ದಿ : 05.10.2010
ಅಹ್ವಾನ ಪತ್ರ
ಕೆಐಎಡಿಬಿ ಹಗರಣದಲ್ಲಿ ಭಾಗಿಯಾಗಿರುವ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ, ಹಗರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು ಮತ್ತು ಸಂಬಂಧ ಪಟ್ಟ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮತ್ತು ಜನತೆಯ ಮೂಲಭೂತ ಸೌಲಭ್ಯವನ್ನು ಒದಗಿಸದ ಹಾಗೂ ನಿರಂತರವಾಗಿ ಹಗರಣವನ್ನು ನಡೆಸುತ್ತಿರುವ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ದಯವಿಟ್ಟು ತಮ್ಮ ಪತ್ರಿಕಾ/ಛಾನಲ್ನ ವರದಿಗಾರರು ಮತ್ತು ಛಾಯಾಗ್ರಾಹಕರನ್ನು ಕಳುಹಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ವಿವರ
ದಿನಾಂಕ : 06.10.2010, ಬುಧವಾರ
ಸಮಯ : ಸಂಜೆ 04.00 ಕ್ಕೆ
ಸ್ಥಳ : ಟೌನ್ ಹಾಲ್ ಮುಂಭಾಗ, ಬೆಂಗಳೂರು.
ಸಂಪರ್ಕಕ್ಕಾಗಿ : 9448574389, 9480454096
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ