ

22.12.2007
ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ


ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಬೆಂಗಳೂರು ಜಿಲ್ಲಾ 19ನೇ ಸಮ್ಮೇಳನವು 2007 ಡಿಸೆಂಬರ್ 23ರಿಂದ 25ರವರೆಗೆ 3 ದಿನಗಳ ಕಾಲ ಜಿಲ್ಲೆಯ ನೇಯ್ಗೆಯ ನಗರವಾದ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದೆ. CPI(M) ಪಕ್ಷದ 19ನೇ ಮಹಾಧಿವೇಶನವು ತಮಿಳುನಾಡಿನ ಕೊಯಮತ್ತೂರಿನಲ್ಲಿ 2008 ಮಾರ್ಚ್ 29ರಿಂದ ಏಪ್ರಿಲ್ 4 ರವರೆಗೆ ನಡೆಯುತ್ತಿದ್ದು, ಅದರ ಪೂರ್ವದಲ್ಲಿ ಮೈಸೂರಿನಲ್ಲಿ 2008 ಜನವರಿ 21 ರಿಂದ 24 ರವರೆಗೆ  19ನೇ ರಾಜ್ಯ ಸಮ್ಮೇಳನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ 19ನೇ ಜಿಲ್ಲಾ ಸಮ್ಮೇಳನವು ಅಕ(ಒ) ನ ಹಿರಿಯ ಮುಖಂಡರಾಗಿದ್ದ ಕಾಂ||ಸಿ.ರಾಮಭದ್ರಯ್ಯನವರ ವೇದಿಕೆಯಲ್ಲಿ ನಡೆಯುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಹಾಗು ಜಿಲ್ಲೆಯಲ್ಲಿ ನಡೆದಿರುವ ರಾಜಕೀಯ, ಸಾಮಾಜಿಕ ಹಾಗು ಆರ್ಥಿಕ ಬೆಳೆವಣಿಗೆಗಳ ಕುರಿತು ಚಚರ್ಿಸಿ ಮುಂದಿನ ದಿನಗಳಲ್ಲಿ ಪಕ್ಷ ಅನುಸರಿಸಬೇಕಾದ ಕ್ರಮಗಳ ಕುರಿತು ಸಮ್ಮೇಳನದಲ್ಲಿ ನಿರ್ಣಯಿಸಲಾಗುವುದು. ರಾಜ್ಯದಲ್ಲಿ ರಾಜಕೀಯ ಬೆಳೆವಣಿಗೆಗಳು ತೀವ್ರಗತಿಯಲ್ಲಿ ನಡೆದು, ಃಎಕ ಯಂತಹ ಕೋಮುವಾದಿ ಪಕ್ಷ ಅಧಿಕಾರ ಏರಿ ಮತ್ತೆ ಅಧಿಕಾರ ಹಿಡಿಯುವ ಯತ್ನ ನಡೆಸಿರುವ ಸನ್ನಿವೇಶದಲ್ಲಿ, ಜಾತ್ಯಾತೀತ ಶಕ್ತಿಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಜನಪರ ನೀತಿಗಳಿಗಾಗಿ ಹೋರಾಟ ಹಾಗು ಚಳುವಳಿ ತೀವ್ರಗೊಳಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಮ್ಮೇಳನವು ಚರ್ಚಿಸಲಿದೆ. ಬರುವ ವಿಧಾನಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚಚರ್ಿಸಿ ನಿರ್ಣಯಿಸಲಿದೆ. ಕಳೆದ ಮೂರು ವರ್ಷಗಳಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಸಾಮ್ರಾಜ್ಯಶಾಹಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳಿಂದಾಗಿ ದುಡಿಯುವ ಜನರ ಮೇಲಿನ ಧಾಳಿಗಳು ಹೆಚ್ಚುತ್ತಿವೆ. ಪರಿಣಾಮವಾಗಿ ದುಡಿಮೆಯ ಹೊರೆ ಹೆಚ್ಚುತ್ತಿದ್ದರೂ, ಆದಾಯವಂತೂ ಕುಗ್ಗುತ್ತಿದೆ. ಜಿಲ್ಲೆಯಲ್ಲಿನ ಲಕ್ಷಾಂತರ ಜನ ಅಸಂಘಟಿತ ಕಾರ್ಮಿಕರು, ತೀವ್ರ ಸಂಕಷ್ಟದಲ್ಲಿದ್ದು, ರೈತರು ಸರ್ಕಾರದ ಭೂಸ್ವಾದೀನ ಕ್ರಮಗಳಿಂದ ಭೂಮಿ ಕಳೆದುಕೊಳ್ಳುತ್ತಿದ್ದು ಒಂದೆಡೆ ನಿರ್ಗತಿಕರಾಗುತ್ತಿರುವಾಗಲೆ ಕೂಲಿಕಾರರ ಸಂಖ್ಯೆ ಹೆಚ್ಚುತ್ತಿದೆ. ದೊಡ್ಡ ಪ್ರಮಾಣದ ವಿದೇಶಿ ನೇರ ಬಂಡವಾಳ ಜಿಲ್ಲೆಗೆ ಹರಿದು ಬರುತ್ತಿದೆ ಎನ್ನುವಾಗಲೇ, ದುಡಿಮೆ ಅರಸಿ ಬರುತ್ತಿರುವ ದೈಹಿಕ ಹಾಗು ಭೌದ್ಧಿಕ ಶ್ರಮಿಕರ ಸಂಖ್ಯೆಯು ಹೇರಳವಾಗಿ ಬೆಳೆಯುತ್ತಿದೆ. ಪರಿಣಾಮವಾಗಿ ವಸತಿ, ಸಾರಿಗೆ, ನಾಗರೀಕ ಸೌಲಭ್ಯಗಳಾದ ನೀರು, ರಸ್ತೆ, ಶಿಕ್ಷಣ ಮುಂತಾದ ಪ್ರಶ್ನೆಗಳು ಸಹಾ ವ್ಯಾಪಕವಾಗಿ ಜನತೆಯನ್ನು ಭಾದಿಸುತ್ತಿವೆ. ಶ್ರೀಮಂತ-ಬಡವರ ನಡುವಿನ ಅಂತರ ತೀವ್ರವಾಗಿರುವ ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಜನತೆಯನ್ನು ಭಾದಿಸಿರುವ ವಸತಿ-ನಿವೇಶನ, ಬಾಡಿಗೆ, ಸಾರಿಗೆ-ದಟ್ಟಣೆ, ದುಡಿಮೆ, ಮೂಲಭೂತ ಸೌಕರ್ಯಗಳ ಕುರಿತು, ನಡೆಸಬೇಕಾದ ಹೋರಾಟಗಳ ಕುರಿತು ಸಹಾ ಸಮ್ಮೇಳನ ಚರ್ಚಿಸಿ ನಿರ್ಣಯಿಸಲಿದೆ.

ವಸತಿ-ನಿವೇಶನ ರಹಿತರಿಗೆ ವಸತಿ ನಿವೇಶನಕ್ಕಾಗಿ, ಬೀಡಿ, ಆಟೋ, ಮುಂತಾದ ಅಸಂಘಟಿತರಿಗೆ ವಸತಿ ಕಾಲೋನಿಗಳಿಗಾಗಿ ಹಾಗು ಅಕ್ರಮ-ಸಕ್ರಮ ಯೋಜನೆಯ ದುಬಾರಿ ಶುಲ್ಕಗಳ ವಿರುದ್ಧ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ಸಹ ಚರ್ಚಿಸಲಾಗುವುದು. ಅಂತೆಯೆ ಅಸಂಘಟಿತ ಕಾರ್ಮಿಕರ ರಾಜ್ಯವ್ಯಾಪಿ ಸಮಾನ ಕನಿಷ್ಠ ಕೂಲಿಗಾಗಿನ ಹೋರಾಟವನ್ನು ವ್ಯಾಪಕಗೊಳಿಸುವ, ಹಾಗು ಜಿಲ್ಲೆಯ ರೈತರು, ಕೂಲಿಕಾರರು, ನೇಕಾರರ ಸಮಸ್ಯೆಗಳ, ದಲಿತ ಹಾಗು ಅಲ್ಪಸಂಖ್ಯಾತರ ಸಾಮಾಜಿಕ ಪ್ರಶ್ನೆಗಳನ್ನು ಕೈಗೆತ್ತಿಕೊಂಡು ಹೋರಾಟ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು.

ಪಕ್ಷದ ಶಾಖಾ ಸಮ್ಮೇಳನ ಹಾಗು ವಲಯ ಸಮ್ಮೇಳನಗಳು ಈಗಾಗಲೇ ನಡೆದಿದ್ದು ಅವುಗಳಿಂದ ಆಯ್ಕೆಯಾಗಿ ಬರಲಿರುವ 150ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಮೂರು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದ ಆರಂಭದ ದಿನ ಸಾವಿರಾರು ಜನರ ಬೃಹತ್ ರ್ಯಾಲಿ ಬಹಿರಂಗ ಸಭೆ ನಡೆಯಲಿದೆ. ಸಭೆಯನ್ನು ಉದ್ದೇಶಿಸಿ ಆಂಧ್ರದ ಸಿಪಿಐ(ಎಂ) ಮುಖಂಡ ಕಾಂ||ಮಿರಿಯಂ ವೆಂಕಟೇಶ್ವರುಲು, ಸಿಪಿಐ(ಎಂ) ರಾಜ್ಯ ಮುಖಂಡರಾದ ಕಾಂ||ಜಿ.ಸಿ.ಬಯ್ಯಾರೆಡ್ಡಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ  ಕಾಂ||ಕೆ.ಪ್ರಕಾಶ್, ಮುಖಂಡರಾದ ಕಾಂ||ಮೀನಾಕ್ಷಿ ಸುಂದರಂ, ಕಾಂ||ಗೌರಮ್ಮ, ನಗರಸಭಾ ಸದಸ್ಯರಾದ ಕಾಂ||ಹೇಮಂತ್ರಾಜ್ ಮುಂತಾದವರು ಮಾತನಾಡಲಿದ್ದಾರೆ. ಕಾಂ||ಚಂದ್ರು ತೇಜಸ್ವಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ಸಿ.ಪಿ.ಐ.(ಎಂ) ರಾಜ್ಯ ಕಾರ್ಯದರ್ಶಿ  ಮಂಡಳಿ ಸದಸ್ಯರಾದ ಕಾಂ||ವಿ.ಜೆ.ಕೆ.ನಾಯರ್ ಉದ್ಘಾಟಿಸಲಿದ್ದಾರೆ. ಕಾಂ||ಎಸ್.ಪ್ರಸನ್ನಕುಮಾರ್ ಸಮ್ಮೇಳನದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.

ಕಾಮೆಂಟ್‌ಗಳಿಲ್ಲ: