10.01.2010

ಭೂ ಹಗರಣ - ಮುಖ್ಯಮಂತ್ರಿ ರಾಜಿನಾಮೆಗೆ ಸಿಪಿಐ(ಎಂ) ಒತ್ತಾಯ ಅಕ್ಟೋಬರ್ 6ರಂದು ರಾಜ್ಯದಾದ್ಯಂತ ಪ್ರತಿಭಟನೆ

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ವಿ.ಜೆ.ಕೆ.ನಾಯರ್ ರವರು 27-09-10ರಂದು ಈ ಕೆಳಗಿನ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

ಬೆಂಗಳೂರಿನ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಸತಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಕೂಡಲೇ ರಾಜೀನಾಮೆ ನೀಡಬೇಕೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಒತ್ತಾಯಿಸಿದೆ. ಅದೇ ಸಂದರ್ಭದಲ್ಲಿ ಇಡೀ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ಅಕ್ಟೋಬರ್ 6 - ರಾಜ್ಯದಾದ್ಯಂತ ಪ್ರತಿಭಟನೆ : ಮುಖ್ಯಮಂತ್ರಿ ಮತ್ತು ವಸತಿ ಸಚಿವರ ರಾಜಿನಾಮೆಗೆ ಒತ್ತಾಯಿಸಿ ಹಾಗೂ ಇಡೀ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಎಲ್ಲಾ ಘಟಕಗಳು ಅಕ್ಟೋಬರ್ 6ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಬೇಕೆಂದು ಸಿಪಿಐ(ಎಂ) ಕರೆ ನೀಡಿದೆ.

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ತನ್ನ ಮಕ್ಕಳಿಗೆ ಪಕ್ಷಪಾತ ತೋರಿಸಿ ಪುರಾವೆ ಸಹಿತ ಸಿಕ್ಕಿ ಬಿದ್ದಿರುವುದು ಇದೇ ಮೊದಲು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯವರು ನೀಡಿದ ಸ್ಪಷ್ಟೀಕರಣವು ತೃಪ್ತಿಕರವಾಗಿಲ್ಲ. ಭೂಸ್ವಾಧೀನ ಕಾಯ್ದೆ ಕಲಂ 48(1) ರಂತೆ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡಲು ಅವಕಾಶವಿದೆಯಾದರೂ ಇಲ್ಲಿ ಪಕ್ಷಪಾತ ತೋರಿಸಿರುವುದು ಸ್ವಂತ ಮಕ್ಕಳಿಗೆ ಅದರಲ್ಲಿ ಒಬ್ಬರು ಲೋಕಸಭಾ ಸದಸ್ಯರೂ ಆಗಿರುತ್ತಾರೆ.

ಅದೇ ರೀತಿ ವಸತಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಕೆಐಎಡಿಬಿಯಿಂದ ಪರಿಹಾರ ಹಣವನ್ನು ತನ್ನ ಮಕ್ಕಳು ಪಡೆದಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆದರೆ ಖರೀದಿಸಿದ ಜಮೀನು ಸರಕಾರಕ್ಕೆ ಸೇರಿದ್ದು ಎಂದು ತಿಳಿದಿರಲಿಲ್ಲ ಎಂದು ಹೇಳುತ್ತಾರೆ ಇದನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ.

ಆದ್ದರಿಂದ ಈ ಎರಡೂ ಹಗರಣಗಳಲ್ಲಿ ಮುಖ್ಯಮಂತ್ರಿಗಳು ಮತ್ತು ವಸತಿ ಸಚಿವರು ಪಕ್ಷಪಾತ ತೋರಿರುವುದು ಮೇಲ್ನೋಟಕ್ಕೆ ಸಾಬೀತಾಗತ್ತದೆ. ಆದ್ದರಿಂದ ಅವರಿಬ್ಬರೂ ರಾಜಿನಾಮೆ ನೀಡಲೇಬೇಕು ಹಾಗೂ ಎರಡೂ ಹಗರಣಗಳನ್ನು ಸಿಬಿಐಗೆ ಒಪ್ಪಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)
ಕರ್ನಾಟಕ ರಾಜ್ಯ ಸಮಿತಿ
ನಂ.37ಎ, 8ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು - 560086,
ದೂ: 080.23496462, ಇಮೇಲ್ : cpimkar@yahoo.com

ಕಾಮೆಂಟ್‌ಗಳಿಲ್ಲ: